‘ಸ್ಪೈಡರ್ ಮ್ಯಾನ್’ ಹೆಗಲ ಮೇಲೆ ಕೈ, ಹಾಲಿವುಡ್ ಸಿನಿಮಾಕ್ಕೆ ರಿಷಬ್ ಪ್ರಚಾರ

Rishab Shetty movie: ಕನ್ನಡ ಸಿನಿಮಾಗಳು ಈಗ ಹಾಲಿವುಡ್​ ಲೆವೆಲ್​​​ನಲ್ಲಿ ಮಿಂಚುತ್ತಿವೆ. ಕನ್ನಡದ ‘ಕೆಜಿಎಫ್’, ‘ಕೆಜಿಎಫ್ 2’, ‘ಕಾಂತಾರ’, ‘ಕಾಂತಾರ 1’, ‘ಸಪ್ತ ಸಾಗರದಾಚೆ ಎಲ್ಲೊ’ ಇನ್ನೂ ಕೆಲ ಸಿನಿಮಾಗಳು ವಿದೇಶಗಳಲ್ಲಿ ಸಹ ಪ್ರೇಕ್ಷಕರನ್ನು ಸೆಳೆದಿವೆ. ಈ ಸಿನಿಮಾಗಳ ಮೂಲಕ ಕನ್ನಡದ ನಟ-ನಟಿಯರಿಗೆ ವಿದೇಶಗಳಲ್ಲಿಯೂ ಪರಿಚಯ, ಜನಪ್ರಿಯತೆ ಸೃಷ್ಟಿಯಾಗಿದೆ. ಇದೀಗ ಹಾಲಿವುಡ್ ಸಿನಿಮಾ ಒಂದು ತಮ್ಮ ಸಿನಿಮಾದ ಪ್ರಚಾರಕ್ಕೆ ಕನ್ನಡದ ನಟರೊಬ್ಬರ ಜೊತೆ ಕೈ ಜೋಡಿಸಿದೆ.

‘ಸ್ಪೈಡರ್ ಮ್ಯಾನ್’ ಹೆಗಲ ಮೇಲೆ ಕೈ, ಹಾಲಿವುಡ್ ಸಿನಿಮಾಕ್ಕೆ ರಿಷಬ್ ಪ್ರಚಾರ
Rishab Shetty

Updated on: Jul 26, 2026 | 8:05 PM

ಕನ್ನಡ ಸಿನಿಮಾಗಳು ಈಗ ಹಾಲಿವುಡ್​ ಲೆವೆಲ್​​​ನಲ್ಲಿ ಮಿಂಚುತ್ತಿವೆ. ಕನ್ನಡದ ‘ಕೆಜಿಎಫ್’, ‘ಕೆಜಿಎಫ್ 2’, ‘ಕಾಂತಾರ’, ‘ಕಾಂತಾರ 1’, ‘ಸಪ್ತ ಸಾಗರದಾಚೆ ಎಲ್ಲೊ’ ಇನ್ನೂ ಕೆಲ ಸಿನಿಮಾಗಳು ವಿದೇಶಗಳಲ್ಲಿ ಸಹ ಪ್ರೇಕ್ಷಕರನ್ನು ಸೆಳೆದಿವೆ. ಈ ಸಿನಿಮಾಗಳ ಮೂಲಕ ಕನ್ನಡದ ನಟ-ನಟಿಯರಿಗೆ ವಿದೇಶಗಳಲ್ಲಿಯೂ ಪರಿಚಯ, ಜನಪ್ರಿಯತೆ ಸೃಷ್ಟಿಯಾಗಿದೆ. ಇದೀಗ ಹಾಲಿವುಡ್ (Hollywood) ಸಿನಿಮಾ ಒಂದು ತಮ್ಮ ಸಿನಿಮಾದ ಪ್ರಚಾರಕ್ಕೆ ಕನ್ನಡದ ನಟರೊಬ್ಬರ ಜೊತೆ ಕೈ ಜೋಡಿಸಿದೆ.

ಹಾಲಿವುಡ್​​ನ ಬಲು ಜನಪ್ರಿಯ ಸಿನಿಮಾ ‘ಸ್ಪೈಡರ್​​ ಮ್ಯಾನ್’ ಸರಣಿಯ ಹೊಸ ಸಿನಿಮಾ ಇದೇ ವಾರ ಬಿಡುಗಡೆ ಆಗುತ್ತಿದೆ. ಭಾರತದಲ್ಲಿ ಸಹ ಬಲು ಅದ್ಧೂರಿಯಾಗಿ ಈ ಸಿನಿಮಾ ತೆರೆಗೆ ಬರುತ್ತಿದ್ದು, ಸಿನಿಮಾ, ಕನ್ನಡ ಆವೃತ್ತಿಯಲ್ಲಿ ರಿಲೀಸ್ ಆಗುತ್ತಿದೆ. ಕರ್ನಾಟಕದಲ್ಲಿ ‘ಸ್ಪೈಡರ್​ ಮ್ಯಾನ್’ ಸಿನಿಮಾದ ಪ್ರಚಾರಕ್ಕೆ ಚಿತ್ರತಂಡ, ವಿಶೇಷವಾಗಿ ಸಿನಿಮಾದ ನಿರ್ಮಾಣ ಮತ್ತು ವಿತರಣಾ ಸಂಸ್ಥೆಯಾದ ಸೋನಿ, ರಿಷಬ್ ಶೆಟ್ಟಿ ಅವರ ಜೊತೆಗೆ ಕೈ ಜೋಡಿಸಿದೆ.

ರಿಷಬ್ ಶೆಟ್ಟಿ ಅವರು, ‘ಸ್ಪೈಡರ್​ ಮ್ಯಾನ್’ ಸಿನಿಮಾದ ಪ್ರಚಾರಕ್ಕಾಗಿ ವಿಡಿಯೋ ಒಂದನ್ನು ಮಾಡಿದ್ದಾರೆ. ವಿಡಿಯೋನಲ್ಲಿ ರಿಷಬ್ ಶೆಟ್ಟಿ ಅವರನ್ನು ಅವರ ತಂಡದವರೇ ಮರೆತು ಹೋಗಿದ್ದಾರೆ. ರಿಷಬ್ ಶೆಟ್ಟಿ ಯಾರೆಂಬುದು ಅವರ ಗೆಳೆಯರು, ಅವರೊಟ್ಟಿಗೆ ಕೆಲಸ ಮಾಡುವವರಿಗೆ ಗೊತ್ತಿಲ್ಲ. ಈಗ ‘ಸ್ಪೈಡರ್​ ಮ್ಯಾನ್’ ಪರಿಸ್ಥಿತಿಯೂ ಸಹ ಅದೇ. ಸ್ಪೈಡರ್​​ಮ್ಯಾನ್​​ ಸಿನಿಮಾದ ಈ ಹಿಂದಿನ ಸಿನಿಮಾನಲ್ಲಿ ಆತನ ಗೆಳೆಯರು, ಗರ್ಲ್​​ಫ್ರೆಂಡ್ ಸೇರಿದಂತೆ ಎಲ್ಲರೂ ಸ್ಪೈಡರ್​​ಮ್ಯಾನ್​​ನ ಇರುವಿಕೆಯನ್ನೇ ಮರೆತಿದ್ದಾರೆ. ವಿಡಿಯೋನಲ್ಲಿ ರಿಷಬ್ ಶೆಟ್ಟಿ, ತನ್ನವರೇ ತನ್ನನ್ನು ಮರೆತಿರುವ ಬಗ್ಗೆ ಆಶ್ಚರ್ಯ ಪಡುತ್ತಿದ್ದಾಗ ರಿಷಬ್ ಎದುರು ಸ್ಪೈಡರ್​​ಮ್ಯಾನ್ ಬರುತ್ತಾನೆ, ‘ನೀನು ಹೇಗೆ ಇದನ್ನೆಲ್ಲ ನಿಭಾಯಿಸುತ್ತಿದ್ದೀಯ’ ಎಂದು ರಿಷಬ್ ಶೆಟ್ಟಿ ಸ್ಪೈಡರ್​​ಮ್ಯಾನ್ ಅನ್ನು ಕೇಳಿದಾಗ ‘ಸ್ಪೈಡರ್​ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಸಿನಿಮಾದ ಟೀಸರ್ ಪ್ರದರ್ಶನ ಆಗುತ್ತದೆ.

ಇದನ್ನೂ ಓದಿ:‘ರಿಷಬ್ ಶೆಟ್ಟಿ ಫೌಂಡೇಷನ್’ ಮೂಲಕ ಬಡ ಮಕ್ಕಳ ಸಹಾಯಕ್ಕೆ ನಿಂತ ಡಿವೈನ್ ಸ್ಟಾರ್

‘ಯಾರು ಎಲ್ಲವನ್ನೂ ಕಳೆದುಕೊಂಡರೂ ಮತ್ತೆ ಮೊದಲಿನಿಂದ ಶುರು ಮಾಡ್ತಾನೋ ಅವನೇ ನಿಜವಾದ ಹೀರೋ, ಥಿಯೇಟರ್​​ಗಳಲ್ಲಿ ಭೇಟಿ ಆಗೋಣ, ಸ್ಪೈಡರ್​ ಮ್ಯಾನ್ ಸಿನಿಮಾ ಇದೇ 30ಕ್ಕೆ ಬಿಡುಗಡೆ ಆಗುತ್ತಿದೆ’ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.

Rishab Shetty x Spider-Man: Brand New Day | Exclusively in cinemas July 30

‘ಸ್ಪೈಡರ್​​ಮ್ಯಾನ್’ ಸರಣಿಯ ಹೊಸ ಸಿನಿಮಾ ಇದೇ ಜುಲೈ 30ಕ್ಕೆ ಬಿಡುಗಡೆ ಆಗುತ್ತಿದೆ. ಈ ಸಿನಿಮಾಕ್ಕೆ ‘ಬ್ರ್ಯಾಂಡ್ ನ್ಯೂ ಡೇ’ ಎಂದು ಹೆಸರಿಡಲಾಗಿದೆ. ಈ ಸಿನಿಮಾನಲ್ಲಿ ಹಲ್ಕ್ ಸೇರಿದಂತೆ ಹಲವರ ವಿರುದ್ಧ ‘ಸ್ಪೈಡರ್​​ ಮ್ಯಾನ್’ ಹೋರಾಡುತ್ತಿದ್ದಾನೆ. ಒಟ್ಟಾರೆ, ಈ ಹಿಂದಿನ ಸಿನಿಮಾಗಳಿಗಿಂತಲೂ ಭಿನ್ನವಾದ ಕತೆಯನ್ನು ಈ ಹೊಸ ಸಿನಿಮಾ ಒಳಗೊಂಡಿದೆ. ಸಿನಿಮಾದ ಅಡ್ವಾನ್ಸ್ ಬುಕಿಂಗ್ ಈಗಾಗಲೇ ಆರಂಭವಾಗಿದ್ದು, ಬುಕಿಂಗ್ ಜೋರಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us