AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಶ್ ಸ್ಟಾರ್​​ಡಂ ನೋಡಿ ಹೌಹಾರಿದ ಸಾಯಿ ಪಲ್ಲವಿ; ಮೆಚ್ಚುಗೆಯ ಮಾತು

ಚೆನ್ನೈನಲ್ಲಿ ನಡೆದ 'ರಾಮಾಯಣ' ಕಾರ್ಯಕ್ರಮದಲ್ಲಿ ನಟಿ ಸಾಯಿ ಪಲ್ಲವಿ ಅವರು ಭಾಗವಹಿಸಿದ್ದರು. ಈ ವೇಳೆ ಅವರು ನಟ ಯಶ್ ಅವರ ಅಪಾರ ಜನಪ್ರಿಯತೆ ಮತ್ತು ಸ್ಟಾರ್‌ಡಮ್ ಕಂಡು ಸಂಪೂರ್ಣ ಅಚ್ಚರಿಗೊಂಡಿದ್ದಾರೆ. ಯಶ್ ಅವರು ಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸದಿದ್ದರೂ, ಅವರು ಎಲ್ಲಿಗೆ ಹೋದರೂ ಅಲ್ಲಿ ಅವರಿಗೆ ಸಿಗುವ ಹರ್ಷೋದ್ಗಾರ ಹಾಗೂ ಕ್ರೇಜ್ ನಿಜಕ್ಕೂ ತುಂಬಾ ಆಕರ್ಷಕವಾಗಿದೆ ಎಂದರು.

ಯಶ್ ಸ್ಟಾರ್​​ಡಂ ನೋಡಿ ಹೌಹಾರಿದ ಸಾಯಿ ಪಲ್ಲವಿ; ಮೆಚ್ಚುಗೆಯ ಮಾತು
ಯಶ್​-ಸಾಯಿ ಪಲ್ಲವಿ
ರಾಜೇಶ್ ದುಗ್ಗುಮನೆ
|

Updated on: Oct 22, 2026 | 7:01 AM

Share

ಮುಖ್ಯಾಂಶಗಳು

  • ಯಶ್ ಸ್ಟಾರ್‌ಡಮ್ ಕಂಡು ಸಾಯಿ ಪಲ್ಲವಿ ಅಚ್ಚರಿ
  • ಭಾಷೆಯ ಗಡಿಗಳನ್ನು ಮೀರಿ ನಿಂತ ಸಿನಿಮಾದ ಕಲೆ
  • ಸಾಯಿ ಪಲ್ಲವಿ ಮಾತು

ಸಾಯಿ ಪಲ್ಲವಿ ಅವರು ‘ರಾಮಾಯಣ’ ಸಿನಿಮಾದಲ್ಲಿ ಸೀತೆ ಪಾತ್ರ ಮಾಡಿದ್ದಾರೆ. ಅವರು ಯಶ್ ಸ್ಟಾರ್​ಡಂ ಕಂಡು ಅಚ್ಚರಿಗೊಂಡಿದ್ದಾರೆ. ಚೆನ್ನೈನಲ್ಲಿ ನಡೆದ ‘ರಾಮಾಯಣ’ ಈವೆಂಟ್ ಅಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ. ಅವರಿಗೆ ಯಶ್ ಅವರ ಜನಪ್ರಿಯತೆ ನೋಡಿ ಖುಷಿಯಾಗಿದೆ. ಈ ರೀತಿಯ ಸ್ಟಾರ್​​​ಡಂ ಸಿಗೋದು ಅಪರೂಪ ಎಂದು ಅವರು ಹೊಗಳಿದ್ದಾರೆ.

‘ಈಗ ನಾನು ಯಶ್ ಸರ್ ಬಗ್ಗೆ ಮಾತನಾಡಬೇಕು. ನಾವು ಬೇರೆ ಬೇರೆ ಕಡೆಗೆ ಹೋಗುವಾಗ, ಅವರು ಬರುವಾಗ ಮಾತ್ರ ಅಲ್ಲಿ ಉಂಟಾಗುವ ಆ ಹರ್ಷೋದ್ಗಾರ ಇದೆಯಲ್ಲ, ಅದು ತುಂಬಾ ಆಕರ್ಷಕ ಅಂತ ಅನಿಸುತ್ತದೆ’ ಎಂದು ಸಾಯಿ ಪಲ್ಲವಿ ಹೇಳಿದ್ದಾರೆ. ಇದನ್ನು ಹೇಳುವಾಗ ಅವರ ಮೊಗದಲ್ಲಿ ಒಂದು ಖುಷಿ ಇತ್ತು.

‘ಯಶ್ ಕೆಜಿಎಫ್ ಮಾಡಿದ್ದರು. ಅದನ್ನು ನಾವೆಲ್ಲರೂ ನೋಡಿದ್ದೇವೆ. ಹಾಗೆಯೇ ಟಾಕ್ಸಿಕ್ ಮಾಡಿದ್ದಾರೆ. ಅದನ್ನೂ ಕೂಡ ನಾವೆಲ್ಲರೂ ನೋಡಿದ್ದೇವೆ. ಯಶ್ ಅವರು ಎಲ್ಲಿಗೆ ಹೋದರೂ ಆ ಭಾಷೆಯಲ್ಲಿ ಅವರು ಸಿನಿಮಾ ಮಾಡದಿದ್ದರೂ ಸಹ ಅದೇ ರೀತಿಯ ಹರ್ಷೋದ್ಗಾರ ಸಿಗುತ್ತದೆ. ಹಾಗಾಗಿ ನಾವು ಬಹುಶಃ ಬೇರೆ ಬೇರೆ ಭಾಷೆಗಳವರಾಗಿರಬಹುದು, ಆದರೆ ನಾವೆಲ್ಲರೂ ಈ ಸಿನಿಮಾದಿಂದ ಒಂದಾಗಿದ್ದೇವೆ. ಇದು ಈ ಎಲ್ಲ ಭಾಷೆಯ ಗಡಿಗಳನ್ನು ಮೀರಿ ನಿಲ್ಲುತ್ತದೆ’ ಎಂದು ಮೆಚ್ಚುಗೆ ಸೂಚಿಸಿದರು.

ಇದನ್ನೂ ಓದಿ: ‘ಫೋಟೋ ತೆಗಿಬೇಡಿ, ನಷ್ಟದ ಹಣ ಕೊಡ್ತೀವಿ’; ಪಾಪರಾಜಿಗಳಿಗೆ ಹೇಳಿದ್ದ ಯಶ್

ಯಶ್ ಅವರು ‘ಕೆಜಿಎಫ್ 2’ ಬಳಿಕ ದೊಡ್ಡ ಮಟ್ಟದ ಸ್ಟಾರ್​ಡಂ ಪಡೆದುಕೊಂಡಿದ್ದಾರೆ. ‘ಟಾಕ್ಸಿಕ್’ ಸಿನಿಮಾಗೆ ಅಂದುಕೊಂಡ ರೀತಿಯ ಪ್ರತಿಕ್ರಿಯೆ ಸಿಗದ ಹೊರತಾಗಿಯೂ ಯಶ್ ಸ್ಟಾರ್​​ಡಂ ಕಡಿಮೆ ಆಗಿಲ್ಲ. ‘ರಾಮಾಯಣ’ ಚಿತ್ರದಲ್ಲಿ ಅವರು ರಾವಣನ ಪಾತ್ರ ಮಾಡುತ್ತಿದ್ದು, ನಿರೀಕ್ಷೆ ಹೆಚ್ಚಿದೆ. ಈ ಚಿತ್ರಕ್ಕೆ ಅವರು ನಿರ್ಮಾಪಕರೂ ಹೌದು. ಇನ್ನು ಸಾಯಿ ಪಲ್ಲವಿ ಅವರು ಸೀತೆಯಾಗಿ ಮಿಂಚಲು ರೆಡಿ ಆಗಿದ್ದಾರೆ. ಟ್ರೇಲರ್ ಮೂಲಕ ಅವರು ಗಮನ ಸೆಳೆದಿದ್ದಾರೆ. ಈ ಸಿನಿಮಾ ನೋಡಲು ಅಭಿಮಾನಿಗಳು ಕಾದಿದ್ದಾರೆ. ನವೆಂಬರ್ 5ರಂದು ಸಿನಿಮಾ ತೆರೆಗೆ ಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More