ಹಗಲು ಗೌರಮ್ಮ, ರಾತ್ರಿಯಾದರೆ ಕಾಳಿ: ಸಮಂತಾ ಹೊಸ ಅವತಾರ

Maa Inti Bangaram movie teaser release: ವರ್ಷದ ಹಿಂದೆಯೇ ಸಮಂತಾ ನಟಿಸಲಿದ್ದ ‘ಮಾ ಇಂಟಿ ಬಂಗಾರಂ’ ಸಿನಿಮಾ ಘೋಷಣೆ ಆಗಿತ್ತು. ಕೆಲವು ಕಾರಣಗಳಿಗಾಗಿ ಸಿನಿಮಾ ಚಿತ್ರೀಕರಣ ತಡವಾಗಿತ್ತು. ಇದೀಗ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಟ್ರೇಲರ್ನಲ್ಲಿ ಸಮಂತಾ ಎರಡು ಭಿನ್ನ ಅವತಾರದಲ್ಲಿ ಕಾಣಿಸಿಕೊಂಂಡಿದ್ದಾರೆ.

ಹಗಲು ಗೌರಮ್ಮ, ರಾತ್ರಿಯಾದರೆ ಕಾಳಿ: ಸಮಂತಾ ಹೊಸ ಅವತಾರ
Maa Inti Bangaram

Updated on: Jan 09, 2026 | 11:57 AM

ಸಮಂತಾ ಋತ್ ಪ್ರಭು (Samantha Ruth Prabhu) ದಕ್ಷಿಣದ ಸ್ಟಾರ್ ನಟಿ ಆಗಿದ್ದವರು. ಆದರೆ ಇತ್ತೀಚೆಗೆ ಅವರೇ ಹೇಳಿಕೊಂಡಿರುವಂತೆ ತೆಲುಗು ಚಿತ್ರರಂಗದಲ್ಲಿ ಅವರಿಗೆ ಅವಕಾಶಗಳು ಕಡಿಮೆ ಆಗಿವೆಯಂತೆ. ಇದೇ ಕಾರಣಕ್ಕೆ ಅವರು ಹಿಂದಿಯ ವೆಬ್ ಸರಣಿಗಳ ಕಡೆ ಮುಖ ಮಾಡಿದ್ದಾರೆ. ಆದರೆ ವರ್ಷದ ಹಿಂದೆಯೇ ಸಮಂತಾ ನಟಿಸಲಿದ್ದ ‘ಮಾ ಇಂಟಿ ಬಂಗಾರಂ’ ಸಿನಿಮಾ ಘೋಷಣೆ ಆಗಿತ್ತು. ಕೆಲವು ಕಾರಣಗಳಿಗಾಗಿ ಸಿನಿಮಾ ಚಿತ್ರೀಕರಣ ತಡವಾಗಿತ್ತು. ಇದೀಗ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಟ್ರೇಲರ್ನಲ್ಲಿ ಸಮಂತಾ ಎರಡು ಭಿನ್ನ ಅವತಾರದಲ್ಲಿ ಕಾಣಿಸಿಕೊಂಂಡಿದ್ದಾರೆ.

ಸಮಂತಾ ನಟನೆಯ ‘ಮಾ ಇಂಟಿ ಬಂಗಾರಂ’ ಸಿನಿಮಾದ ಟೀಸರ್ ಇಂದು (ಜನವರಿ 09) ಬಿಡುಗಡೆ ಆಗಿದೆ. ಸಿನಿಮಾನಲ್ಲಿ ಸಮಂತಾ ಪತಿಯಾಗಿ ಕನ್ನಡದ ನಟ ದಿಗಂತ್ ನಟಿಸಿದ್ದಾರೆ. ಟೀಸರ್​​ನಲ್ಲಿ ತೋರಿಸಿರುವಂತೆ ಸಮಂತಾ ಹಾಗೂ ದಿಗಂತ್ ಪ್ರೀತಿಸಿ ಮನೆಯವರಿಗೆ ತಿಳಿಯದೇ ಮದುವೆ ಆಗಿದ್ದಾರೆ. ಈಗ ಸಮಂತಾ ಮೊದಲ ಬಾರಿ ಗಂಡನ ಮನೆಗೆ ಬಂದಿದ್ದಾರೆ. ಗಂಡನ ಮನೆಯದ್ದು ಕೂಡು ಕುಟುಂಬ, ಎಲ್ಲರೂ ಸೊಸೆ ಹೇಗೆ, ಸೊಸೆಯ ವ್ಯಕ್ತಿತ್ವ ಹೇಗೆ ಎಂದು ಕುತೂಹಲದಿಂದ ಇರುತ್ತಾರೆ, ಪ್ರತಿ ಹೆಜ್ಜೆಗೂ ಟೀಕೆ, ಪರಿಶೀಲನೆ ನಡೆಯುತ್ತಲೇ ಇರುತ್ತದೆ. ಆದರೆ ಸಮಂತಾ ಮಾತ್ರ ಸುಸಂಸ್ಕೃತ ಸೊಸೆಯಂತೆ ನಗು ಮುಖದಿಂದ ಎಲ್ಲರ ಸೇವೆ ಮಾಡುತ್ತಾರೆ. ಆದರೆ ಸಮಂತಾರ ಈ ಗೌರಮ್ಮನ ಅವತಾರ ಹಗಲು ಹೊತ್ತು ಮಾತ್ರ.

ಇದನ್ನೂ ಓದಿ:ಮದುವೆ ಬಳಿಕ ಸಮಂತಾ ಮೊದಲ ಸಿನಿಮಾ; ಹೇಗಿದೆ ನೋಡಿ ಫಸ್ಟ್ ಲುಕ್

ಸಮಂತಾಗೆ ಇನ್ನೊಂದು ಮುಖವೂ ಇದೆ. ಟೀಸರ್​​ನಲ್ಲಿ ತೋರಿಸಿರುವಂತೆ ಸಮಂತಾ ಯಾವ ನಾಯಕರಿಗೂ ಕಡಿಮೆ ಇಲ್ಲದಂತೆ ವಿಲನ್​​ಗಳನ್ನು ಚಚ್ಚಿ ಕೆಡವುತ್ತಾರೆ. ಸೀರೆಯುಟ್ಟು ಕಾಳಿಯಂತೆ ವಿಲನ್ನುಗಳ ಮೇಲೆ ಹಾರಿ ಬೀಳುತ್ತಿದ್ದಾರೆ. ಚುಚ್ಚಿ ಕೊಂದೇ ಹಾಕುತ್ತಿದ್ದಾರೆ. ಈ ಎಲ್ಲ ಸಾಹಸ ಅತ್ತೆಯ ಮನೆಯಲ್ಲೇ ನಡೆಯುತ್ತಿದೆ. ಮನೆ ಮಂದಿಯ ಕಣ್ಣು ತಪ್ಪಿಸಿ ಈ ಸಾಹಸಗಳನ್ನು ಸಮಂತಾ ಮಾಡುತ್ತಿದ್ದಾರೆ. ಆದರೆ ಸಮಂತಾರ ಈ ದ್ವಿವ್ಯಕ್ತಿತ್ವಕ್ಕೆ ಕಾರಣ ಏನು? ಸಮಂತಾ ಮೇಲೆ ದಾಳಿ ಮಾಡುತ್ತಿರುವ ಆ ಪುಂಡರು ಯಾರು? ಇದೆಲ್ಲ ತಿಳಿಯಬೇಕೆಂದರೆ ಸಿನಿಮಾ ನೋಡಬೇಕು.

‘ಮಾ ಇಂಟಿ ಬಂಗಾರಂ’ ಸಿನಿಮಾನಲ್ಲಿ ಸಮಂತಾ ಪತಿಯ ಪಾತ್ರದಲ್ಲಿ ಕನ್ನಡಿಗ ದಿಗಂತ್ ನಟಿಸಿದ್ದಾರೆ. ಮತ್ತೊಂದು ಪ್ರಮುಖ ಪಾತ್ರದಲ್ಲಿ ಮತ್ತೊಬ್ಬ ಕನ್ನಡಿಗ ಗುಲ್ಷನ್ ದೇವಯ್ಯ ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ನಂದಿನಿ ರೆಡ್ಡಿ. ನಿರ್ಮಾಣ ಮಾಡಿರುವುದು ಸಮಂತಾರ ಪತಿ ರಾಜ್ ನಿಧಿಮೋರು. ಸಿನಿಮಾದ ಬಿಡುಗಡೆ ದಿನಾಂಕ ಇನ್ನಷ್ಟೆ ಘೋಷಿಸಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ