AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿಗರ ಲೂಟಿ ಮಾಡುತ್ತಿರುವ ತಮಿಳು ಸಿನಿಮಾ ‘ಜನ ನಾಯಗನ್’

Jana Naayagan movie ticket price: ವಿಜಯ್ ಅವರ ಅಭಿಮಾನಿಗಳು ‘ಜನನ ನಾಯಗನ್’ ಸಿನಿಮಾ ವೀಕ್ಷಣೆಗೆ ಮುಗಿ ಬೀಳುತ್ತಿದ್ದಾರೆ. ಈಗಾಗಲೇ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿದೆ. ಬೇರೆ ನಗರಗಳಲ್ಲಿ ಸಾಧಾರಣವಾಗಿರುವ ಟಿಕೆಟ್ ದರ, ಬೆಂಗಳೂರಿನಲ್ಲಿ ಮಾತ್ರ ಗಗನಕ್ಕೇರಿದೆ. ಆ ಮೂಲಕ ಬೆಂಗಳೂರಿಗರ ಲೂಟಿ ಮಾಡುತ್ತಿದ್ದಾನೆ, ‘ಜನ ನಾಯಕ’.

ಬೆಂಗಳೂರಿಗರ ಲೂಟಿ ಮಾಡುತ್ತಿರುವ ತಮಿಳು ಸಿನಿಮಾ ‘ಜನ ನಾಯಗನ್’
Jana Nayagan1
ಮಂಜುನಾಥ ಸಿ.
| Edited By: |

Updated on:Jul 22, 2026 | 12:24 PM

Share

ತಮಿಳುನಾಡು ಸಿಎಂ ವಿಜಯ್ (Vijay) ನಟನೆಯ ‘ಜನ ನಾಯಗನ್’ ಸಿನಿಮಾ ಬಿಡುಗಡೆ ಆಗಲಿದೆ. ಜುಲೈ 23ಕ್ಕೆ ಸಿನಿಮಾ ಬಿಡುಗಡೆ ಆಗುತ್ತಿದ್ದು, ಇದು ವಿಜಯ್ ಅವರ ಕೊನೆಯ ಸಿನಿಮಾ ಎಂದು ಚಿತ್ರತಂಡ ಮೊದಲೇ ಪ್ರಚಾರ ಮಾಡಿತ್ತು. ಸಹಜವಾಗಿಯೇ ಸಿನಿಮಾ ಅಭಿಮಾನಿಗಳು, ವಿಜಯ್ ಅವರ ಅಭಿಮಾನಿಗಳು ಸಿನಿಮಾ ವೀಕ್ಷಣೆಗೆ ಮುಗಿ ಬೀಳುತ್ತಿದ್ದಾರೆ. ಈಗಾಗಲೇ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿದೆ. ಬೇರೆ ನಗರಗಳಲ್ಲಿ ಸಾಧಾರಣವಾಗಿರುವ ಟಿಕೆಟ್ ದರ, ಬೆಂಗಳೂರಿನಲ್ಲಿ ಮಾತ್ರ ಗಗನಕ್ಕೇರಿದೆ. ಆ ಮೂಲಕ ಬೆಂಗಳೂರಿಗರ ಲೂಟಿ ಮಾಡುತ್ತಿದ್ದಾನೆ, ‘ಜನ ನಾಯಕ’.

‘ಜನ ನಾಯಗನ್’ ಸಿನಿಮಾದ ಪ್ರೀಮಿಯರ್ ಶೋ ಅಡ್ವಾನ್ಸ್ ಬುಕಿಂಗ್ ಬೆಂಗಳೂರಿನಲ್ಲಿ ಓಪನ್ ಆಗಿದೆ. ಇತರೆ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಪ್ರೀಮಿಯರ್ ಶೋ ಟಿಕೆಟ್ ಬೆಲೆ ಹಲವು ಪಟ್ಟು ಹೆಚ್ಚಿದೆ. ಬೆಂಗಳೂರಿನಲ್ಲಿ ‘ಜನ ನಾಯನಗ್’ ಸಿನಿಮಾವನ್ನು ಜುಲೈ 23ರ ಬೆಳಿಗಿನ ಜಾವ 6:30 ಕ್ಕೆ ಪ್ರದರ್ಶಿಸಲಾಗುತ್ತಿದೆ. ಸದ್ಯಕ್ಕೆ ಈ ಶೋಗಳಿಗೆ ಮಾತ್ರವೇ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿದ್ದು, ಈ ಪ್ರೀಮಿಯರ್ ಶೋ ಟಿಕೆಟ್​​ಗಳ ಬೆಲೆಯನ್ನು ಗಗನಕ್ಕೇರಿಸಲಾಗಿದೆ.

ಬೆಂಗಳೂರಿನಲ್ಲಿ ಜುಲೈ 23ರ ಬೆಳಿಗಿನ ಶೋಗಳಿಗೆ ಕನಿಷ್ಟ ಟಿಕೆಟ್ ದರ 1000 ರೂಪಾಯಿಗಳಿವೆ. ಗರಿಷ್ಠ ಟಿಕೆಟ್ ದರ 2500 ರೂಪಾಯಿಗಳು. ಕೆಲ ಮಲ್ಟಿಪ್ಲೆಕ್ಸ್​​ಗಳಂತೂ ಕನಿಷ್ಟ ಟಿಕೆಟ್ ಬೆಲೆ 1500 ರೂಪಾಯಿಗಳಿವೆ, ಕೆಲವುಗಳಲ್ಲಿ 1700. ಸಿಂಗಲ್ ಸ್ಕ್ರೀನ್​​ಗಳು ಸಹ ಬೆಲೆ ಏರಿಸುವುದರಲ್ಲಿ ಹಿಂದೆ ಬಿದ್ದಿಲ್ಲ, ಸಿಂಗಲ್ ಸ್ಕ್ರೀನ್​​ಗಳಲ್ಲಿ ‘ಜನ ನಾಯಗನ್’ ಸಿನಿಮಾ ಕನಿಷ್ಟ ಟಿಕೆಟ್ ಬೆಲೆ 800 ಹಾಗೂ 900 ರೂಪಾಯಿಗಳು. ಕೆಲ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಮಲ್ಟಿಪ್ಲೆಕ್ಸ್​​ಗಳಿಗೂ ಕಾಂಪಿಟೇಷನ್ ಕೊಟ್ಟಿವೆ ಬೆಲೆ ಏರಿಸುವುದರಲ್ಲಿ.

ಇದನ್ನೂ ಓದಿ:ಬಹಿರಂಗವಾಗಿ ವಿಜಯ್, ತ್ರಿಷಾ ಬಗ್ಗೆ ಹಾಸ್ಯ ಮಾಡಿದ ಮಲಯಾಳಂ ನಟ; ವಿಡಿಯೋ ವೈರಲ್

ಚೆನ್ನೈನಲ್ಲಿ ‘ಜನ ನಾಯಗನ್’ ಸಿನಿಮಾದ ಗರಿಷ್ಠ ಟಿಕೆಟ್ ದರ 190 ರೂಪಾಯಿಗಳು. ಬಾಲ್ಕನಿ ವಿತ್ ಎಸಿ ಟಿಕೆಟ್ ಖರೀದಿಸಿದರೂ ಸಹ ನೀವು ಕೊಡಬೇಕಿರುವ ಹಣ 190 ರೂಪಾಯಿಗಳು ಮಾತ್ರ. ಇನ್ನು ಹೈದರಾಬಾದ್​​ನಲ್ಲಿ ಇದೇ ಸಿನಿಮಾದ ಗರಿಷ್ಟ ಟಿಕೆಟ್ ದರ 300 ರೂಪಾಯಿ ಇಲ್ಲೂ ಸಹ 300 ರೂಪಾಯಿ ಕೊಟ್ಟರೆ ನಿಮಗೆ ಏಸಿ-ಬಾಲ್ಕನಿ ಟಿಕೆಟ್ ದೊರಕುತ್ತದೆ. ಮುಂಬೈನಲ್ಲೂ ಸಹ ಟಿಕೆಟ್ ದರ ಹೆಚ್ಚೇನೂ ಇಲ್ಲ. ಅಲ್ಲಿಯೂ ಸಹ ಗರಿಷ್ಠ ಟಿಕೆಟ್ ದರ 300 ರೂಪಾಯಿ ತೀರಾ ಹೆಚ್ಚೆಂದರೆ 350 ರೂಪಾಯಿಗಳು. ವಿಶೇಷವೆಂದರೆ ಮುಂಬೈನಲ್ಲಿ ಸಹ ಬೆಂಗಳೂರಿನಂತೆ ಬೆಳ್ಳಂಬೆಳಿಗ್ಗೆ ಶೋ ಪ್ರದರ್ಶಿಸಲಾಗುತ್ತಿದೆ. ಆದರೂ ಸಹ 300 ರೂಪಾಯಿಗೆ ಟಿಕೆಟ್ ಮಾರಾಟ ಮಾಡಲಾಗುತ್ತಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ಕನಿಷ್ಠ ಟಿಕೆಟ್ ದರವೇ 1000ಕ್ಕೂ ಮೇಲಿದೆ. ಇದೇಂಥಹಾ ನ್ಯಾಯ?

ಬೆಂಗಳೂರಿನ ಸಿನಿಮಾ ಪ್ರೇಮಿಗಳನ್ನು ಪರ ಭಾಷೆ ಸಿನಿಮಾ ಮಂದಿ ಹೀಗೆ ಹರಕೆಯ ಕುರಿ ಮಾಡುತ್ತಿರುವುದು ಇದು ಮೊದಲೇನೂ ಅಲ್ಲ. ಪ್ರತಿ ಬಾರಿ ಪರಭಾಷೆಯ ದೊಡ್ಡ ಸಿನಿಮಾ ಬಿಡುಗಡೆ ಆದಾಗ ಇದೇ ಕತೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಏಕರೂಪ ಟಿಕೆಟ್ ದರದ ಚರ್ಚೆ ಆಗಿತ್ತು, ಆದರೆ ಕನ್ನಡದ ಕೆಲ ನಿರ್ಮಾಣ ಸಂಸ್ಥೆಗಳೇ ನ್ಯಾಯಾಲಯಕ್ಕೆ ಹೋಗಿ ಅದಕ್ಕೆ ತಡೆ ತಂದವು. ಅದರ ಪರಿಣಾಮವನ್ನು ಕನ್ನಡ ಸಿನಿಮಾ ಪ್ರೇಮಿಗಳು ಅನುಭವಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:36 pm, Sun, 19 July 26

Follow Us