Rashmika Mandanna: ಮುಂಬೈನಲ್ಲಿ ರಶ್ಮಿಕಾ ಜೊತೆ ಇಷ್ಟೆಲ್ಲ ಕ್ಲೋಸ್​ ಆಗಿರುವ ನಟ ಯಾರು? ಫೋಟೋ ವೈರಲ್​!

‘ಗುಡ್​ ಬೈ’ ಸಿನಿಮಾ ಸಲುವಾಗಿ ರಶ್ಮಿಕಾ ಮಂದಣ್ಣ ಮುಂಬೈಗೆ ತೆರಳಿದ್ದರು. ಆ ವೇಳೆ ನಟ ಪಾವೈಲ್​ ಗುಲಾಟಿ ಜೊತೆ ಫ್ರೆಂಡ್​ಶಿಪ್​ ಬೆಳೆದಿದೆ. ಅವರಿಬ್ಬರ ಫೋಟೋಗಳು ಎಲ್ಲೆಲ್ಲೂ ಹರಿದಾಡುತ್ತಿವೆ.

Rashmika Mandanna: ಮುಂಬೈನಲ್ಲಿ ರಶ್ಮಿಕಾ ಜೊತೆ ಇಷ್ಟೆಲ್ಲ ಕ್ಲೋಸ್​ ಆಗಿರುವ ನಟ ಯಾರು? ಫೋಟೋ ವೈರಲ್​!
ರಶ್ಮಿಕಾ ಮಂದಣ್ಣ - ಪಾವೈಲ್​ ಗುಲಾಟಿ

Updated on: Apr 04, 2021 | 1:08 PM

ನಟಿ ರಶ್ಮಿಕಾ ಮಂದಣ್ಣ ಅವರ ಸಿನಿಮಾ ಪಯಣ ದಿನದಿಂದ ದಿನಕ್ಕೆ ಮೆರುಗು ಪಡೆದುಕೊಳ್ಳುತ್ತಿದೆ. ಮೊದಲು ಕನ್ನಡದಿಂದ ನಟನೆ ಆರಂಭಿಸಿದ ಅವರು ಈಗ ಬಾಲಿವುಡ್​ನಲ್ಲಿ ಹೀರೋಯಿನ್​ ಆಗಿದ್ದಾರೆ. ಅಮಿತಾಭ್​ ಬಚ್ಚನ್​, ಸಿದ್ಧಾರ್ಥ್​ ಮಲ್ಹೋತ್ರಾ ಅವರಂತಹ ಸ್ಟಾರ್​ ಕಲಾವಿದರ ಜೊತೆ ತೆರೆಹಂಚಿಕೊಳ್ಳುವ ಚಾನ್ಸ್​ ರಶ್ಮಿಕಾಗೆ ಸಿಕ್ಕಿದೆ. ಈ ನಡುವೆ ಮತ್ತೋರ್ವ ನಟನ ಜೊತೆಗೆ ಈ ಕೊಡಗಿನ ಕುವರಿ ಕಾಣಿಸಿಕೊಂಡಿದ್ದು, ಆ ಸಂದರ್ಭದ ಫೋಟೋಗಳು ವೈರಲ್​ ಆಗಿವೆ.

ರಶ್ಮಿಕಾ ಮಂದಣ್ಣ ನಟಿಸುತ್ತಿರುವ ಮೊದಲ ಬಾಲಿವುಡ್​ ಸಿನಿಮಾ ‘ಮಿಷನ್​ ಮಜ್ನು‘. ಎರಡನೇ ಸಿನಿಮಾ ‘ಗುಡ್​ ಬೈ’. ಈ ಚಿತ್ರದಲ್ಲಿ ಅವರು ಅಮಿತಾಭ್​ ಬಚ್ಚನ್​ಗೆ ಮಗಳಾಗಿ ಕಾಣಿಸಿಕೊಳ್ಳಲಿದ್ದಾರೆ. ಏ.1ರಂದು ಇದಕ್ಕೆ ಮುಹೂರ್ತ ನೆರವೇರಿದೆ. ಈ ಸಲುವಾಗಿ ರಶ್ಮಿಕಾ ಮುಂಬೈಗೆ ತೆರಳಿದ್ದರು. ಆ ವೇಳೆ ನಟ ಪಾವೈಲ್​​ ಗುಲಾಟಿ ಜೊತೆ ಫ್ರೆಂಡ್​ಶಿಪ್​ ಬೆಳೆದಿದೆ. ಇಬರೂ ಜೊತೆಯಾಗಿ ಮಾಧ್ಯಮದ ಕ್ಯಾಮರಾಗಳಿಗೆ ಪೋಸ್​ ನೀಡಿದ್ದಾರೆ.

ಈ ಫೋಟೋಗಳು ವೈರಲ್​ ಆಗುತ್ತಿದ್ದಂತೆಯೇ ರಶ್ಮಿಕಾ ಅಭಿಮಾನಿಗಳಿಗೆ ಪಾವೈಲ್​​ ಗುಲಾಟಿ ಬಗ್ಗೆ ತಿಳಿದುಕೊಳ್ಳುವ ಹಂಬಲ ಹೆಚ್ಚಾಗುವುದು ಸಹಜ. ‘ಗುಡ್​ ಬೈ’ ಸಿನಿಮಾದಲ್ಲಿ ಪವೈಲ್​ ಮತ್ತು ರಶ್ಮಿಕಾ ಮಂದಣ್ಣ ಜೊಡಿಯಾಗಿ ನಟಿಸಲಿದ್ದಾರೆ. ಈಗಾಗಲೇ ಪಾವೈಲ್​​ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದು, ತಮ್ಮದೇ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇತ್ತೀಚೆಗೆ ಫಿಲ್ಮ್​ಫೇರ್​ನಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡ ‘ತಪ್ಪಡ್​’ ಸಿನಿಮಾದಲ್ಲಿ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ನಟಿ ತಾಪ್ಸೀ ಪನ್ನುಗೆ ಜೋಡಿಯಾಗಿ ಪಾವೈಲ್​ ನಟನೆ ಗಮನ ಸೆಳೆಯುವಂತಿದೆ.

ದೆಹಲಿ ಮೂಲದ ಪಾವೈಲ್​ ಅವರು ರಂಗಭೂಮಿ ಹಿನ್ನೆಲೆಯಿಂದ ಬಂದಿದ್ದಾರೆ. ಹಿರಿಯ ನಟ ನಾಸಿರುದ್ದೀನ್​ ಶಾ ಅವರ ಗರಡಿಯಲ್ಲಿ ನಟನೆಯ ಪಾಠ ಕಲಿತು ಬಂದಿರುವ ಪಾವೈಲ್​​ ಅವರು ಇತ್ತೇಫಾಖ್​, ಹೈಡ್​ ಆ್ಯಂಡ್​ ಸೀಕ್​, ಕಳಂಕ್​ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಿನಿಮಾ ಮಾತ್ರವಲ್ಲದೆ ಹಿಂದಿ ಕಿರುತೆರೆಯಲ್ಲಿ ಕೂಡ ಮಿಂಚಿದ್ದಾರೆ. ‘ಗುಡ್​ ಬೈ’ ಚಿತ್ರದಲ್ಲಿ ರಶ್ಮಿಕಾ ಮತ್ತು ಪಾವೈಲ್​​ ಕೆಮಿಸ್ಟ್ರಿ ಹೇಗೆ ಮೂಡಿಬರಬಹುದು ಎಂಬ ಕುತೂಹಲ ಅಭಿಮಾನಿಗಳಲ್ಲಿ ನಿರ್ಮಾಣ ಆಗಿದೆ.

ಇದನ್ನೂ ಓದಿ: ಮುಂಬೈ ಹೋಟೆಲ್​ನಲ್ಲಿ ಒಟ್ಟಾಗಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ-ವಿಜಯ್​ ದೇವರಕೊಂಡ!

ರಶ್ಮಿಕಾಗೆ ಸಿಕ್ತು ಸೀಕ್ರೆಟ್ ಗಿಫ್ಟ್ ಉಂಗುರ.. ಅದಕ್ಕೆ ಐ ಲವ್ ಇಟ್ ಎಂದ ಕರುನಾಡ ಕ್ರಶ್

 

 

(Rashmika Mandanna photos with Pavail Gulati go viral after Goodbye film muhurat)

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us