ಅಲ್ಲು ಅರ್ಜುನ್ ಅಥವಾ ವಿಜಯ್ ದೇವರಕೊಂಡ ಯಾರು ಬೆಸ್ಟ್? ರಶ್ಮಿಕಾ ಉತ್ತರವೇನು?

|

Updated on: Dec 17, 2024 | 3:55 PM

Rashmika Mandanna: ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪ 2’ ಸಿನಿಮಾ ಬ್ಲಾಕ್ ಬಸ್ಟರ್ ಆಗಿದೆ. ಬಾಕ್ಸ್ ಆಫೀಸ್​ನಲ್ಲಿ ದಾಖಲೆಗಳನ್ನು ಬರೆಯುತ್ತಿದೆ. ರಶ್ಮಿಕಾ ಮಂದಣ್ಣ ಅಲ್ಲು ಅರ್ಜುನ್ ಜೊತೆ ಉತ್ತಮ ಸ್ನೇಹ ಹೊಂದಿದ್ದಾರೆ. ವಿಜಯ್ ದೇವರಕೊಂಡ ಜೊತೆಗೂ ಆತ್ಮೀಯತೆ ಹೊಂದಿದ್ದಾರೆ. ಹೀಗಿರುವಾಗ ಇಬ್ಬರಲ್ಲಿ ಯಾರು ಬೆಸ್ಟ್ ಎಂಬ ಪ್ರಶ್ನೆಗೆ ರಶ್ಮಿಕಾ ಮಂದಣ್ಣ ಉತ್ತರ ನೀಡಿದ್ದಾರೆ.

ಅಲ್ಲು ಅರ್ಜುನ್ ಅಥವಾ ವಿಜಯ್ ದೇವರಕೊಂಡ ಯಾರು ಬೆಸ್ಟ್? ರಶ್ಮಿಕಾ ಉತ್ತರವೇನು?
Rashmika Vijay
Follow us on

ಅಲ್ಲು ಅರ್ಜುನ್ ಹಾಗೂ ವಿಜಯ್ ದೇವರಕೊಂಡ ತೆಲುಗು ಚಿತ್ರರಂಗದ ಇಬ್ಬರು ಸ್ಟಾರ್ ನಟರು. ಅಲ್ಲು ಅರ್ಜುನ್​ಗೆ ಹೋಲಿಸಿದರೆ ವಿಜಯ್ ದೇವಕರೊಂಡ ತುಸು ಜೂನಿಯರ್ ಆದರೂ ಸಹ ಅತ್ಯಂತ ವೇಗವಾಗಿ ಅವರು ಜನಪ್ರಿಯತೆ ಪಡೆದುಕೊಂಡವರು. ತೆಲುಗು ಚಿತ್ರರಂಗದ ಸ್ಟಾರ್ ನಟರ ಸಾಲಿಗೆ ಏರಿ ಕುಳಿತವರು. ಇಬ್ಬರೂ ಆತ್ಮೀಯ ಗೆಳೆಯರು ಸಹ. ಇಬ್ಬರೂ ಸಹ ತಮ್ಮ ನಟನೆಯ ಜೊತೆಗೆ ಸ್ಟೈಲ್ ಇನ್ನಿತರೆಗಳು ಸಾಮ್ಯತೆ ಇರುವವರು. ಇದೀಗ ನಟಿ ರಶ್ಮಿಕಾ ಮಂದಣ್ಣ ಈ ಇಬ್ಬರಲ್ಲಿ ನಿಮ್ಮ ಆಯ್ಕೆ ಯಾರು ಎಂಬ ಅಭಿಮಾನಿಯ ಪ್ರಶ್ನೆಗೆ ಉತ್ತರಿಸಿದ್ದಾರೆ.

ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ರಶ್ಮಿಕಾ ಮಂದಣ್ಣಗೆ ಅಲ್ಲು ಅರ್ಜುನ್ ಅಥವಾ ವಿಜಯ್ ದೇವರಕೊಂಡ ಇಬ್ಬರಲ್ಲಿ ನೀವು ಯಾರನ್ನು ಆರಿಸಿಕೊಳ್ಳುತ್ತೀರಿ ಅಥವಾ ಇಬ್ಬರಲ್ಲಿ ಯಾರು ಬೆಸ್ಟ್ ಎಂಬ ಪ್ರಶ್ನೆ ಎದುರಾಗಿದೆ. ಇದಕ್ಕೆ ಉತ್ತರಿಸಿದ ರಶ್ಮಿಕಾ ಮಂದಣ್ಣ, ‘ವಿಜಯ್ ದೇವರಕೊಂಡ ‘ಅರ್ಜುನ್ ರೆಡ್ಡಿ’ ರೀತಿಯ ಬ್ಲಾಕ್ ಬಸ್ಟರ್ ನೀಡಿದ್ದಾರೆ. ಇನ್ನು ಅಲ್ಲು ಅರ್ಜುನ್ ನೀಡಿರುವ ‘ಪುಷ್ಪ’ ಸಿನಿಮಾ ಅದ್ಭುತಕ್ಕೆ ಸಮ. ಈ ಇಬ್ಬರೂ ಸಹ ನಮ್ಮ ದೇಶದ ಚಿತ್ರರಂಗದ ಅತ್ಯುತ್ತಮ ಟ್ಯಾಲೆಂಟೆಡ್ ನಟರ ಸಾಲಿನಲ್ಲಿ ನಿಲ್ಲುವವರು’ ಎಂದಿದ್ದಾರೆ ರಶ್ಮಿಕಾ.

ಮುಂದುವರೆದು, ‘ಅಂಥಹಾ ಇಬ್ಬರು ಟ್ಯಾಲೆಂಟೆಡ್ ನಟರ ಬಗ್ಗೆ ನನ್ನಂಥಹಾ ನಟಿಯ ಅಭಿಪ್ರಾಯ ಕೇಳುವುದು ಸರಿಯಲ್ಲ. ಮಾತ್ರವಲ್ಲದೆ, ನಾನು ಪ್ರತಿಭೆಯಲ್ಲಿ ಅವರ ಎತ್ತರದವಳಲ್ಲ. ಯಾರು ಇನ್ನೊಬ್ಬರ ಪ್ರತಿಭೆಗೆ ಸಮನಾಗಿರುತ್ತಾರೆಯೋ ಅವರಿಗೆ ಮಾತ್ರವೇ ಅವರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು, ಅಧಿಕಾರ ಇರುತ್ತದೆ. ಹಾಗಾಗಿ ನಾನು ಅವರಿಬ್ಬರ ಬಗ್ಗೆ, ಅವರಿಬ್ಬರ ಪ್ರತಿಭೆ ಬಗ್ಗೆ ಕಮೆಂಟ್ ಮಾಡುವ ಅರ್ಹತೆ ನನಗೆ ಇಲ್ಲ’ ಎಂದಿದ್ದಾರೆ ರಶ್ಮಿಕಾ.

ಇದನ್ನೂ ಓದಿ:ಅಭಿಮಾನಿಗಳ ಈ ಒಂದು ಮನವಿಗೆ ನೋ ಹೇಳುವುದೇ ಇಲ್ಲ ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಮತ್ತು ಅಲ್ಲು ಅರ್ಜುನ್ ಇಬ್ಬರೊಟ್ಟಿಗೂ ನಟಿಸಿದ್ದಾರೆ. ವಿಜಯ್ ದೇವರಕೊಂಡ ಜೊತೆಗೆ ಸೂಪರ್ ಹಿಟ್ ಸಿನಿಮಾ ‘ಗೀತ ಗೋವಿಂದಂ’ ಮತ್ತು ‘ಡಿಯರ್ ಕಾಮ್ರೆಡ್’ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು ಅಲ್ಲು ಅರ್ಜುನ್ ಜೊತೆಗೆ ‘ಪುಷ್ಪ’ ಮತ್ತು ‘ಪುಷ್ಪ 2’ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇಬ್ಬರ ಜೊತೆಗೂ ಆತ್ಮೀಯ ಬಂಧನವನ್ನು ರಶ್ಮಿಕಾ ಮಂದಣ್ಣ ಹೊಂದಿದ್ದಾರೆ. ಮಾತ್ರವಲ್ಲದೆ ವಿಜಯ್ ದೇವರಕೊಂಡ ಜೊತೆಗೆ ತುಸು ಹೆಚ್ಚೇ ಆತ್ಮೀಯತೆ ಹೊಂದಿದ್ದಾರೆ. ಇಬ್ಬರೂ ಮದುವೆ ಸಹ ಆಗುವ ನಿರೀಕ್ಷೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ