ಸಲ್ಮಾನ್ ಖಾನ್ – ನಯನತಾರಾ ಹೊಸ ಸಿನಿಮಾಗೆ ಟೈಟಲ್ ಫಿಕ್ಸ್​

Salman Khan Movie: ಸಲ್ಮಾನ್ ಖಾನ್ ಮತ್ತು ನಯನತಾರಾ ಅಭಿನಯದ ವಂಶಿ ಪೈಡಿಪಲ್ಲಿ ನಿರ್ದೇಶನದ ಹೊಸ ಆಕ್ಷನ್ ಸಿನಿಮಾಗೆ 'ಮಾನ್‌ಸ್ಟರ್' ಎಂದು ಹೆಸರಿಡಲಾಗಿದೆ. ಕೊರಿಯನ್ ಸಾಹಸ ತಂಡದ ಜೊತೆಗೆ ಸಲ್ಮಾನ್ ಖಾನ್ ಸ್ವತಃ ಆಕ್ಷನ್ ದೃಶ್ಯಗಳಲ್ಲಿ ನಟಿಸುತ್ತಿರುವುದು ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.

ಸಲ್ಮಾನ್ ಖಾನ್ - ನಯನತಾರಾ ಹೊಸ ಸಿನಿಮಾಗೆ ಟೈಟಲ್ ಫಿಕ್ಸ್​
ನಯನತಾರಾ, ಸಲ್ಮಾನ್ ಖಾನ್
Edited By:

Updated on: Aug 21, 2026 | 11:15 AM

ಮುಖ್ಯಾಂಶಗಳು

  • ಸಲ್ಮಾನ್ ಖಾನ್‌ಗೆ ಜೋಡಿಯಾದ ನಯನತಾರಾ
  • ಸಿನಿಮಾಗೆ 'ಮಾನ್‌ಸ್ಟರ್' ಹೆಸರು
  • ರಿಸ್ಕ್ ತಗೊಂಡು ಆಕ್ಷನ್ ದೃಶ್ಯಗಳಲ್ಲಿ ನಟಿಸಿದ ಭಜರಂಗಿ

ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಮತ್ತು ಲೇಡಿ ಸೂಪರ್‌ಸ್ಟಾರ್ ನಯನತಾರಾ ಅಭಿನಯದ ನೂತನ ಆಕ್ಷನ್ ಥ್ರಿಲ್ಲರ್ ಸಿನಿಮಾಗೆ ‘ಮಾನ್‌ಸ್ಟರ್’ ಎಂದು ಹೆಸರಿಡಲಾಗಿದೆ ಎಂದು ವರದಿಯಾಗಿದೆ. ತೆಲುಗಿನ ಖ್ಯಾತ ನಿರ್ಮಾಪಕ ದಿಲ್ ರಾಜು ಹಾಗೂ ನಿರ್ದೇಶಕ ವಂಶಿ ಪೈಡಿಪಲ್ಲಿ ಕಾಂಬಿನೇಷನ್‌ನಲ್ಲಿ ಈ ಬೃಹತ್ ಚಿತ್ರ ಮೂಡಿಬರುತ್ತಿದೆ. ಈ ಅಪರೂಪದ ಜೋಡಿಯ ಸಿನಿಮಾ ಪ್ರಕಟಣೆಯು ಅಭಿಮಾನಿಗಳಲ್ಲಿ ಭಾರಿ ಕುತೂಹಲವನ್ನುಂಟು ಮಾಡಿದೆ.

ಖುದ್ದಾಗಿ ಆಕ್ಷನ್ ಸ್ಟಂಟ್ಸ್ ಮಾಡಿದ ಸಲ್ಮಾನ್

ಈ ಸಿನಿಮಾದ ಶೂಟಿಂಗ್ ವೇಳೆ ಸಲ್ಮಾನ್ ಖಾನ್ ಅವರ ಬಾಡಿ ಡಬಲ್ (ಡ್ಯೂಪ್) ಹೃದಯಾಘಾತಕ್ಕೆ ಒಳಗಾಗಿದ್ದರು. ಆದ್ದರಿಂದ ಶೂಟಿಂಗ್ ಹಂತಕ್ಕೆ ಯಾವುದೇ ತೊಂದರೆ ಆಗಬಾರದು ಎಂದು ಸಲ್ಮಾನ್ ಖಾನ್ ಅವರೇ ಖುದ್ದಾಗಿ ಅಪಾಯಕಾರಿ ಆಕ್ಷನ್ ದೃಶ್ಯಗಳಲ್ಲಿ ನಟಿಸುತ್ತಿದ್ದಾರೆ. ಪ್ರತಿಯೊಂದು ಸಾಹಸ ಸನ್ನಿವೇಶವನ್ನು ತಾವೇ ನಿರ್ವಹಿಸುವ ಮೂಲಕ ಸಲ್ಮಾನ್ ಖಾನ್ ಸಿನಿಮಾದ ಮೇಲಿರುವ ತಮ್ಮ ಶ್ರದ್ಧೆಯನ್ನು ತೋರಿಸಿದ್ದಾರೆ.

ಕೊರಿಯನ್ ಆಕ್ಷನ್ ಟೀಮ್ ಎಂಟ್ರಿ

ಚಿತ್ರದಲ್ಲಿ ಅಂತರರಾಷ್ಟ್ರೀಯ ಮಟ್ಟದ ಆಕ್ಷನ್ ದೃಶ್ಯಗಳನ್ನು ಸೇರಿಸಲು ಕೊರಿಯಾದ ಖ್ಯಾತ ಸಾಹಸ ನಿರ್ದೇಶಕ ಸಿ ಯಂಗ್ ಓ ಅವರನ್ನು ಕರೆಸಲಾಗಿದೆ. ಮಿಷ್ಟರ್ ಓ ಎಂದೇ ಪ್ರಸಿದ್ಧರಾಗಿರುವ ಇವರು ಹಿಂದೆ ‘ಕಿಲ್’ ಮತ್ತು ‘ವಾರ್’ ಸಿನಿಮಾಗಳಿಗೆ ಸಾಹಸ ನಿರ್ದೇಶನ ಮಾಡಿದ್ದರು. ಸಲ್ಮಾನ್ ಖಾನ್ ಅವರ ಮಾಸ್ ಇಮೇಜ್‌ಗೆ ತಕ್ಕಂತೆ ಅದ್ಭುತ ಆಕ್ಷನ್ ದೃಶ್ಯಗಳನ್ನು ಇವರು ವಿನ್ಯಾಸಗೊಳಿಸುತ್ತಿದ್ದಾರೆ. ಈ ಚಿತ್ರದ ಮೂಲಕ ಸಲ್ಮಾನ್ ಹಾಗೂ ವಂಶಿ ಪೈಡಿಪಲ್ಲಿ ಮೊದಲ ಬಾರಿಗೆ ಒಂದಾಗಿದ್ದಾರೆ.

ಇದನ್ನೂ ಓದಿ: ‘ಬಿಗ್ ಬಾಸ್ 20’ ಟ್ರೇಲರ್: ಈ ಬಾರಿ ಸಲ್ಮಾನ್ ಖಾನ್ ಕೊಡ್ತಾರೆ ‘ಎಕ್ಸ್‌ಟ್ರಾ ಜೀವನ್ ದಾನ್’

ಪ್ರಮುಖ ಕಲಾವಿದರ ದಂಡು

ಈ ಸಿನಿಮಾದಲ್ಲಿ ಸಲ್ಮಾನ್ ಖಾನ್ ಮತ್ತು ನಯನತಾರಾ ಜೊತೆಗೆ ಸಾಗರಿಕ ಘಾಟ್ಗೆ ಹಾಗೂ ಮುಜಮ್ಮಿಲ್ ಇಬ್ರಾಹಿಂ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ದಿಲ್ ರಾಜು ಅವರ ‘ಎಸ್‌ವಿಸಿ 63’ ಪ್ರಾಜೆಕ್ಟ್ ಆಗಿ ಆರಂಭವಾಗಿದ್ದ ಈ ಚಿತ್ರಕ್ಕೆ ‘ಮಾನ್‌ಸ್ಟರ್’ ಶೀರ್ಷಿಕೆಯನ್ನು ಇಡಲಾಗಿದ್ದು, ಶೀಘ್ರದಲ್ಲೇ ಚಿತ್ರತಂಡದಿಂದ ಅಧಿಕೃತ ಪ್ರಕಟಣೆ ಹೊರಬೀಳಲಿದೆ. ಕಥೆ ಹಾಗೂ ಬಿಡುಗಡೆ ದಿನಾಂಕದ ವಿವರಗಳನ್ನು ತಿಳಿಯಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us