Salman Khan: ರಿಮೇಕ್​ ಮಾಡೋಕೆ ಸಲ್ಮಾನ್​ ಖಾನ್​ ಕೊನೆಗೂ ಫೈನಲ್​ ಮಾಡಿದ್ರು ಸಿನಿಮಾ

ಒಂದೊಮ್ಮೆ ಸಲ್ಮಾನ್​ ಖಾನ್ ಈ ಸಿನಿಮಾ ರಿಮೇಕ್​ ಮಾಡುತ್ತಾರೆ ಎಂದಾದರೂ ಅದು ತೆರೆಗೆ ಬರೋಕೆ ಸಾಕಷ್ಟು ಸಮಯ ಬೇಕಾಗಬಹುದು. ಬಾಲಿವುಡ್​ ನೇಟಿವಿಟಿಗೆ ತಕ್ಕಂತೆ ಸಿನಿಮಾದ ಕಥೆ ಬದಲಾಯಿಸಬೇಕು, ಸಂಭಾಷಣೆ ಬರೆಯಬೇಕು, ಕಲಾವಿದರ ಆಯ್ಕೆ ಮಾಡಬೇಕು.

Salman Khan: ರಿಮೇಕ್​ ಮಾಡೋಕೆ ಸಲ್ಮಾನ್​ ಖಾನ್​ ಕೊನೆಗೂ ಫೈನಲ್​ ಮಾಡಿದ್ರು ಸಿನಿಮಾ
ಸಲ್ಮಾನ್​-ರವಿತೇಜಾ
Edited By:

Updated on: Jun 10, 2021 | 2:55 PM

‘ರಾಧೆ: ಯುವರ್ ಮೋಸ್ಟ್​ ವಾಂಟೆಡ್​ ಭಾಯ್’​ ಚಿತ್ರ ಒಟಿಟಿಯಲ್ಲಿ ರಿಲೀಸ್​ ಆಗಿ ನೆಲಕಚ್ಚಿತ್ತು. ಸತತ ಸೋಲಿನಿಂದ ಕಂಗೆಟ್ಟಿರುವ ಸಲ್ಮಾನ್ ಖಾನ್ ಟಾಲಿವುಡ್​ನ ಚಿತ್ರವೊಂದನ್ನು ರಿಮೇಕ್​ ಮಾಡೋಕೆ ನಿರ್ಧರಿಸಿದ್ದಾರೆ ಎನ್ನಲಾಗಿತ್ತು. ಈಗ ರಿಮೇಕ್​ಮಾಡೋಕೆ ಸಲ್ಮಾನ್​ ಖಾನ್​ ತೆಲುಗಿನ ಸಿನಿಮಾವೊಂದನ್ನು ಫೈನಲ್​ ಮಾಡಿದ್ದಾರೆ.

2017ರಲ್ಲಿ ತೆರೆಕಂಡಿದ್ದ ‘ಟೈಗರ್ ಜಿಂದಾ ಹೇ’ ಚಿತ್ರವೇ ಕೊನೆ. ಅದಾದ ನಂತರದಲ್ಲಿ ಸಲ್ಲುಗೆ ಅಂಥ ಯಶಸ್ಸು ಸಿಕ್ಕಿಲ್ಲ. ‘ರೇಸ್​-3’, ‘ಭಾರತ್’​, ‘ದಬಾಂಗ್​ 3’ ಚಿತ್ರಗಳು ಸೋಲು ಕಂಡಿದ್ದವು. ಹೀಗಾಗಿ, ರಾಧೆ ಸಿನಿಮಾ ಮೂಲಕ ಅವರಿಗೆ ಯಶಸ್ಸು ಗಳಿಸೋದು ಅನಿವಾರ್ಯವಾಗಿತ್ತು. ಆದರೆ, ಸಲ್ಲು ಲೆಕ್ಕಾಚಾರ ತಲೆಕೆಳಗಾಗಿದೆ. ರಾಧೆ ಸಿನಿಮಾ ಕೂಡ ವಿಮರ್ಶೆಯಲ್ಲಿ ಸೋತಿದೆ. ಇದರಿಂದ ಸಲ್ಲು ಆತಂಕಕ್ಕೆ ಒಳಗಾಗಿದ್ದು, ಶೀಘ್ರವೇ ತೆಲುಗು ಸಿನಿಮಾ ರಿಮೇಕ್​ ಮಾಡಲಿದ್ದಾರೆ ಎನ್ನಲಾಗಿತ್ತು. ಅದೇ ರೀತಿ ಸಲ್ಮಾನ್​ ಖಾನ್​ ತೆಲುಗು ಚಿತ್ರವೊಂದನ್ನು ನೋಡಿ ಇಷ್ಟಪಟ್ಟಿದ್ದಾರಂತೆ.

ನಿರ್ದೇಶಕ ರಮೇಶ್ ವರ್ಮಾ ಹಾಗೂ ನಟ ರವಿತೇಜ ‘ಖಿಲಾಡಿ’ ಚಿತ್ರಕ್ಕಾಗಿ ಒಂದಾಗಿದ್ದಾರೆ. ಇತ್ತೀಚೆಗೆ ಸಿನಿಮಾದ ಟೀಸರ್​ ರಿಲೀಸ್​ ಆಗಿತ್ತು. ಸಲ್ಮಾನ್​ ಖಾನ್​ ಈ ಟೀಸರ್​ ವೀಕ್ಷಣೆ ಮಾಡಿದ್ದು, ಅವರಿಗೆ ಇಷ್ಟವಾಗಿದೆ. ಕೂಡಲೇ ಸಿನಿಮಾ ತಂಡವನ್ನು ಸಲ್ಲು ಸಂಪರ್ಕಿಸಿದ್ದಾರೆ. ನಿರ್ದೇಶಕರು ಹೇಳಿದ ಕಥೆ ಸಲ್ಲುಗೆ ಇಷ್ಟವಾಗಿದ್ದು, ಇದನ್ನೇ ರಿಮೇಕ್​ ಮಾಡೋಕೆ ಅವರು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಒಂದೊಮ್ಮೆ ಸಲ್ಮಾನ್​ ಖಾನ್ ಈ ಸಿನಿಮಾ ರಿಮೇಕ್​ ಮಾಡುತ್ತಾರೆ ಎಂದಾದರೂ ಅದು ತೆರೆಗೆ ಬರೋಕೆ ಸಾಕಷ್ಟು ಸಮಯ ಬೇಕಾಗಬಹುದು. ಬಾಲಿವುಡ್​ ನೇಟಿವಿಟಿಗೆ ತಕ್ಕಂತೆ ಸಿನಿಮಾದ ಕಥೆ ಬದಲಾಯಿಸಬೇಕು, ಸಂಭಾಷಣೆ ಬರೆಯಬೇಕು, ಕಲಾವಿದರ ಆಯ್ಕೆ ಮಾಡಬೇಕು. ಇದೆಲ್ಲ ಆದ ನಂತರ ಶೂಟಿಂಗ್​, ನಂತರ ಪೋಸ್ಟ್​ ಪ್ರೊಡಕ್ಷನ್​ ಮಾಡಿ ಚಿತ್ರ ತೆರೆಗೆ ತರುವುದಕ್ಕೆ ಸಾಕಷ್ಟು ಸಮಯ ಹಿಡಿಯಲಿದೆ ಎನ್ನಲಾಗುತ್ತಿದೆ.

ಇನ್ನು, ಹಿಂದಿಯಲ್ಲೂ ರಮೇಶ್ ಬಳಿಯೇ ಸಿನಿಮಾ ಮಾಡುವಂತೆ ಸಲ್ಲು ಕೋರಿದ್ದಾರೆ ಎನ್ನಲಾಗುತ್ತಿದೆ. ಅವರು ಇದನ್ನು ಒಪ್ಪಿಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಸದ್ಯ, ಸಲ್ಮಾನ್​ ಖಾನ್​ ಈ ಸಿನಿಮಾ ರಿಮೇಕ್​ ಮಾಡುತ್ತಿದ್ದಾರೆ ಎನ್ನುವ ವಿಚಾರ ಸಾಕಷ್ಟು ಕುತೂಹಲ ಮೂಡಿಸಿದೆ.

ಅಂದಹಾಗೆ, ಸಲ್ಮಾನ್​ ಖಾನ್​ ಟಾಲಿವುಡ್​ ಸಿನಿಮಾ ಮೊರೆ ಹೋಗಿದ್ದು ಇದೇ ಮೊದಲೇನಲ್ಲ. 2009ರಲ್ಲಿ ತೆರೆಗೆ ಬಂದಿದ್ದ ‘ಕಿಕ್’​ ಚಿತ್ರವನ್ನು ಅದೇ ಹೆಸರಿನಲ್ಲಿ ಹಿಂದಿಗೆ ರಿಮೇಕ್​ ಮಾಡಿ ಯಶಸ್ಸು ಕಂಡಿದ್ದರು. ಇನ್ನು ತೆಲುಗಿನ ಅರ್ಜುನ್​ ರೆಡ್ಡಿ, ಟೆಂಪರ್​ ಚಿತ್ರಗಳು ಬಾಲಿವುಡ್​ಗೆ ರಿಮೇಕ್​ ಆಗಿ ಯಶಸ್ಸು ಗಳಿಸಿವೆ.

ಇದನ್ನೂ ಓದಿ:

ರಾಧೆ ತೆರೆಕಂಡ ಬೆನ್ನಲ್ಲೇ ಒಟಿಟಿಗೆ ಗುಡ್​​ ಬೈ ಹೇಳಿದ ಸಲ್ಮಾನ್​ ಖಾನ್​

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us