ತೆಲುಗು ಸ್ಟಾರ್ ನಟನ ಎದುರು ಪುನೀತ್ ಬಾಕ್ಸ್ ಆಫೀಸ್ ವಾರ್! ಯುವರತ್ನ ಚಿತ್ರದ ಎದುರಾಳಿ ಯಾರು?
ಕನ್ನಡ ಸಿನಿಮಾಗಳು ಕರ್ನಾಟಕದ ಗಡಿದಾಡಿ ಅಬ್ಬರಿಸುತ್ತಿವೆ. ಪರಭಾಷೆಯ ಸ್ಟಾರ್ ನಟರ ಎದುರು ಸ್ಯಾಂಡಲ್ವುಡ್ ಹೀರೋಗಳು ಹಣಾಹಣಿ ನಡೆಸಬೇಕಿದೆ.
ಚಂದನವನದಲ್ಲೀಗ ಪ್ಯಾನ್ ಇಂಡಿಯಾ ಸಿನಿಮಾಗಳ ಟ್ರೆಂಡ್ ಹೆಚ್ಚುತ್ತಿದೆ. ಕನ್ನಡದ ಜೊತೆ ಬೇರೆ ಭಾಷೆಗಳಿಗೆ ಡಬ್ ಮಾಡಿ ಬಿಡುಗಡೆ ಮಾಡುವ ಸೂತ್ರಕ್ಕೆ ನಿರ್ಮಾಪಕರು ಗಂಟು ಬಿದ್ದಿದ್ದಾರೆ. ಪುನೀತ್ ರಾಜ್ಕುಮಾರ್ ನಟನೆಯ ‘ಯುವರತ್ನ’ ಸಿನಿಮಾ ಕೂಡ ಟಾಲಿವುಡ್ ಮಂದಿಗೆ ಪೈಪೋಟಿ ನೀಡಲು ಸಜ್ಜಾಗಿದೆ.
ಕನ್ನಡದ ಸ್ಟಾರ್ ನಟರ ಚಿತ್ರಗಳು ತಮಿಳು, ತೆಲುಗಿಗೆ ಡಬ್ ಆಗುತ್ತಿವೆ. ಇತ್ತೀಚೆಗೆ ‘ಪೊಗರು’ ಸಿನಿಮಾ ಈ ಮಾರ್ಗ ಅನುಸರಿಸಿತ್ತು. ರಾಬರ್ಟ್ ಚಿತ್ರ ತೆಲುಗಿನಲ್ಲೂ ಬಿಡುಗಡೆ ಆಯಿತು. ಹಾಗೆಯೇ ಯುವರತ್ನ ಸಿನಿಮಾ ಸಹ ತೆಲುಗಿಗೆ ಡಬ್ ಆಗಿದೆ. ಏಪ್ರಿಲ್ 1ರಂದು ಈ ಚಿತ್ರದ ಕನ್ನಡ ಮತ್ತು ತೆಲುಗು ವರ್ಷನ್ ತೆರೆ ಕಾಣಲಿದೆ. ಕರ್ನಾಟಕದಲ್ಲಿ ಪುನೀತ್ಗೆ ಯಾರೂ ಪೈಪೋಟಿ ನೀಡುತ್ತಿಲ್ಲ. ಆದರೆ ಆಂಧ್ರ ಮತ್ತು ತೆಲಂಗಾಣದಲ್ಲಿ ಗಲ್ಲಾ ಪೆಟ್ಟಿಗೆ ಸಮರ ಖಂಡಿತಾ ಆಗಲಿದೆ.
ಏ.1ರಂದು ‘ಯುವರತ್ನ’ ತೆರೆಕಂಡರೆ, ಮರುದಿನವೇ (ಏ.2) ತೆಲುಗಿನ ‘ವೈಲ್ಡ್ ಡಾಗ್’ ಚಿತ್ರ ಬಿಡುಗಡೆ ಆಗಲಿದೆ. ಆ ಸಿನಿಮಾದಲ್ಲಿ ಅಕ್ಕಿನೇನಿ ನಾಗಾರ್ಜುನ ಹೀರೋ. ಸಸ್ಪೆನ್ಸ್ ಥ್ರಿಲ್ಲರ್ ಮಾದರಿಯಲ್ಲಿ ಈ ಚಿತ್ರ ಮೂಡಿಬಂದಿದೆ. ಭಯೋತ್ಪಾದಕ ನಿಗ್ರಹ ದಳದ ಆಫೀಸರ್ ಆಗಿ ನಾಗಾರ್ಜುನ ನಟಿಸಿದ್ದಾರೆ. ದಿಯಾ ಮಿರ್ಜಾ, ಅತುಲ್ ಕುಲಕರ್ಣಿ ಮುಂತಾದ ಖ್ಯಾತ ಕಲಾವಿದರು ಸಾಥ್ ನೀಡಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಟ್ರೇಲರ್ಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ.
Thank you @KChiruTweets Garu for your words and unleashing the #WildDogTrailer !! https://t.co/JpZ3ZjDx6V https://t.co/whqIJQYk9p
— Nagarjuna Akkineni (@iamnagarjuna) March 12, 2021
ಕನ್ನಡದ ಸಿನಿಮಾಗಳಿಗೆ ಆಂಧ್ರ ಮತ್ತು ತೆಲಂಗಾಣದಲ್ಲಿ ಈಗ ಚಿತ್ರಮಂದಿರಗಳು ಸಿಗುತ್ತಿವೆ. ಆದರೆ ಅಲ್ಲಿನ ಸ್ಟಾರ್ ನಟರ ಚಿತ್ರಗಳ ಜೊತೆ ಕನ್ನಡ ಸಿನಿಮಾಗಳು ಪೈಪೋಟಿ ನೀಡಬೇಕು. ಈಗ ಏಪ್ರಿಲ್ ಮೊದಲ ವಾರದಲ್ಲಿ ನಾಗಾರ್ಜುನ ನಟನೆಯ ವೈಲ್ಡ್ ಡಾಗ್ ಚಿತ್ರದ ಎದುರು ಯುವರತ್ನ ಸಿನಿಮಾ ಸ್ಪರ್ಧಿಸಬೇಕಿದೆ.
ಇದನ್ನೂ ಓದಿ: ಬೆಟ್ಟದಷ್ಟು ಆಸೆ ಇಟ್ಟುಕೊಂಡಿದ್ದ ಪುನೀತ್ ಫ್ಯಾನ್ಸ್ಗೆ ಭಾರೀ ನಿರಾಸೆ! ಆದರೂ ಒಂದು ಗುಡ್ ನ್ಯೂಸ್
Published On - 6:29 am, Wed, 17 March 21