ಮದುವೆ ಬಳಿಕ ರಶ್ಮಿಕಾಗೆ ಕನ್ನಡ ಹಾಡಿನ ಮೇಲೆ ಪ್ರೀತಿ

Rashmika Mandanna-Vijay Deverakonda: ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆ ಫೆಬ್ರವರಿ 26ರಂದು ಬಲು ಅದ್ಧೂರಿಯಾಗಿ ರಾಜಸ್ಥಾನದಲ್ಲಿ ನೆರವೇರಿದೆ. ಅವರ ಮದುವೆಯ ಚಿತ್ರಗಳೂ ಈಗಲೂ ವೈರಲ್ ಪಟ್ಟಿಯಲ್ಲಿ ಟಾಪ್​​ನಲ್ಲಿವೆ. ಮದುವೆಗೆ ರಶ್ಮಿಕಾ ಮತ್ತು ವಿಜಯ್ ಅವರು ಧರಿಸಿದ್ದ ಉಡುಪು, ಆಭರಣಗಳು ಸಖತ್ ಟ್ರೆಂಡ್ ಆಗುತ್ತಿವೆ. ಅದಾದ ಬಳಿಕ ಮಾರ್ಚ್ 04ರಂದು ಈ ಇಬ್ಬರೂ ಅದ್ಧೂರಿಯಾಗಿ ಆರತಕ್ಷತೆ ಸಹ ಮಾಡಿಕೊಂಡರು. ಆದರೆ ಈ ವೇಳೆ ರಶ್ಮಿಕಾರ ಉಡುಪಿನ ಆಯ್ಕೆ ಸಖತ್ ಗಮನ ಸೆಳೆಯಿತು.

ಮದುವೆ ಬಳಿಕ ರಶ್ಮಿಕಾಗೆ ಕನ್ನಡ ಹಾಡಿನ ಮೇಲೆ ಪ್ರೀತಿ
Rash Viji

Updated on: Mar 06, 2026 | 10:53 AM

ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್ ದೇವರಕೊಂಡ ಮದುವೆ ಫೆಬ್ರವರಿ 26ರಂದು ಬಲು ಅದ್ಧೂರಿಯಾಗಿ ರಾಜಸ್ಥಾನದಲ್ಲಿ ನೆರವೇರಿದೆ. ಅವರ ಮದುವೆಯ ಚಿತ್ರಗಳೂ ಈಗಲೂ ವೈರಲ್ ಪಟ್ಟಿಯಲ್ಲಿ ಟಾಪ್​​ನಲ್ಲಿವೆ. ಮದುವೆಗೆ ರಶ್ಮಿಕಾ ಮತ್ತು ವಿಜಯ್ ಅವರು ಧರಿಸಿದ್ದ ಉಡುಪು, ಆಭರಣಗಳು ಸಖತ್ ಟ್ರೆಂಡ್ ಆಗುತ್ತಿವೆ. ಅದಾದ ಬಳಿಕ ಮಾರ್ಚ್ 04ರಂದು ಈ ಇಬ್ಬರೂ ಅದ್ಧೂರಿಯಾಗಿ ಆರತಕ್ಷತೆ ಸಹ ಮಾಡಿಕೊಂಡರು. ಆದರೆ ಈ ವೇಳೆ ರಶ್ಮಿಕಾರ ಉಡುಪಿನ ಆಯ್ಕೆ ಸಖತ್ ಗಮನ ಸೆಳೆಯಿತು.

ರಶ್ಮಿಕಾ, ತೆಲಂಗಾಣಕ್ಕೆ ಸೊಸೆಯಾಗಿ ಹೋಗಿದ್ದು, ಆದರೆ ಮದುವೆ ಸಂದರ್ಭದಲ್ಲಿ ತಮ್ಮ ಕನ್ನಡತನವನ್ನು ಬಿಟ್ಟುಕೊಡಲಿಲ್ಲ. ಆರತಕ್ಷತೆಗೆ ರಶ್ಮಿಕಾ, ಮೈಸೂರು ರೇಷ್ಮೆ ಧರಿಸಿದ್ದರು, ಮಾತ್ರವಲ್ಲದೆ ಕರ್ನಾಟಕದ ಲಾಂಛನವಾದ ಗಂಡಭೇರುಂಡ ಎಂಬ್ರಾಯ್ಡಿರಿ ಆ ಸೀರೆಯ ಮೇಲಿತ್ತು. ಮಾತ್ರವಲ್ಲದೆ ರಶ್ಮಿಕಾ ಧರಿಸಿದ್ದ ರವಿಕೆಯ ಹಿಂಬಧಿಯಲ್ಲಿ ಕೊಡವರ ಕತ್ತಿ, ಬಂದೂಕಿನ ಲಾಂಛನವೂ ಇತ್ತು. ಇದೀಗ ಆರತಕ್ಷತೆಯ ಬಳಿಕ ವಿಡಿಯೋ ಒಂದಕ್ಕೆ ರಶ್ಮಿಕಾ ಹಂಚಿಕೊಂಡಿದ್ದು, ವಿಡಿಯೋದ ಹಿನ್ನೆಲೆಯಲ್ಲಿ ಕನ್ನಡದ ಹಾಡನ್ನೇ ಬಳಕೆ ಮಾಡಿದ್ದಾರೆ.

ಇದನ್ನೂ ಓದಿ:ರಶ್ಮಿಕಾ-ವಿಜಯ್ ದೇವರಕೊಂಡ ವಿವಾಹಕ್ಕೆ ಅಂತಿಮವಾಗಿ ಖರ್ಚಾಗಿದ್ದೆಷ್ಟು?

ಮದುವೆ ಆರತಕ್ಷತೆಯ ಕ್ಯೂಟ್ ವಿಡಿಯೋ ಅನ್ನು ರಶ್ಮಿಕಾ ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ವಿಡಿಯೋದ ಹಿನ್ನೆಲೆ ಹಾಡಾಗಿ ಕನ್ನಡದ ‘ಏಳಮ್ಮ ತುಳಸಿ’ ಹಾಡನ್ನು ಬಳಸಿದ್ದಾರೆ. ಇತ್ತೀಚೆಗೆ ಬಿಡುಗಡೆ ಆದ ಈ ಹಾಡು ಸಖತ್ ವೈರಲ್ ಆಗಿದೆ. ಯುವ ಸಂಗೀತ ನಿರ್ದೇಶಕ ಸುಮೇಧ್ ಸಂಗೀತ ನಿರ್ದೇಶಿಸಿರುವ ‘ಏಳಮ್ಮ ತುಳಸಿ’ ಹಾಡು ಯೂಟ್ಯೂಬ್​​ನಲ್ಲಿ ಸಖತ್ ಟ್ರೆಂಡ್ ಆಗುತ್ತಿದ್ದು, ಅದೇ ಹಾಡನ್ನು ಇದೀಗ ರಶ್ಮಿಕಾ ತಮ್ಮ ಮದುವೆ ಆರತಕ್ಷತೆಯ ವಿಡಿಯೋಕ್ಕೆ ಹಿನ್ನೆಲೆಯಾಗಿ ಬಳಸಿಕೊಂಡಿದ್ದಾರೆ. ರಶ್ಮಿಕಾರನ್ನು ಕಳೆದ ಕೆಲ ವರ್ಷಗಳಿಂದ ಕನ್ನಡ ವಿರೋಧಿ ಎಂಬಂತೆ ಚಿತ್ರಿಸಲಾಗಿತ್ತು, ಆದರೆ ಮದುವೆಯಂಥಹಾ ಮಹತ್ವದ ಸನ್ನಿವೇಶದಲ್ಲಿ ರಶ್ಮಿಕಾ ತಮ್ಮ ಕನ್ನಡತನವನ್ನು ಪ್ರದರ್ಶಿಸಿದ್ದಾರೆ. ಮಾತ್ರವಲ್ಲದೆ ತಮ್ಮ ಸಮುದಾಯದ ಪ್ರತಿನಿಧಿತ್ವವನ್ನು ಸಹ ಪ್ರದರ್ಶಿಸಿದ್ದಾರೆ.

ರಶ್ಮಿಕಾ ಬಳಸಿರುವ ‘ಏಳಮ್ಮ ತುಳಸಿ’ ಹಾಡು ಪುರಂದರ ದಾಸರ ರಚನೆಯಾಗಿದೆ. ಹಾಡಿಗೆ ಅದ್ಭುತವಾಗಿ ರಾಗ ಸಂಯೋಜನೆ ಮಾಡಿದ್ದಾರೆ ಸಂಗೀತ ನಿರ್ದೇಶಕ ಕೆ ಸುಮೇಧ್. ಅದ್ಭುತ ಹಾಡಿಗೆ ಅಷ್ಟೇ ಅದ್ಭುತವಾದ ದೃಶ್ಯಗಳನ್ನು ಸಹ ಸಂಯೋಜಿಸಲಾಗಿದೆ. ಒಂದು ತಿಂಗಳಲ್ಲಿ ಈ ಹಾಡು 70 ಲಕ್ಷಕ್ಕೂ ಹೆಚ್ಚು ವೀವ್ಸ್ ಪಡೆದುಕೊಂಡಿದೆ. ಸಿನಿಮಾದ ಹಾಡು ರಾಜ್ಯದಲ್ಲಿ ಮಾತ್ರವಲ್ಲದೆ, ಹೊರ ರಾಜ್ಯಗಳಲ್ಲಿಯೂ ಸಖತ್ ವೈರಲ್ ಆಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us