ಸಮಂತಾ ಅವರು ಇತ್ತೀಚೆಗೆ ಸಾಕಷ್ಟು ಸುತ್ತಾಟ ನಡೆಸುತ್ತಿದ್ದಾರೆ. ಬಿಡುವಿಲ್ಲದೆ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಇದಕ್ಕಾಗಿ ಅವರು ನಗರದಿಂದ ನಗರಕ್ಕೆ ತಿರುಗಬೇಕಾಗಿದೆ. ಈ ಮಧ್ಯೆ ಸಮಂತಾ ಏಕಾಏಕಿ ಆಸ್ಪತ್ರೆಗೆ ಭೇಟಿ ನೀಡಿದ್ದು ಸಾಕಷ್ಟು ಆತಂಕ ಸೃಷ್ಟಿಸಿದೆ. ಭಾನುವಾರ (ಡಿಸೆಂಬರ್ 12) ಸಮಂತಾ ಖಾಸಗಿ ಆಸ್ಪತ್ರೆಗೆ ತೆರಳಿದ್ದರು. ಅವರು ಆಸ್ಪತ್ರೆಗೆ ಭೇಟಿ ನೀಡಿದ ವಿಚಾರ ತಿಳಿಯುತ್ತಿದ್ದಂತೆ ಅಭಿಮಾನಿಗಳಲ್ಲಿ ಆತಂಕ ಮೂಡಿದೆ. ಇದಕ್ಕೆ ಸಮಂತಾ ತಂಡದವರು ಸ್ಪಷ್ಟನೆ ನೀಡುವ ಕೆಲಸ ಮಾಡಿದ್ದಾರೆ.
ಸಮಂತಾ ಅವರಿಗೆ ವೈರಲ್ ಇನ್ಫೆಕ್ಷನ್ ಆಗಿದ್ದು, ಇದಕ್ಕಾಗಿ ಅವರು ಆಸ್ಪತ್ರೆಗೆ ತೆರಳಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಈ ವಿಚಾರ ಕೇಳಿ ಅಭಿಮಾನಿಗಳು ತೀವ್ರವಾಗಿ ಆತಂಕಗೊಂಡಿದ್ದರು. ಇದರ ಜತೆಗೆ ಸಮಂತಾಗೆ ಕೆಮ್ಮು ಕಾಣಿಸಿಕೊಂಡಿದೆ ಎಂದೂ ಹೇಳಲಾಗಿತ್ತು. ಹೀಗಾಗಿ, ಸಮಂತಾಗೆ ಕೊವಿಡ್ ಅಂಟಿದೆಯೇ ಎನ್ನುವ ಅನುಮಾನ ಅಭಿಮಾನಿಗಳಲ್ಲಿ ಮೂಡಿತ್ತು. ಕೊರೊನಾ ಆತಂಕ ಮತ್ತೆ ಹೆಚ್ಚಾಗಿದೆ. ರೂಪಾಂತರಿಗಳು ಪತ್ತೆ ಆಗುತ್ತಿವೆ. ಹೀಗಿರುವಾಗಲೇ ಸಮಂತಾಗೆ ಕೆಮ್ಮು ಕಾಣಿಸಿಕೊಂಡಿದ್ದು ಸಾಕಷ್ಟು ಆತಂಕ ಮೂಡಿಸಿತ್ತು.
ಈ ಬಗ್ಗೆ ಸಮಂತಾ ಕಡೆಯವರು ಸ್ಪಷ್ಟನೆ ನೀಡುವ ಕೆಲಸ ಮಾಡಿದ್ದಾರೆ. ‘ಸಮಂತಾ ಆರೋಗ್ಯವಾಗಿದ್ದಾರೆ. ನಿನ್ನೆ (ಡಿಸೆಂಬರ್ 12) ಸ್ವಲ್ಪ ಕೆಮ್ಮಿನಿಂದಾಗಿ ಎಐಜಿ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಗಾದರು. ನಂತರ ಅವರು ತಮ್ಮ ಮನೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ. ಯಾವುದೇ ವದಂತಿಗಳು ಅಥವಾ ಸಾಮಾಜಿಕ ಜಾಲತಾಣದ ಗಾಸಿಪ್ಗಳನ್ನು ನಂಬಬೇಡಿ’ ಎಂದು ಸಮಂತಾ ಅವರ ಮ್ಯಾನೇಜರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಸಮಂತಾ ತಂಡದ ಈ ಸ್ಪಷ್ಟನೆ ಇದೀಗ ಫ್ಯಾನ್ಸ್ಗಳು ನಿಟ್ಟುಸಿರು ಬಿಡುವಂತೆ ಮಾಡಿದೆ. ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.
ಪುಷ್ಪ’ ಸಿನಿಮಾದಲ್ಲಿ ಅವರು ಹೆಜ್ಜೆ ಹಾಕಿರುವ ‘ಊ ಅಂಟವಾ ಮಾವ.. ಊಊ ಅಂಟವಾ..’ ಹಾಡಿನ ಲಿರಿಕಲ್ ವಿಡಿಯೋ ಸಖತ್ ಹಿಟ್ ಆಗಿದೆ. ಈ ಲಿರಿಕಲ್ ಹಾಡನ್ನು ಬರೋಬ್ಬರಿ 2.1 ಕೋಟಿ ಜನರು ವೀಕ್ಷಣೆ ಮಾಡಿದ್ದಾರೆ. ರಿಲೀಸ್ ಆಗಿ ಒಂದು ದಿನ ಕಳೆಯುವುದರೊಳಗೆ 10 ಮಿಲಿಯನ್ (1 ಕೋಟಿಗೂ) ಅಧಿಕ ಬಾರಿ ವೀಕ್ಷಣೆ ಕಂಡಿರುವುದು ಈ ಗೀತೆಯ ಹೆಚ್ಚುಗಾರಿಕೆ. ಇದರಿಂದಾಗಿ ‘ಪುಷ್ಪ’ ಸಿನಿಮಾದ ಹವಾ ಹೆಚ್ಚಾಗಿದೆ. ಚಿತ್ರದ ಮೇಲಿದ್ದ ನಿರೀಕ್ಷೆ ದುಪ್ಪಟ್ಟಾಗಿದೆ. ಹೀಗಿರುವಾಗಲೇ ವಿಡಿಯೋ ಸಾಂಗ್ನ ಪ್ರೋಮೋ ರಿಲೀಸ್ ಮಾಡಲಾಗಿದೆ. ಇದರಲ್ಲಿ ಸಮಂತಾ ಬೋಲ್ಡ್ ಆಗಿ ಹೆಜ್ಜೆ ಹಾಕಿದ್ದಾರೆ. ಹಾಡಿನಲ್ಲಿ ಕೇವಲ ಸಮಂತಾ ಫೋಟೋ ನೋಡಿದ್ದ ಅಭಿಮಾನಿಗಳು ಈಗ ಅವರ ಡ್ಯಾನ್ಸ್ ಕಣ್ತುಂಬಿಕೊಂಡಿದ್ದಾರೆ.
ಇದನ್ನೂ ಓದಿ: ನನ್ನ ಪ್ರಕಾರ ಆ ಬಗ್ಗೆ ಮಾತನ್ನು ಮುಗಿಸಿದ್ದೇನೆ: ವಿಚ್ಛೇದನದ ಬಗ್ಗೆ ಸ್ಪಷ್ಟನೆ ನೀಡಿದ ನಟಿ ಸಮಂತಾ
ಪಡ್ಡೆ ಹುಡುಗರ ಹಾರ್ಟ್ ಬೀಟ್ ಹೆಚ್ಚಿಸಿದ ಸಮಂತಾ ಹೊಸ ವಿಡಿಯೋ; ಅಭಿಮಾನಿಗಳು ಫಿದಾ