Renukaswamy case: ಜಾಮೀನು ಸಿಕ್ಕರೂ ದರ್ಶನ್​ಗಿಲ್ಲ ನೆಮ್ಮದಿ.. ಮತ್ತೆ ಜೈಲು ಸೇರೋ ಭೀತಿ!

| Updated By: ರಮೇಶ್ ಬಿ. ಜವಳಗೇರಾ

Updated on: Dec 13, 2024 | 10:34 PM

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಸೇರಿದಂತೆ ಇತರೆ ಏಳು ಆರೋಪಿಗಳಿಗೆ ಹೈಕೋರ್ಟ್ ಷರತ್ತು ಬದ್ದ ಜಾಮೀನು ನೀಡಿದೆ. ಹೀಗಾಗಿ 5 ತಿಂಗಳ ಜೈಲುವಾಸದ ಬಳಿಕ ರೇಣುಕಾಸ್ವಾಮಿ ಕೊಲೆ ಆರೋಪಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಇನ್ನು ಡಿಬಾಸ್​ಗೆ ಜಾಮೀನು ಸಿಕ್ಕಿರುವುದು ಅವರ ಕುಟುಂಬ, ಸ್ನೇಹಿತರು ಹಾಗೂ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ಎಲ್ಲೆಡೆ ಫ್ಯಾನ್ಸ್​ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ. ಆದ್ರೆ, ದರ್ಶನ್​ಗೆ ಮಾತ್ರ ಎರಡೆರಡು ಟೆನ್ಷನ್ ಶುರುವಾಗಿದೆ.

Renukaswamy case: ಜಾಮೀನು ಸಿಕ್ಕರೂ ದರ್ಶನ್​ಗಿಲ್ಲ ನೆಮ್ಮದಿ.. ಮತ್ತೆ ಜೈಲು ಸೇರೋ ಭೀತಿ!
ದರ್ಶನ್
Follow us on

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 5 ತಿಂಗಳ ಜೈಲುವಾಸದ ಬಳಿಕ ಆರೋಪಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ದರ್ಶನ್‌ ಸೇರಿದಂತೆ ಏಳು ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ಇಂದು (ಡಿಸೆಂಬರ್ 13) ಷರತ್ತು ಬದ್ದ ಜಾಮೀನು ನೀಡಿದೆ. ಬಟ್ಟೆಗಳಲ್ಲಿ ರಕ್ತದ ಕಲೆ, ಮೊಬೈಲ್ ಸಿಡಿಆರ್ ವಿವರ ಸೇರಿದಂತೆ ಇತ್ಯಾದಿಗಳ‌ ಬಗ್ಗೆ ಸಾಕ್ಷಿ ವಿಚಾರಣೆ ಬಳಿಕವಷ್ಟೇ ನಿರ್ಣಯಕ್ಕೆ ಬರಲು ಸಾಧ್ಯ ಎಂದಿರುವ ಕೋರ್ಟ್‌, ಗ್ರೌಂಡ್ಸ್ ಆಫ್ ಅರೆಸ್ಟ್ ಬಗ್ಗೆ ಹೆಚ್ಚಿನ ಒತ್ತು ನೀಡಿದೆ. ಗ್ರೌಂಡ್ಸ್ ಆಫ್ ಅರೆಸ್ಟ್ ಸರಿಯಾಗಿಲ್ಲದಿದ್ದರೆ ಜಾಮೀನು ನೀಡಬಹುದು. ಹೀಗಂತಾ ಸುಪ್ರೀಂ ಕೋರ್ಟ್ ಪ್ರಬೀರ್ ಪುರಕಾಯಸ್ತ ಕೇಸಿನ ತೀರ್ಪು ಉಲ್ಲೇಖಿಸಿ, ದರ್ಶನ್ ಆ್ಯಂಡ್ ಗ್ಯಾಂಗ್‌ಗೆ ಜಾಮೀನು ನೀಡಿದೆ. ಆದರೂ ದರ್ಶನ್‌ಗೆ ನೆಮ್ಮದಿ ಇಲ್ಲ. ಮತ್ತೆ ಜೈಲು ಸೇರುವ ಭೀತಿ ಅವರಲ್ಲಿ ಕಾಡುತ್ತಿದೆ.

ಜಾಮೀನು ಮಂಜೂರಾಗಿದ್ದರೂ ಟೆನ್ಷನ್​ನಲ್ಲೇ ಇರಬೇಕಾದ ಸ್ಥಿತಿ ದಾಸನಿಗೆ ಎದುರಾಗಿದೆ. 6 ವಾರಗಳ ಅವಧಿಗೆ ಅನಾರೋಗ್ಯದ ಕಾರಣ ನೀಡಿ ಮಧ್ಯಂತರ ಜಾಮೀನು ಪಡೆದಿದ್ರೂ, ಸರ್ಜರಿ ಮಾಡಿಸಿಕೊಳ್ಳದಿರುವುದೇ ಸಂಕಷ್ಟ ತಂದಿಡುವ ಸಾಧ್ಯತೆಯಿದೆ. ಹೀಗಾಗಿ ಮತ್ತೆ ಜೈಲೋ ಸೇರುವ ಭೀತಿ ದರ್ಶನ್​ಗೆ ಶುರುವಾಗಿದೆ.

ಇದನ್ನೂ ಓದಿ: ದರ್ಶನ್​ಗೆ ಜಾಮೀನು ನೀಡಲು ಹೈಕೋರ್ಟ್ ಪರಿಗಣಿಸಿದ ಪ್ರಮುಖ ಅಂಶಗಳು ಇಲ್ಲಿವೆ

ಹೈಕೋರ್ಟ್ ಆದೇಶ ಪ್ರಶ್ನಿಸಿ ‘ಸುಪ್ರೀಂ’ ಮೊರೆ?

ದರ್ಶನ್​ಗೆ ಜಾಮೀನು ಮಂಜೂರು ಮಾಡಿರುವ ಹೈಕೋರ್ಟ್ ಆದೇಶ ಪ್ರಶ್ನಿಸಿ ಪೊಲೀಸರು ಸುಪ್ರೀಂಕೋರ್ಟ್ ಮೊರೆ ಹೋಗುವ ಸಾಧ್ಯತೆಯಿದೆ. ಮೇಲ್ಮನವಿ ಸಲ್ಲಿಸುವ ಬಗ್ಗೆ ಎಸ್​ಪಿಪಿ ಪ್ರಸನ್ನಕುಮಾರ್ ತಮ್ಮ ಅಭಿಪ್ರಾಯವನ್ನು ಪೊಲೀಸ್ ಆಯುಕ್ತರು ಹಾಗೂ ಗೃಹ ಇಲಾಖೆಗೆ ಲಿಖಿತ ರೂಪದಲ್ಲಿ ಸಲ್ಲಿಸಲಿದ್ದಾರೆ. ಬಳಿಕ ಗೃಹ ಇಲಾಖೆ ಅನುಮತಿ ಬಳಿಕ ಸರ್ಕಾರ, ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸಲಿದೆ.

ದರ್ಶನ್‌ಗೆ ಸುಪ್ರೀಂ ಟೆನ್ಷನ್

6 ವಾರಗಳ ನಂತರವೂ ಸರ್ಜರಿ ಮಾಡಿಸಿಕೊಂಡಿಲ್ಲ ಎಂದು ದರ್ಶನ್ ನಡೆ ಬಗ್ಗೆ ಪೊಲೀಸರ ಪರ SPP ಸುಪ್ರೀಂಕೋರ್ಟ್​ನಲ್ಲಿ ವಾದಮಂಡನೆ ಮಾಡಲಿದ್ದಾರೆ. ಪ್ರಕರಣದ ಸಾಕ್ಷ್ಯ ವಿಚಾರಣೆ ಇನ್ನೂ ಆರಂಭವಾಗಿಲ್ಲ. ಈಗಲೇ ಜಾಮೀನು ಕೊಟ್ಟಿರುವುದರಿಂದ ಸಾಕ್ಷ್ಯಗಳ ಮೇಲೆ ದರ್ಶನ್ ಪ್ರಭಾವ ಬೀರಬಹುದೆಂಬ ಅಂಶವನ್ನೂ ಪೊಲೀಸರ ಪರ ಎಸ್​ಪಿಪಿ ಉಲ್ಲೇಖಿಸುವ ಸಾಧ್ಯತೆಯಿದೆ.

ಹೀಗಾಗಿ ಸದ್ಯಕ್ಕೆ ದರ್ಶನ್​ಗೆ ಜಾಮೀನು ಸಿಕ್ಕರೂ ಟೆನ್ಷನ್ ಮಾತ್ರ ಕಡಿಮೆಯಾಗಿಲ್ಲ. ಮೇಲ್ಮನವಿ ಅರ್ಜಿ ಸಲ್ಲಿಕೆ ಬಳಿಕ ವಿಚಾರಣೆ ನಡೆಯಲಿದೆ. ನಂತರ ಸುಪ್ರೀಂ ನೀಡುವ ಆದೇಶವೇ ದರ್ಶನ್ ಭವಿಷ್ಯ ನಿರ್ಧರಿಸಲಿದೆ. ಅಲ್ಲಿಯವರೆಗೂ ದರ್ಶನ್​ ಎದೆಯಲ್ಲಿ ಢವಢವ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.