ರುಕ್ಮಿಣಿ ವಸಂತ್​ಗೆ ಭರ್ಜರಿ ಸ್ವಾಗತ ಕೋರಿದ ತಮಿಳು ಚಿತ್ರತಂಡ

ರುಕ್ಮಿಣಿ ವಸಂತ್ ತಮಿಳು, ತೆಲುಗು ಮತ್ತು ಮಲಯಾಳಂ ಸಿನಿಮಾಗಳಲ್ಲಿ ಒಂದರ ಹಿಂದೊಂದು ಒಳ್ಳೆಯ ಅವಕಾಶಗಳು ರುಕ್ಮಿಣಿ ಅವರನ್ನು ಅರಸಿ ಬರುತ್ತಲೇ ಇವೆ. ಈಗಾಗಲೇ ಕೆಲವು ಒಳ್ಳೆಯ ಪ್ರಾಜೆಕ್ಟ್​​ಗಳ ಭಾಗವೂ ಆಗಿದ್ದಾರೆ ರುಕ್ಮಿಣಿ ವಸಂತ್. ಇದೀಗ ಹೊಸ ತಮಿಳು ಸಿನಿಮಾ ಒಂದರಲ್ಲಿ ರುಕ್ಮಿಣಿ ನಟಿಸುತ್ತಿದ್ದು, ಆ ಚಿತ್ರತಂಡ, ರುಕ್ಮಿಣಿ ವಸಂತ್ ಅವರಿಗೆ ಭರ್ಜರಿಯಾಗಿ ಸ್ವಾಗತ ಕೋರಿದೆ.

ರುಕ್ಮಿಣಿ ವಸಂತ್​ಗೆ ಭರ್ಜರಿ ಸ್ವಾಗತ ಕೋರಿದ ತಮಿಳು ಚಿತ್ರತಂಡ
Rukmini Vasanth

Updated on: Oct 23, 2026 | 3:21 PM

ಮುಖ್ಯಾಂಶಗಳು

  • ರುಕ್ಮಿಣಿ ವಸಂತ್​​ಗೆ ಚಿತ್ರತಂಡದಿಂದ ಭರ್ಜರಿ ಸ್ವಾಗತ
  • ಹೊಸ ತಮಿಳು ಸಿನಿಮಾ ಒಪ್ಪಿಕೊಂಡ ರುಕ್ಮಿಣಿ
  • ರುಕ್ಮಿಣಿ ವಸಂತ್​​ಗೆ ಭಿನ್ನವಾಗಿ ಸ್ವಾಗತ ಕೋರಿದ ಚಿತ್ರತಂಡ

ಕನ್ನಡದ ನಟಿ ರುಕ್ಮಿಣಿ ವಸಂತ್ ಈಗ ಪ್ಯಾನ್ ಇಂಡಿಯಾ ಲೆವೆಲ್​​ನಲ್ಲಿ ಮಿಂಚುತ್ತಿದ್ದಾರೆ. ಅದರಲ್ಲೂ ತಮಿಳು, ತೆಲುಗು ಮತ್ತು ಮಲಯಾಳಂ ಸಿನಿಮಾಗಳಲ್ಲಿ ಒಂದರ ಹಿಂದೊಂದು ಒಳ್ಳೆಯ ಅವಕಾಶಗಳು ರುಕ್ಮಿಣಿ ಅವರನ್ನು ಅರಸಿ ಬರುತ್ತಲೇ ಇವೆ. ಈಗಾಗಲೇ ಕೆಲವು ಒಳ್ಳೆಯ ಪ್ರಾಜೆಕ್ಟ್​​ಗಳ ಭಾಗವೂ ಆಗಿದ್ದಾರೆ ರುಕ್ಮಿಣಿ ವಸಂತ್. ಇದೀಗ ಹೊಸ ತಮಿಳು ಸಿನಿಮಾ ಒಂದರಲ್ಲಿ ರುಕ್ಮಿಣಿ ನಟಿಸುತ್ತಿದ್ದು, ಆ ಚಿತ್ರತಂಡ, ರುಕ್ಮಿಣಿ ವಸಂತ್ ಅವರಿಗೆ ಭರ್ಜರಿಯಾಗಿ ಸ್ವಾಗತ ಕೋರಿದೆ.

ಈ ಹಿಂದೆ ತೆಲುಗಿನಲ್ಲಿ ‘ಒಕೆ ಒಕ ಜೀವಿತಂ’ ಹೆಸರಿನ ಸೂಪರ್ ಹಿಟ್ ಸಿನಿಮಾ ನೀಡಿದ್ದ ನಿರ್ದೇಶಕ ಶ್ರೀ ಕಾರ್ತಿಕ್ ಇದೀಗ ತಮಿಳಿನಲ್ಲಿ ಹೊಸ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಅವರ ಹಿಂದಿನ ಸಿನಿಮಾ ರೀತಿಯೇ ಇದೊಂದು ಫನ್ ಕತೆಯುಳ್ಳ ಸಿನಿಮಾ ಆಗಿದ್ದು, ಸಿನಿಮಾದ ಘೋಷಣೆ ಈಗಾಗಲೇ ಶ್ರೀ ಕಾರ್ತಿಕ್ ಮಾಡಿದ್ದರು, ಆದರೆ ನಾಯಕಿ ಯಾರೆಂದು ಘೋಷಿಸಿರಲಿಲ್ಲ. ನಾಯಕಿಯ ಘೋಷಣೆ ಬಗ್ಗೆ ಹಲವು ಕುತೂಹಲಕಾರಿ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದರು. ಅಂತಿಮವಾಗಿ ಅಕ್ಟೋಬರ್ 23 ರಂದು ನಾಯಕಿಯ ಘೋಷಣೆ ಮಾಡಲಿದ್ದೇವೆ ಎಂದು ಸಹ ಹೇಳಿದ್ದರು.

ಅದರಂತೆ ಇಂದು ರುಕ್ಮಿಣಿ ವಸಂತ್ ಅವರನ್ನು ನಾಯಕಿಯಾಗಿ ಘೋಷಣೆ ಮಾಡಿದ್ದಾರೆ. ಅದನ್ನೂ ಅದ್ಧೂರಿಯಾಗಿ ಸಿನಿಮಾ ಮಾದರಿಯ ವಿಡಿಯೋ ಮೂಲಕ ಈ ನಾಯಕಿಯ ರಿವೀಲ್ ಆಗಿದೆ. ಅವರ ಈ ಹಿಂದಿನ ವಿಡಿಯೋಗಳ ರೀತಿಯೇ ಶ್ರೀ ಕಾರ್ತಿಕ್ ಹಾಗೂ ಇನ್ನೂ ಇಬ್ಬರು ನಾಯಕರು ನಾಯಕಿಗಾಗಿ ಹುಡುಕಾಡುವುದು ಮತ್ತು ಕೊನೆಗೆ ಮಾತನಾಡುವ ಕ್ಯಾಮೆರಾ ಒಂದು ನಾಯಕಿಯ ಚಿತ್ರವನ್ನು ನಿರ್ದೇಶಕರಿಗೆ ಕೊಡುವುದು ಬಳಿಕ ನಿರ್ದೇಶಕ ಹಾಗೂ ನಟರು ರುಕ್ಮಿಣಿ ಅವರನ್ನು ಹುಡುಕಿಕೊಂಡು ಸಿನಿಮಾ ಸೆಟ್​​ ಒಂದಕ್ಕೆ ಹೋಗುವುದು ಹೀಗೆ ಬಲು ತಮಾಷೆಯಾಗಿ ಸಾಗುವ ವಿಡಿಯೋನಲ್ಲಿ ರುಕ್ಮಿಣಿ ವಸಂತ್ ಅವರನ್ನು ಸಖತ್ ಎಲಿವೇಷನ್​​ಗಳ ಮೂಲಕ ಭರ್ಜರಿಯಾಗಿ ತೋರಿಸಿದ್ದಾರೆ.

ರುಕ್ಮಿಣಿ ವಸಂತ್ ವಿಡಿಯೋ

Welcoming Rukmini Vasanth onboard | Rukmini & Friends | Journey to Madness Finale

ಇದನ್ನೂ ಓದಿ:ದಸರಾ ಸಂಭ್ರಮದಲ್ಲಿ ಭಾಗಿಯಾದ ರುಕ್ಮಿಣಿ ವಸಂತ್, ತಪಸ್ವಿನಿ ಪೂಣಚ್ಚ, ಸಪ್ತಮಿ ಗೌಡ

ರುಕ್ಮಿಣಿ ವಸಂತ್ ಸಹ ಕತೆ ಬಹಳ ಮೆಚ್ಚಿ, ನಿರ್ದೇಶಕರೊಟ್ಟಿಗೆ ಕೈ ಕುಲುಕುವುದರೊಂದಿಗೆ ತಾವು ಸಿನಿಮಾದ ಭಾಗ ಆಗುವುದಾಗಿ ಕನ್​​ಫರ್ಮ್ ಮಾಡುತ್ತಾರೆ. ಕೊನೆಗೆ ಇಬ್ಬರು ನಿರ್ಮಾಪಕರು ಸಹ ಎಂಟ್ರಿ ಕೊಟ್ಟು, ಎಲ್ಲರೂ ಒಟ್ಟಿಗೆ ಚಿತ್ರ ತೆಗೆದುಕೊಳ್ಳುವ ಮೂಲಕ ವಿಡಿಯೋ ಎಂಡ್ ಆಗಿದೆ.

ಈಗ ರುಕ್ಮಿಣಿ ವಸಂತ್ ನಟಿಸುತ್ತಿರುವ ತಮಿಳು ಸಿನಿಮಾಕ್ಕೆ ಹೆಸರು ಅಂತಿಮಗೊಂಡಿಲ್ಲ ಸದ್ಯಕ್ಕೆ ‘ಮ್ಯಾಡ್ ಜರ್ನಿ’ ಎಂದಷ್ಟೆ ಕರೆಯಲಾಗುತ್ತಿದೆ. ಅದಕ್ಕೆ ತಕ್ಕಂತೆ ಈಗ ಬಿಡುಗಡೆ ಆಗಿರುವ ವಿಡಿಯೋನಲ್ಲಿ ಕಾರೊಂದನ್ನು ಸಹ ತೋರಿಸಲಾಗಿದೆ. ಮೂವರು ಯುವಕರು ಪ್ರವಾಸ ಹೋದಾಗ ಎದುರಾಗುವ ಸಂಗತಿಗಳ ಬಗ್ಗೆ ಈ ಸಿನಿಮಾ ಇರಲಿದೆ ಎಂದು ಊಹಿಸಲಾಗುತ್ತಿದೆ. ಸಿನಿಮಾ ಅನ್ನು ಮ್ಯಾಡ್ ಫಿಲಮ್ಸ್ ನಿರ್ಮಾಣ ಸಂಸ್ಥೆ ನಿರ್ಮಿಸುತ್ತಿದೆ.

ರುಕ್ಮಿಣಿ ವಸಂತ್ ಪ್ರಸ್ತುತ ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಕನ್ನಡದಲ್ಲಿ ಮಾಲಾಶ್ರೀ ಅವರ ಜೊತೆಗೆ ಒಂದು ಹಾಸ್ಯ ಪ್ರಧಾನ ಥ್ರಿಲ್ಲರ್ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ತೆಲುಗಿನಲ್ಲಿ ಜೂ ಎನ್​​ಟಿಆರ್ ಜೊತೆಗೆ ‘ಡ್ರ್ಯಾಗನ್’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಮಲಯಾಳಂನಲ್ಲಿ ನಿವಿನ್ ಪೌಲಿ ಜೊತೆಗೆ ಹೊಸ ಸಿನಿಮಾನಲ್ಲಿ ನಟನೆ ಮಾಡುತ್ತಿದ್ದಾರೆ. ತಮಿಳಿನಲ್ಲಿ ಈಗ ಒಪ್ಪಿಕೊಂಡಿರುವ ಸಿನಿಮಾದ ಹೊರತಾಗಿ ಮತ್ತೊಂದು ಸಿನಿಮಾನಲ್ಲೂ ಅವರು ನಟನೆ ಮಾಡಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us