
ಹೀರೋ ಮತ್ತು ಹೀರೋಯಿನ್‌ಗಳ ಬಾಲ್ಯದ ಫೋಟೋಗಳು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತವೆ. ನೆಟ್ಟಿಗರು ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕ, ನಾಯಕಿಯರ ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಆಗಾಗ ಸೆಲೆಬ್ರಿಟಿಗಳು ಕೂಡ ತಮ್ಮ ಬಾಲ್ಯದ ಫೋಟೋ ಶೇರ್ ಮಾಡಿಕೊಳ್ಳುತ್ತಾರೆ. ಸದ್ಯ ಟಾಲಿವುಡ್ ಯುವ ಹೀರೋನ ಫೋಟೋ ವೈರಲ್ ಆಗಿದೆ. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ (Sachin Tendulkar) ಜೊತೆ ಇರೋ ಬಾಲಕ ಈಗ ಹೀರೋ ಆಗಿದ್ದಾರೆ. ಅವರು ಹೆಸರು ರೋಷನ್ ಮೇಕಾ (Roshan Meka).
ರೋಷನ್ ತಂದೆ ಶ್ರೀಕಾಂತ್ ಅವರು ಟಾಲಿವುಡ್ನಲ್ಲಿ ಹೆಸರು ಮಾಡಿದ್ದಾರೆ. ಅವರು ಕನ್ನಡದಲ್ಲೂ ನಟಿಸಿದ್ದಾರೆ. ಮಾಲಾಶ್ರೀ ನಟನೆಯ ‘ಹೆಂಡ್ತಿ ಹೇಳಿದರೆ ಕೇಳಬೇಕು’, ‘ಯುಗಾದಿ’, ‘ದಿ ವಿಲನ್’, ‘ಜೇಮ್ಸ್’ ಸಿನಿಮಾದಲ್ಲಿ ಶ್ರೀಕಾಂತ್ ಬಣ್ಣ ಹಚ್ಚಿದ್ದಾರೆ. ಅವರ ಮಗನೇ ರೋಷನ್. ಸಚಿನ್ ತೆಂಡೂಲ್ಕರ್ ಜೊತೆ ನಿಂತಿರುವವರು ಕೂಡ ರೋಷನ್ ಅವರೇ.
ಸದ್ಯ ರೋಷನ್ ಮೇಕಾ ಅವರು ಟಾಲಿವುಡ್ನಲ್ಲಿ ಗುರುತಿಸಿಕೊಂಡಿದ್ದಾರೆ. ಶ್ರೀಕಾಂತ್ ಹೀರೋ ಆಗಿ ಹಲವು ಅತ್ಯುತ್ತಮ ಚಿತ್ರಗಳಲ್ಲಿ ನಟಿಸಿದ್ದಾರೆ. ಈಗ ಅವರ ಮಗ ರೋಷನ್ ಹೀರೋ ಆಗಿ ಸಿನಿಮಾ ಮಾಡುತ್ತಿದ್ದಾರೆ. ರೋಷನ್ ಬಾಲ್ಯದಲ್ಲಿದ್ದಾಗ ಸಚಿನ್ ಅವರನ್ನು ಭೇಟಿ ಆಗುವ ಅವಕಾಶ ಸಿಕ್ಕಿತ್ತು. ಆ ಫೋಟೋ ಈಗ ವೈರಲ್ ಆಗುತ್ತಿದೆ.
‘ರುದ್ರಮಾದೇವಿ’ ಚಿತ್ರದ ಮೂಲಕ ರೋಷನ್ ಬಾಲ ಕಲಾವಿದನಾಗಿ ಪರಿಚಯವಾದರು. ನಂತರ 2016ರಲ್ಲಿ ‘ನಿರ್ಮಲಾ ಕಾನ್ವೆಂಟ್’ ಮೂಲಕ ಹೀರೋ ಆದರು. ‘ಪೆಳ್ಳಿ ಸಂದಡಿ’ ಚಿತ್ರದ ಮೂಲಕ ದೊಡ್ಡ ಯಶಸ್ಸು ಪಡೆದರು. ಶ್ರೀಲೀಲಾ ಈ ಚಿತ್ರಕ್ಕೆ ನಾಯಕಿ. ಶ್ರೀಲೀಲಾಗೆ ಟಾಲಿವುಡ್ ಬೇಡಿಕೆ ಹೆಚ್ಚಲು ಈ ಸಿನಿಮಾ ಮುಖ್ಯ ಕಾರಣ ಆಯಿತು.
ಇದನ್ನೂ ಓದಿ: ವಿಜಯ್ ದೇವರಕೊಂಡ ಸಿನಿಮಾದಿಂದ ಹೊರನಡೆದ ಶ್ರೀಲೀಲಾ: ಬದಲಿ ನಟಿ ರಶ್ಮಿಕಾ?
ಸದ್ಯ ರೋಷನ್ ಹೊಸ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ‘ವೃಷಭ’ ಎಂದು ಶೀರ್ಷಿಕೆ ಇಡಲಾಗಿದೆ. ಈ ಚಿತ್ರದಲ್ಲಿ ಮೋಹನ್ ಲಾಲ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮೋಹನ್ಲಾಲ್ ಜೊತೆ ನಿಂತು ಅವರು ಪೋಸ್ ಕೊಟ್ಟಿದ್ದಾರೆ. ಈ ಫೋಟೋ ಕೂಡ ವೈರಲ್ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:20 am, Sat, 4 November 23