Rashmika Mandanna: ತೆಲುಗು ಸ್ಟಾರ್​ ನಟನಿಗೆ ಬಾಡಿಗಾರ್ಡ್​ ಆಗುವ ಕನಸು ಕಾಣುತ್ತಿರುವ ರಶ್ಮಿಕಾ ಮಂದಣ್ಣ!

Wild Dog Push Up Challenge: ನಟಿ ರಶ್ಮಿಕಾ ಮಂದಣ್ಣ ಅವರಿಗೆ ಬಹುಭಾಷೆಯಲ್ಲಿ ಸಿಕ್ಕಾಪಟ್ಟೆ ಸಿನಿಮಾ ಅವಕಾಶಗಳಿವೆ. ಆದರೆ ಅವರು ಈ ನಡುವೆ ಟಾಲಿವುಡ್​ ಸ್ಟಾರ್​ ನಟನಿಗೆ ಬಾಡಿಗಾರ್ಡ್​ ಆಗುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ!

Rashmika Mandanna: ತೆಲುಗು ಸ್ಟಾರ್​ ನಟನಿಗೆ ಬಾಡಿಗಾರ್ಡ್​ ಆಗುವ ಕನಸು ಕಾಣುತ್ತಿರುವ ರಶ್ಮಿಕಾ ಮಂದಣ್ಣ!
ರಶ್ಮಿಕಾ ಮಂದಣ್ಣ
Edited By:

Updated on: Mar 30, 2021 | 4:26 PM

ಕನ್ನಡತಿ ರಶ್ಮಿಕಾ ಮಂದಣ್ಣ ಅವರು ಸ್ಯಾಂಡಲ್​ವುಡ್​ಗಿಂತಲೂ ಹೆಚ್ಚಾಗಿ ಟಾಲಿವುಡ್​ನಲ್ಲಿ ಬ್ಯುಸಿ ಆಗಿದ್ದಾರೆ. ತಮಿಳು ಮತ್ತು ಹಿಂದಿ ಚಿತ್ರರಂಗದಲ್ಲೂ ಅವರಿಗೆ ಸಖತ್​ ಬೇಡಿಕೆ ಇದೆ. ಆದರೆ ಇದರ ಜೊತೆಗೆ ಅವರು ಟಾಲಿವುಡ್​ ಸ್ಟಾರ್​ ನಟ ನಾಗಾರ್ಜುನ ಅವರಿಗೆ ಬಾಡಿಗಾರ್ಡ್​ ಆಗುವ ಹಂಬಲವನ್ನು ತೋಡಿಕೊಂಡಿದ್ದಾರೆ. ರಶ್ಮಿಕಾಗೆ ಯಾಕೆ ಇಂಥ ವಿಚಿತ್ರ ಆಸೆ ಅಂತೀರಾ? ಅದಕ್ಕುತ್ತರ ಇಲ್ಲಿದೆ…

ನಟನೆ ಜೊತೆಗೆ ಫಿಟ್ನೆಸ್​ ಕಡೆಗೆ ರಶ್ಮಿಕಾ ಹೆಚ್ಚು ಗಮನ ನೀಡುತ್ತಿದ್ದಾರೆ. ಶೂಟಿಂಗ್​ನಲ್ಲಿ ಎಷ್ಟೇ ಬ್ಯುಸಿ ಆಗಿದ್ದರೂ ಕೂಡ ಅವರು ಜಿಮ್​ನಲ್ಲಿ ವರ್ಕೌಟ್​ ಮಾಡುವುದನ್ನು ತಪ್ಪಿಸುವುದಿಲ್ಲ. ಅದೇ ಕಾರಣಕ್ಕಾಗಿ ಅವರು ತುಂಬ ಫಿಟ್​ ಆಗಿದ್ದಾರೆ. ಅವರು ಜಿಮ್​ನಲ್ಲಿ ಕಸರತ್ತು ಮಾಡುತ್ತಿರುವ ಒಂದು ವಿಡಿಯೋ ಈಗ ವೈರಲ್​ ಆಗಿದೆ. ನಿಧಾನವಾಗಿ 30 ಸೆಕೆಂಡ್​ಗೆ ಒಂದು ಪುಶ್​ಅಪ್​ ಮಾಡಿದ್ದಾರೆ. ಇದು ನಾಗಾರ್ಜನ ಅವರ ಮೆಚ್ಚುಗೆಗೆ ಪಾತ್ರವಾಗಿದೆ!

ಅಷ್ಟಕ್ಕೂ ರಶ್ಮಿಕಾ ಹೀಗೆಲ್ಲ ಮಾಡಿರುವುದು ನಾಗಾರ್ಜುನ ನಟನೆಯ ವೈಲ್ಡ್​ ಡಾಗ್​ ಸಿನಿಮಾದ ಪ್ರಮೋಷನ್​ಗಾಗಿ! ಏ.2ರಂದು ವೈಲ್ಡ್​ ಡಾಗ್​ ಚಿತ್ರ ಬಿಡುಗಡೆ ಆಗುತ್ತಿದೆ. ಅದರಲ್ಲಿ ನಾಗಾರ್ಜುನ ಅವರು ಭರ್ಜರಿ ಆ್ಯಕ್ಷನ್​ ದೃಶ್ಯಗಳಲ್ಲಿ ನಟಿಸಿದ್ದಾರೆ. ಈ ಚಿತ್ರದ ಪ್ರಚಾರಕ್ಕಾಗಿ ಸೋಶಿಯಲ್​ ಮೀಡಿಯಾದಲ್ಲಿ #WildDogPushUpChallenge ಆರಂಭಿಸಲಾಗಿದೆ. ಈ ಚಾಲೆಂಜ್​ ಸ್ವೀಕರಿಸಿರುವ ರಶ್ಮಿಕಾ ಅವರು 30 ಸೆಕೆಂಡ್​ನಲ್ಲಿ ಒಂದು ಪುಶ್​ಅಪ್​ ಮಾಡಿ ಎಲ್ಲರ ಹುಬ್ಬೇರುವಂತೆ ಮಾಡುತ್ತಿದ್ದಾರೆ.

ಈ ವಿಡಿಯೋ ಕಂಡು ಅಕ್ಕಿನೇನಿ ನಾಗಾರ್ಜುನ ‘ವಾವ್​..’ ಎಂದು ಟ್ವೀಟ್​ ಮಾಡಿದ್ದಾರೆ. ಅದನ್ನು ನೋಡಿ ರಶ್ಮಿಕಾ ಸಿಕ್ಕಾಪಟ್ಟೆ ಖುಷಿ ಆಗಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ‘ಸರ್​.. ಇನ್ನೂ ವರ್ಕೌಟ್​ ಮಾಡುತ್ತಿದ್ದೇನೆ. ಒಂದು ದಿನ ನಿಮ್ಮ ಬಾಡಿ ಗಾರ್ಡ್​ ಆಗಿ ಸೇರಿಕೊಳ್ಳುತ್ತೇನೆ’ ಎಂದು ಉತ್ತರಿಸಿರುವುದು ಸಖತ್​ ವೈರಲ್​ ಆಗುತ್ತಿದೆ.

ದಿನದಿಂದ ದಿನಕ್ಕೆ ಟಾಲಿವುಡ್​ನಲ್ಲಿ ರಶ್ಮಿಕಾ ಖ್ಯಾತಿ ಹೆಚ್ಚುತ್ತಿದೆ. ಅಲ್ಲಿನ ಸ್ಟಾರ್​ ನಟರ ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಿಗೆ ಅವರು ನಾಯಕಿಯಾಗಿ ಆಯ್ಕೆ ಆಗುತ್ತಿದ್ದಾರೆ. ಅಲ್ಲು ಅರ್ಜುನ್​ ಜೊತೆ ಅವರ ‘ಪುಷ್ಪ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನು, ಬಾಲಿವುಡ್​ಗೂ ಈ ಕನ್ನಡತಿ ಕಾಲಿಟ್ಟಿದ್ದು, ಸಿದ್ದಾರ್ಥ್​ ಮಲ್ಹೋತ್ರಾ ಜೊತೆ ‘ಮಿಷನ್​ ಮಜ್ನು’ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಕನ್ನಡದಲ್ಲಿ ರಶ್ಮಿಕಾ ನಟಿಸಿದ ಕೊನೇ ಸಿನಿಮಾ ಪೊಗರು. ಆ ಬಳಿಕ ಅವರು ಕನ್ನಡದ ಯಾವ ಚಿತ್ರವನ್ನೂ ಒಪ್ಪಿಕೊಂಡಿಲ್ಲ.

ಇದನ್ನೂ ಓದಿ: ಮುಂಬೈ ಹೋಟೆಲ್​ನಲ್ಲಿ ಒಟ್ಟಾಗಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ-ವಿಜಯ್​ ದೇವರಕೊಂಡ!

Published On - 9:02 am, Tue, 30 March 21

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us