Jr NTR: ಜಾಗತಿಕ ಮಟ್ಟದ ಬ್ರ್ಯಾಂಡ್​ಗೆ ಜೂ. ಎನ್​ಟಿಆರ್ ರಾಯಭಾರಿ​; ಸಿಗುತ್ತಿದೆ ಕೋಟ್ಯಂತರ ರೂಪಾಯಿ ಸಂಭಾವನೆ

|

Updated on: May 14, 2023 | 11:28 AM

ಜೂನಿಯರ್​ ಎನ್​ಟಿಆರ್​ ಅವರಿಗೆ ಇರುವ ಜನಪ್ರಿಯತೆಯನ್ನು ಬಳಸಿಕೊಳ್ಳಲು ಅನೇಕ ಕಂಪನಿಗಳು ಮುಂದೆ ಬಂದಿವೆ. ಅದಕ್ಕಾಗಿ ಬಹುಕೋಟಿ ರೂಪಾಯಿ ಸಂಭಾವನೆ ನೀಡಲು ಕೂಡ ಸಿದ್ಧವಾಗಿವೆ.

Jr NTR: ಜಾಗತಿಕ ಮಟ್ಟದ ಬ್ರ್ಯಾಂಡ್​ಗೆ ಜೂ. ಎನ್​ಟಿಆರ್ ರಾಯಭಾರಿ​; ಸಿಗುತ್ತಿದೆ ಕೋಟ್ಯಂತರ ರೂಪಾಯಿ ಸಂಭಾವನೆ
ಜೂನಿಯರ್​ ಎನ್​ಟಿಆರ್​
Follow us on

ನಟ ಜೂನಿಯರ್ ಎನ್​ಟಿಆರ್​ (Jr NTR) ಅವರಿಗೆ ಚಿತ್ರರಂಗದಲ್ಲಿ ಸಖತ್​ ಬೇಡಿಕೆ ಇದೆ. ಮೊದಲು ಟಾಲಿವುಡ್​ಗೆ ಮಾತ್ರ ಸೀಮಿತ ಆಗಿದ್ದ ಅವರು ಈಗ ಪ್ಯಾನ್​ ಇಂಡಿಯಾ ಹೀರೋ ಆಗಿ ಮಿಂಚುತ್ತಿದ್ದಾರೆ. ಅಷ್ಟೇ ಅಲ್ಲದೇ, ಜಾಗತಿಕ ಮಟ್ಟದಲ್ಲೂ ಅವರಿಗೆ ಬೇಡಿಕೆ ಬಂದಿದೆ. ಅದಕ್ಕೆ ಕಾರಣ ಆಗಿದ್ದು ಆರ್​ಆರ್​ಆರ್​’ (RRR) ಸಿನಿಮಾದ ಸಕ್ಸಸ್​. ರಾಜಮೌಳಿ ನಿರ್ದೇಶನದ ಈ ಸಿನಿಮಾ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ಬಾಚಿಕೊಂಡಿತು. ಈ ಚಿತ್ರದ ‘ನಾಟು ನಾಟು..’ ಹಾಡಿಗೆ ಆಸ್ಕರ್​ ಪ್ರಶಸ್ತಿ ಕೂಡ ಸಿಕ್ಕಿತು. ಆ ಬಳಿಕ ರಾಮ್​ ಚರಣ್​ ಮತ್ತು ಜೂನಿಯರ್​ ಎನ್​ಟಿಆರ್​ ಅವರು ವಿಶ್ವಮಟ್ಟದಲ್ಲಿ ಖ್ಯಾತಿ ಪಡೆದರು. ವಿಶ್ವಾದ್ಯಂತ ಫೇಮಸ್​ ಆಗಿರುವ ಮೆಕ್​ ಡೊನಾಲ್ಡ್ಸ್​ (Mcdonalds) ಕಂಪನಿಗೆ ಈಗ ಜೂನಿಯರ್​ ಎನ್​ಟಿಆರ್​ ಅವರು ಪ್ರಚಾರ ರಾಯಭಾರಿ ಆಗಿದ್ದಾರೆ. ಅದರಿಂದ ಅವರಿಗೆ ಸಿಕ್ಕಾಪಟ್ಟೆ ಸಂಭಾವನೆ ಸಿಗುತ್ತಿದೆ.

ಜೂನಿಯರ್​ ಎನ್​ಟಿಆರ್​ ಅವರಿಗೆ ಇರುವ ಜನಪ್ರಿಯತೆಯನ್ನು ಬಳಸಿಕೊಳ್ಳಲು ಅನೇಕ ಕಂಪನಿಗಳು ಮುಂದೆ ಬಂದಿವೆ. ಅದಕ್ಕಾಗಿ ಬಹುಕೋಟಿ ರೂಪಾಯಿ ಸಂಭಾವನೆ ನೀಡಲು ಕೂಡ ಸಿದ್ಧವಾಗಿವೆ. ಸದ್ಯಕ್ಕೆ ಜೂನಿಯರ್​ ಎನ್​ಟಿಆರ್​ ಅವರು ತಮ್ಮ 30ನೇ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರಕ್ಕೆ ಕೊರಟಾಲ ಶಿವ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ಕೆಲಸಗಳ ನಡುವಲ್ಲೇ ಮೆಕ್​ ಡೊನಾಲ್ಡ್ಸ್​ ಜಾಹೀರಾತಿನ ಶೂಟಿಂಗ್​​ನಲ್ಲಿ ಅವರು ಭಾಗಿ ಆಗಿದ್ದಾರೆ.

ಇದನ್ನೂ ಓದಿ: RRR Movie: ಜಪಾನ್​ನಲ್ಲಿ 200 ದಿನ ಪ್ರದರ್ಶನ ಕಂಡ ‘ಆರ್​ಆರ್​ಆರ್​’ ಸಿನಿಮಾ; ಈವರೆಗೂ ಆದ ಕಲೆಕ್ಷನ್​ ಎಷ್ಟು?

ಜೂನಿಯರ್​ ಎನ್​ಟಿಆರ್ ಬಾಲಿವುಡ್​ಗೆ ಕಾಲಿಡಲು ಸಜ್ಜಾಗಿದ್ದಾರೆ. ಅದೂ ದೊಡ್ಡ ನಿರ್ಮಾಣ ಸಂಸ್ಥೆಯ ಸಿನಿಮಾ ಮೂಲಕ ಎಂಬುದು ವಿಶೇಷ. ‘ವಾರ್’ ಸಿನಿಮಾದ 2ನೇ ಭಾಗದಲ್ಲಿ ನಟ ಹೃತಿಕ್ ರೋಷನ್ ಜೊತೆಗೆ ಜೂನಿಯರ್​ ಎನ್​ಟಿಆರ್ ಕಾಣಿಸಿಕೊಳ್ಳಲಿದ್ದಾರೆ. ‘ವಾರ್’ ಚಿತ್ರದಲ್ಲಿ ಹೃತಿಕ್ ರೋಷನ್ ಜೊತೆಗೆ ಟೈಗರ್​ ಶ್ರಾಫ್ ನಟಿಸಿದ್ದರು. ಇದೀಗ ‘ವಾರ್​ 2’ ಸಿನಿಮಾದಲ್ಲಿ ಹೃತಿಕ್​ ರೋಷನ್​ ಮತ್ತು ಜೂನಿಯರ್​ ಎನ್​ಟಿಆರ್​ ತೆರೆಹಂಚಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ ಯಶ್​ರಾಜ್​ ಫಿಲ್ಮ್ಸ್​ ಬಂಡವಾಳ ಹೂಡಲಿದ್ದು, ಸಿದ್ದಾರ್ಥ್ ಆನಂದ್ ನಿರ್ದೇಶನ ಮಾಡಲಿದ್ದಾರೆ.

ಇದನ್ನೂ ಓದಿ: ವಿದೇಶದಲ್ಲಿ ‘ಆರ್​ಆರ್​ಆರ್​’ ಚಿತ್ರಕ್ಕಿಂತಲೂ ಹೆಚ್ಚು ಬೇಡಿಕೆ ಸೃಷ್ಟಿಸಿಕೊಂಡ ‘ಸಲಾರ್​’; ಎಷ್ಟಾಯಿತು ಬಿಸ್ನೆಸ್​?

ಕೊರಟಾಲ ಶಿವ ನಿರ್ದೇಶನದ ಸಿನಿಮಾಗೆ ಶೂಟಿಂಗ್​ ನಡೆಯುತ್ತಿದೆ. ಆ ಚಿತ್ರದಲ್ಲಿ ಜೂನಿಯರ್​ ಎನ್​ಟಿಆರ್​ಗೆ ಜೋಡಿಯಾಗಿ ಬಾಲಿವುಡ್​ ಬೆಡಗಿ ಜಾನ್ವಿ ಕಪೂರ್ ನಟಿಸುತ್ತಿದ್ದಾರೆ. ಆ ಸಿನಿಮಾದ ಕೆಲಸಗಳು ಪೂರ್ಣಗೊಂಡ ಬಳಿಕ ಪ್ರಶಾಂತ್ ನೀಲ್ ನಿರ್ದೇಶನದ ಹೊಸ ಚಿತ್ರದಲ್ಲಿ ಜೂನಿಯರ್​ ಎನ್​ಟಿಆರ್ ಅಭಿನಯಿಸಲಿದ್ದಾರೆ. ಈ ಎರಡೂ ಸಿನಿಮಾಗಳ ಕೆಲಸಗಳು ಮುಗಿದ ನಂತರವಷ್ಟೇ ಅವರು ‘ವಾರ್ 2’ ಸಿನಿಮಾ ಶೂಟಿಂಗ್​ನಲ್ಲಿ ಭಾಗಿ ಆಗಲಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.