Samantha: ‘ಶಾಕುಂತಲಂ’ ಚಿತ್ರಕ್ಕೆ ಹೀನಾಯ ಸೋಲು; ಎರಡಂಕಿ ಮುಟ್ಟಲು ವಿಫಲವಾಯ್ತು ಸಮಂತಾ ಸಿನಿಮಾ

Shaakuntalam Box Office Collection: ವೀಕೆಂಡ್​ನಲ್ಲಾದರೂ ‘ಶಾಕುಂತಲಂ’ ಸಿನಿಮಾದ ಕಲೆಕ್ಷನ್​ ಸುಧಾರಿಸಬಹುದು ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಆಗಿದ್ದೇ ಬೇರೆ.

Samantha: ‘ಶಾಕುಂತಲಂ’ ಚಿತ್ರಕ್ಕೆ ಹೀನಾಯ ಸೋಲು; ಎರಡಂಕಿ ಮುಟ್ಟಲು ವಿಫಲವಾಯ್ತು ಸಮಂತಾ ಸಿನಿಮಾ
‘ಶಾಕುಂತಲಂ’ ಸಿನಿಮಾ ಪೋಸ್ಟರ್​

Updated on: Apr 17, 2023 | 6:07 PM

ನಟಿ ಸಮಂತಾ ರುತ್​ ಪ್ರಭು (Samantha Ruth Prabhu) ಅವರನ್ನು ಓಡುವ ಕುದುರೆ ಎಂದೇ ಪರಿಗಣಿಸಲಾಗಿತ್ತು. ಅವರ ಸಿನಿಮಾಗೆ ಬಂಡವಾಳ ಹೂಡಿದರೆ ನಿರ್ಮಾಪಕರಿಗೆ ನಷ್ಟ ಆಗುವುದಿಲ್ಲ ಎಂದು ಟಾಲಿವುಡ್​ (Tollywood) ಮಂದಿ ಊಹಿಸಿದ್ದರು. ಆದರೆ ಈಗ ಆ ಲೆಕ್ಕಾಚಾರ ತಲೆಕೆಳಗಾಗಿದೆ. ಸಮಂತಾ ಅವರು ನಟಿಸಿದ ಬಿಗ್​ ಬಜೆಟ್​ ಸಿನಿಮಾ ‘ಶಾಕುಂತಲಂ’ ಹೀನಾಯವಾಗಿ ಸೋತಿದೆ. ಬಾಕ್ಸ್​ ಆಫೀಸ್​ನಲ್ಲಿ ಈ ಚಿತ್ರ ಮೋಡಿ ಮಾಡಿಲ್ಲ. ಸಮಂತಾ ಅವರು ಪೌರಾಣಿಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೂ ಕೂಡ ಪ್ರೇಕ್ಷಕರಿಗೆ ‘ಶಾಕುಂತಲಂ’ ಸಿನಿಮಾ (Shaakuntalam Movie) ಇಷ್ಟ ಆಗಿಲ್ಲ. ಮೊದಲ ವೀಕೆಂಡ್​ ಕಳೆದರೂ ಈ ಚಿತ್ರಕ್ಕೆ ಎರಡಂಕಿ ಮಟ್ಟಲು ಸಾಧ್ಯವಾಗಿಲ್ಲ. ಅಂದರೆ 3 ದಿನಕ್ಕೆ ಬಾಕ್ಸ್​ ಆಫೀಸ್​ನಲ್ಲಿ 10 ಕೋಟಿ ರೂಪಾಯಿ ಕೂಡ ಕಲೆಕ್ಷನ್ ಆಗಿಲ್ಲ!

ಸ್ಟಾರ್​ ಕಲಾವಿದರು ಅಭಿನಯಿಸಿದ ಬಿಗ್​ ಬಜೆಟ್​ ಸಿನಿಮಾಗಳು ಎಷ್ಟೇ ಕೆಟ್ಟ ವಿಮರ್ಶೆ ಪಡೆದುಕೊಂಡರೂ ಕೂಡ ಮಿನಿಮಮ್​​ ಬಿಸ್ನೆಸ್​ ಮಾಡುತ್ತವೆ. ಆದರೆ ‘ಶಾಕುಂತಲಂ’ ಚಿತ್ರಕ್ಕೆ ಅದು ಸಾಧ್ಯವಾಗಿಲ್ಲ. ಏಪ್ರಿಲ್​ 14ರಂದು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ರಿಲೀಸ್​ ಆಯಿತು. ಮೊದಲ ದಿನ ತೆಲುಗು, ಕನ್ನಡ, ತಮಿಳು ಮುಂತಾದ ಭಾಷೆಗಳಿಂದ ಈ ಸಿನಿಮಾಗೆ ಆದ ಒಟ್ಟು ಕಲೆಕ್ಷನ್​ ಅಂದಾಜು 5 ಕೋಟಿ ರೂಪಾಯಿ ಮಾತ್ರ.

Samantha Ruth Prabhu: ಮತ್ತೆ ಕೈ ಕೊಟ್ಟಿದೆ ಸಮಂತಾ ರುತ್​ ಪ್ರಭು ಆರೋಗ್ಯ; ಅಭಿಮಾನಿಗಳಿಗೆ ಆತಂಕ

ಇದನ್ನೂ ಓದಿ
Samantha Ruth Prabhu: ಮತ್ತೆ ಕೈ ಕೊಟ್ಟಿದೆ ಸಮಂತಾ ರುತ್​ ಪ್ರಭು ಆರೋಗ್ಯ; ಅಭಿಮಾನಿಗಳಿಗೆ ಆತಂಕ
Samantha: ಶಾಕುಂತಲಂ ಸಿನಿಮಾ ಚಿತ್ರೀಕರಣದ ಐದು ಕೆಟ್ಟ ಅನುಭವಗಳ ನೆನೆದ ಸಮಂತಾ
ಮಾಜಿ ಗಂಡನ ಕುಟುಂಬದ ಮೇಲೆ ಸಮಂತಾಗೆ ಇನ್ನೂ ಕಡಿಮೆ ಆಗಿಲ್ಲ ಪ್ರೀತಿ; ಇಲ್ಲಿದೆ ಹೊಸ ಸಾಕ್ಷಿ
Samantha: ‘ನಾನು ಇದನ್ನು ಹೇಳಲೇ ಇಲ್ಲ’: ಮಾಜಿ ಗಂಡನ ವಿಷಯಕ್ಕೆ ಸ್ಪಷ್ಟನೆ ನೀಡಿದ ಸಮಂತಾ

ವೀಕೆಂಡ್​ನಲ್ಲಿ ‘ಶಾಕುಂತಲಂ’ ಸಿನಿಮಾದ ಕಲೆಕ್ಷನ್​ ಸುಧಾರಿಸಬಹುದು ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಆಗಿದ್ದೇ ಬೇರೆ. ಶನಿವಾರ (ಏಪ್ರಿಲ್​ 15) ಈ ಚಿತ್ರಕ್ಕೆ ಕೇವಲ 2 ಕೋಟಿ ರೂಪಾಯಿ ಕಮಾಯಿ ಆಯಿತು. ಭಾನುವಾರವಾದರೂ (ಏಪ್ರಿಲ್​ 16) ಜನರು ಚಿತ್ರಮಂದಿರಕ್ಕೆ ಬರುತ್ತಾರೆ ಎಂಬ ಭರವಸೆ ಇತ್ತು. ಆದರೆ ಅಂದು ಕಲೆಕ್ಷನ್​ ಇನ್ನಷ್ಟು ಕುಸಿಯಿತು. ಭಾನುವಾರ 1.5 ಕೋಟಿ ರೂಪಾಯಿ ಗಳಿಸುವಷ್ಟರಲ್ಲಿ ‘ಶಾಕುಂತಲಂ’ ಚಿತ್ರ ಸುಸ್ತು ಹೊಡೆಯಿತು.

ಮಾಜಿ ಗಂಡನ ಕುಟುಂಬದ ಮೇಲೆ ಸಮಂತಾಗೆ ಇನ್ನೂ ಕಡಿಮೆ ಆಗಿಲ್ಲ ಪ್ರೀತಿ; ಇಲ್ಲಿದೆ ಹೊಸ ಸಾಕ್ಷಿ

‘ಶಾಕುಂತಲಂ’ ಸಿನಿಮಾದಲ್ಲಿ ಪೌರಾಣಿಕ ಕಥಾಹಂದರ ಇದೆ. ಶಕುಂತಲೆಯಾಗಿ ಸಮಂತಾ ರುತ್​ ಪ್ರಭು ಕಾಣಿಸಿಕೊಂಡಿದ್ದಾರೆ. ಅಲ್ಲು ಅರ್ಜುನ್​ ಅವರ ಪುತ್ರಿ ಅಲ್ಲು ಅರ್ಹಾ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾಳೆ. ಖ್ಯಾತ ನಿರ್ದೇಶಕ ಗುಣಶೇಖರ್​ ಅವರು ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಗ್ರಾಫಿಕ್ಸ್​ ಮೂಲಕ ಕಟ್ಟಿಕೊಟ್ಟ ದೃಶ್ಯಗಳು ಚೆನ್ನಾಗಿವೆ. ಮೇಕಿಂಗ್​ ಗುಣಮಟ್ಟ ಕೂಡ ಮೆಚ್ಚುಗೆ ಗಳಿಸಿದೆ. ಇಷ್ಟೆಲ್ಲ ಇದ್ದರೂ ಸಹ ಜನರಿಗೆ ಈ ಸಿನಿಮಾ ಇಷ್ಟ ಆಗಿಲ್ಲ.

Samantha: ‘ನಾನು ಇದನ್ನು ಹೇಳಲೇ ಇಲ್ಲ’: ಮಾಜಿ ಗಂಡನ ವಿಷಯಕ್ಕೆ ಸ್ಪಷ್ಟನೆ ನೀಡಿದ ಸಮಂತಾ

ಸದ್ಯ ಸಮಂತಾ ಕೈಯಲ್ಲಿ ಹಲವು ಸಿನಿಮಾಗಳಿವೆ. ‘ಖುಷಿ’ ಚಿತ್ರದಲ್ಲಿ ಅವರು ವಿಜಯ್​ ದೇವರಕೊಂಡ ಜೊತೆ ನಟಿಸುತ್ತಿದ್ದಾರೆ. ‘ಸಿಟಾಡೆಲ್​’ ಇಂಡಿಯನ್​ ವರ್ಷನ್​ನಲ್ಲೂ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ‘ಶಾಕುಂತಲಂ’ ಸೋತಿರುವುದರಿಂದ ಅವರ ಡಿಮ್ಯಾಂಡ್​ ಕೊಂಚ ಕುಸಿಯಲಿರುವುದಂತೂ ನಿಜ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us