AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ ಬ್ಲಾಕ್ ಬಸ್ಟರ್ ಆಗುವ ಹಾದಿಯಲ್ಲಿ ಹಾಲಿವುಡ್ ಸಿನಿಮಾ ‘ದಿ ಆಡಸ್ಸಿ’, ಗಳಿಸಿರುವುದೆಷ್ಟು?

The Odyssey Collection: ಭಾರತದ ಪ್ರಮುಖ ಮೆಟ್ರೊ ನಗರಗಳಲ್ಲಿ ಮಾತ್ರವೇ ‘ದಿ ಆಡಸ್ಸಿ’ ಸಿನಿಮಾ ಬಿಡುಗಡೆ ಆಗಿದೆಯಾದರೂ, ಸಿನಿಮಾ ಭರ್ಜರಿ ಗಳಿಕೆಯನ್ನೇ ಮಾಡುತ್ತಿದೆ. ವಿಶ್ವ ಬಾಕ್ಸ್ ಆಫೀಸ್​​ನಲ್ಲಿ ದಾಖಲೆ ಮೊತ್ತವನ್ನು ‘ದಿ ಆಡಸ್ಸಿ’ ಸಿನಿಮಾ ಬಾಚಿಕೊಳ್ಳುತ್ತಿದೆ. ಅದರ ಜೊತೆಗೆ ಭಾರತದಲ್ಲಿಯೂ ಸಹ ಬಾಕ್ಸ್ ಆಫೀಸ್​​ನಲ್ಲಿ ಭರವಸೆಯ ಓಟ ಓಡುತ್ತಿದೆ ಈ ಸಿನಿಮಾ. ಭಾರತದಲ್ಲಿ ಈ ಸಿನಿಮಾ ಬ್ಲಾಕ್ ಬಸ್ಟರ್ ಆಗುವ ಎಲ್ಲ ಭರವಸೆಗಳನ್ನೂ ಮೂಡಿಸಿದೆ.

ಭಾರತದಲ್ಲಿ ಬ್ಲಾಕ್ ಬಸ್ಟರ್ ಆಗುವ ಹಾದಿಯಲ್ಲಿ ಹಾಲಿವುಡ್ ಸಿನಿಮಾ ‘ದಿ ಆಡಸ್ಸಿ’, ಗಳಿಸಿರುವುದೆಷ್ಟು?
The Odyssey
ಮಂಜುನಾಥ ಸಿ.
|

Updated on:Jul 19, 2026 | 9:12 PM

Share

ವಿಶ್ವ ಸಿನಿಮಾ (Cinema) ರಂಗದ ಬಹು ನಿರೀಕ್ಷಿತ ಸಿನಿಮಾ ಎನಿಸಿಕೊಂಡಿದ್ದ ‘ದಿ ಆಡಸ್ಸಿ’ ಬಿಡುಗಡೆ ಆಗಿ ಎರಡು ದಿನಗಳಾಗಿವೆ. ಭಾರತದಲ್ಲೂ ಸಹ ಈ ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆಗಳಿದ್ದವು. ಭಾರತದ ಪ್ರಮುಖ ಮೆಟ್ರೊ ನಗರಗಳಲ್ಲಿ ಮಾತ್ರವೇ ‘ದಿ ಆಡಸ್ಸಿ’ ಸಿನಿಮಾ ಬಿಡುಗಡೆ ಆಗಿದೆಯಾದರೂ, ಸಿನಿಮಾ ಭರ್ಜರಿ ಗಳಿಕೆಯನ್ನೇ ಮಾಡುತ್ತಿದೆ. ವಿಶ್ವ ಬಾಕ್ಸ್ ಆಫೀಸ್​​ನಲ್ಲಿ ದಾಖಲೆ ಮೊತ್ತವನ್ನು ‘ದಿ ಆಡಸ್ಸಿ’ ಸಿನಿಮಾ ಬಾಚಿಕೊಳ್ಳುತ್ತಿದೆ. ಅದರ ಜೊತೆಗೆ ಭಾರತದಲ್ಲಿಯೂ ಸಹ ಬಾಕ್ಸ್ ಆಫೀಸ್​​ನಲ್ಲಿ ಭರವಸೆಯ ಓಟ ಓಡುತ್ತಿದೆ ಈ ಸಿನಿಮಾ. ಭಾರತದಲ್ಲಿ ಈ ಸಿನಿಮಾ ಬ್ಲಾಕ್ ಬಸ್ಟರ್ ಆಗುವ ಎಲ್ಲ ಭರವಸೆಗಳನ್ನೂ ಮೂಡಿಸಿದೆ.

ಮೊದಲ ದಿನ ಈ ಸಿನಿಮಾ ಭಾರತದ ಬಾಕ್ಸ್ ಆಫೀಸ್​​ನಲ್ಲಿ ಸುಮಾರು 17.40 ಕೋಟಿ ರೂಪಾಯಿ ಹಣ ಗಳಿಕೆ ಮಾಡಿತ್ತು. ಆದರೆ ಎರಡನೇ ದಿನ ಗಳಿಕೆಯ ಮೊತ್ತದಲ್ಲಿ ಸುಮಾರು 30% ಏರಿಕೆ ಆಗಿದ್ದು, ಎರಡನೇ ದಿನದ ಕಲೆಕ್ಷನ್ ಸುಮಾರು 25.50 ಕೋಟಿ ರೂಪಾಯಿಗಳಾಗಿವೆ. ಆ ಮೂಲಕ ಎರಡು ದಿನಕ್ಕೆ ‘ದಿ ಆಡಸ್ಸಿ’ ಹಾಲಿವುಡ್ ಸಿನಿಮಾ ಭಾರತದಲ್ಲಿ 45 ಕೋಟಿಗೂ ಹೆಚ್ಚು ಮೊತ್ತ ಕಲೆಹಾಕಿದ್ದು, ಭಾನುವಾರದ ಗಳಿಕೆ ಈ ಸಿನಿಮಾವನ್ನು ಅರ್ಧ ಶತಕ ದಾಟಿಸುವುದು ಖಾತ್ರಿ ಆಗಿದೆ.

ಇದನ್ನೂ ಓದಿ:ಮೊದಲ ದಿನವೇ 480 ಕೋಟಿ ಗಳಿಸಿದ ‘ಆಡಸ್ಸಿ’, ಭಾರತದಲ್ಲಿ ಗಳಿಸ್ಸಿದ್ದೆಷ್ಟು?

ಮ್ಯಾಟ್ ಡ್ಯಾಮನ್, ಟಾಮ್ ಹಾಲೆಂಡ್, ಅನ್ನಾ ಹಾಥ್ವೇ ಮತ್ತು ಝೆಂಡಾಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಸಿನಿಮಾ, ಭಾರತದಲ್ಲಿ ತನ್ನ ಮೊದಲ ವಾರಾಂತ್ಯಕ್ಕೆ ಸುಮಾರು 70 ಕೋಟಿ ರೂಪಾಯಿ ಗಳಿಸುವ ನಿರೀಕ್ಷೆ ಇದೆ. ಭಾನುವಾರದ ಕಲೆಕ್ಷನ್, ಶನಿವಾರಕ್ಕಿಂತಲೂ ಹೆಚ್ಚಾಗಲಿದೆ ಎನ್ನಲಾಗುತ್ತಿದೆ. ಒಟ್ಟಾರೆ ಭಾರತದಲ್ಲಿ ಈ ಸಿನಿಮಾ ನೂರು ಕೋಟಿ ಗಳಿಕೆ ದಾಟುವ ಸಾಧ್ಯತೆ ದಟ್ಟವಾಗಿದೆ.

‘ದಿ ಆಡಸ್ಸಿ’ ಸಿನಿಮಾ ವಿಶ್ವ ಬಾಕ್ಸ್ ಆಫೀಸ್​​ನಲ್ಲಿ ಸಹ ದೊಡ್ಡ ಗಳಿಕೆ ಮಾಡುತ್ತಿದೆ. ಕೇವಲ ಎರಡೇ ದಿನದಲ್ಲಿ ಈ ಸಿನಿಮಾ 2 ಸಾವಿರ ಕೋಟಿಗೂ ಹೆಚ್ಚು ಮೊತ್ತವನ್ನು ವಿಶ್ವ ಬಾಕ್ಸ್ ಆಫೀಸ್​​ನಲ್ಲಿ ಗಳಿಕೆ ಮಾಡಿದೆ. ಆ ಮೂಲಕ ಕ್ರಿಸ್ಟೊಫರ್ ನೋಲನ್ ನಿರ್ದೇಶನದ ಸಿನಿಮಾಗಳಲ್ಲಿಯೇ ಅತಿ ಹೆಚ್ಚು ಹಣ ಬಾಚಿದ ಸಿನಿಮಾ ಇದೆನಿಸಿಕೊಂಡಿದೆ. ಈ ಸಿನಿಮಾವು ಹೋಮರ್ ಎಂಬ ಕುರುಡ ಸಾಹಿತಿ ನೂರಾರು ವರ್ಷಗಳ ಹಿಂದೆ ಬರೆದಿದ್ದ ಸಾಹಿತ್ಯವನ್ನು ಆಧರಿಸಿ ನಿರ್ಮಿಸಲಾಗಿರುವ ಸಿನಿಮಾ ಆಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:03 pm, Sun, 19 July 26

Follow Us
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ಬೀದರ್‌ನ ದಟ್ಟ ಅರಣ್ಯದಲ್ಲಿ ಪತ್ತೆಯಾಯ್ತು ಪುರಾತನ ವಿಷ್ಣು ದೇವಸ್ಥಾನ!
ಬೀದರ್‌ನ ದಟ್ಟ ಅರಣ್ಯದಲ್ಲಿ ಪತ್ತೆಯಾಯ್ತು ಪುರಾತನ ವಿಷ್ಣು ದೇವಸ್ಥಾನ!
ರಾತ್ರಿ ಸುರಿದ ಭಾರಿ ಮಳೆಗೆ ಆನೇಕಲ್ ತತ್ತರ: ಅಂಡರ್‌ಪಾಸ್​​ ಜಲಾವೃತ
ರಾತ್ರಿ ಸುರಿದ ಭಾರಿ ಮಳೆಗೆ ಆನೇಕಲ್ ತತ್ತರ: ಅಂಡರ್‌ಪಾಸ್​​ ಜಲಾವೃತ