AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನ ಪ್ರಕಾರ ಆ ಬಗ್ಗೆ ಮಾತನ್ನು ಮುಗಿಸಿದ್ದೇನೆ: ವಿಚ್ಛೇದನದ ಬಗ್ಗೆ ಸ್ಪಷ್ಟನೆ ನೀಡಿದ ನಟಿ ಸಮಂತಾ

ಸಮಂತಾ ಹಾಗೂ ನಾಗಚೈತನ್ಯ ಕಳೆದ ಅಕ್ಟೋಬರ್​ 2 ರಂದು ವಿಚ್ಛೇದನ ಪಡೆಯುವುದಾಗಿ ಅಧಿಕೃತವಾಗಿ ಘೋಷಿಸಿದ್ದರು. ಈ ಮೂಲಕ 4 ವರ್ಷಗಳ ದಾಂಪತ್ಯ ಜೀವನಕ್ಕೆ ವಿದಾಯ ಹೇಳಿದ್ದರು. ಅದರ ಬಳಿಕ ಹಲವು ವದಂತಿಗಳೂ ಹಬ್ಬಿದ್ದವು. ಈ ಹಿಂದೆಯೂ ಸಮಂತಾ ಕೆಲವು ಸಂದರ್ಶನಗಳಲ್ಲಿ ವಿಚ್ಛೇದನದ ಬಗ್ಗೆ ಸ್ಪಷ್ಟನೆ ನೀಡಿದ್ದರು.

ನನ್ನ ಪ್ರಕಾರ ಆ ಬಗ್ಗೆ ಮಾತನ್ನು ಮುಗಿಸಿದ್ದೇನೆ: ವಿಚ್ಛೇದನದ ಬಗ್ಗೆ ಸ್ಪಷ್ಟನೆ ನೀಡಿದ ನಟಿ ಸಮಂತಾ
ಸಮಂತಾ, ನಾಗ ಚೈತನ್ಯ
TV9 Web
| Updated By: Pavitra Bhat Jigalemane|

Updated on: Dec 11, 2021 | 11:55 AM

Share

ನಟಿ ಸಮಂತಾ ಪತಿ ನಾಗಚೈತನ್ಯಗೆ ವಿಚ್ಛೇದನ ನೀಡಿದ ಬಳಿಕ ಸಾಕಷ್ಟು ಮಾತುಗಳು ಕೇಳಿಬಂದವು, ಸಮಂತಾ ಅವರಿಗೆ ಮಗುವನ್ನು ಪಡೆಯಲು ಇಷ್ಟವಿರಲಿಲ್ಲ ಅಥವಾ ಅವರಿಗೆ ಗರ್ಭಪಾತವಾಗಿದೆ ಎನ್ನುವ ಮಾತುಗಳು ಬಹಿರಂಗವಾಗಿಯೇ ಹೊರಬಿದ್ದಿದೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಸಮಂತಾ ವಿಚ್ಛೇದನ ನೀಡಿ ಆಗಿದೆ. ಅದು ಮುಗಿದ ಅಧ್ಯಾಯ. ಆ ವಿಷಯವನ್ನು ಮತ್ತೇ ಮಾತಾಡುವುದಿಲ್ಲ. ಪದೇ ಪದೇ ಅದೇ ವಿಚಾರವನ್ನು ಮಾತನಾಡುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.

ಸಮಂತಾ ಹಾಗೂ ನಾಗಚೈತನ್ಯ ಕಳೆದ ಅಕ್ಟೋಬರ್​ 2 ರಂದು ವಿಚ್ಛೇದನ ಪಡೆಯುವುದಾಗಿ ಅಧಿಕೃತವಾಗಿ ಘೋಷಿಸಿದ್ದರು. ಈ ಮೂಲಕ 4 ವರ್ಷಗಳ ದಾಂಪತ್ಯ ಜೀವನಕ್ಕೆ ವಿದಾಯ ಹೇಳಿದ್ದರು. ಅದರ ಬಳಿಕ ಹಲವು ವದಂತಿಗಳೂ ಹಬ್ಬಿದ್ದವು. ಈ ಹಿಂದೆಯೂ ಸಮಂತಾ ಕೆಲವು ಸಂದರ್ಶನಗಳಲ್ಲಿ ವಿಚ್ಛೇದನದ ಬಗ್ಗೆ ಸ್ಪಷ್ಟನೆ ನೀಡಿದ್ದರು.

ಈ ಹಿಂದೆ ವಿಚ್ಛೇದನದ ಕುರಿತು ಮಾತನಾಡಿದ ಸಮಂತಾ ನಾಗಚೈತನ್ಯರಿಂದ ದೂರವಾದ ಬಳಕ ಸತ್ತೇ ಹೋಗುತ್ತೇನೆ ಎಂದುಕೊಂಡಿದ್ದೆ. ಆದರೆ ಕಷ್ಟದ ಸಮಯದಲ್ಲೂ ನನ್ನನ್ನು ನಾನು ಸಮರ್ಥವಾಗಿ ನಿಭಾಯಿಸಿಕೊಂಡಿದ್ದೇನೆ. ನನ್ನಲ್ಲಿ ಇಷ್ಟು ಧನಾತ್ಮಕ ಶಕ್ತಿ ಎಂದು ತಿಳಿದಿರಲಿಲ್ಲ. ನನ್ನ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಹೇಳಿಕೊಂಡಿದ್ದರು. ಇದೀಗ ಇ ಟೈಮ್ಸ್​ಗೆ ನೀಡಿದ ಸಂದರ್ಶನದಲ್ಲಿ ವಿಚ್ಛೇದನ ಮುಗಿದ ಅಧ್ಯಾಯ. ಅದನ್ನು ನಾನು ಕೈಬಿಟ್ಟಿದ್ದೇನೆ. ಅದೇ ವಿಚಾರವನ್ನು ಮತ್ತೆ ಪುನಾರಾವರ್ತಿಸುವ ಅಗತ್ಯವಿಲ್ಲ ಎಂದಿದ್ದಾರೆ.

ಪ್ಯಾಮಿಲಿ ಮಾನ್​-2 ಮೂಲಕ ಒಟಿಟಿಯಲ್ಲಿ ವೆಬ್​ ಸೀರಿಸ್​ಗೆ ಕಾಲಿಟ್ಟ ಸಮಂತಾ ನಟನೆಯಿಂದ ಜನರಿಗೆ ಇನ್ನಷ್ಟು ಹತ್ತಿರವಾಗಿದ್ದರು. ಪ್ಯಾಮಿಲಿ ಮಾನ್​-2ನಲ್ಲಿ ಸಮಂತಾ ಅಭಿನಯ ಎಲ್ಲರ ಮೆಚ್ಚುಗೆ ಗಳಿಸಿತ್ತು. ಅಲ್ಲದೆ ವಿಚ್ಛೇದನದ ಬಳಿಕ ಈಗ ಮತ್ತೆ ನಟನೆಯತ್ತ ಮರಳಿದ್ದಾರೆ. ಯಶೋದ ಚಿತ್ರದ ಮೂಲಕ ಸಮಂತಾ ತಮ್ಮ ಸಿನಿಜರ್ನಿಗೆ ಮತ್ತೆ ತೆರೆದುಕೊಂಡಿದ್ದಾರೆ. ಸಾಮಾಜಿಕ ಜಾತಲತಾಣಗಳಲ್ಲಿ ಹಲವು ಟ್ರೋಲ್​ಗಳನ್ನು ಎದುರಿಸಿದರೂ ಸಮಂತಾ ತಮ್ಮ ವೃತ್ತಿಯಲ್ಲಿ ಮುಂದುವರೆಯುತ್ತಿದ್ದಾರೆ.

ಇದನ್ನೂ ಓದಿ:

ಶ್ರುತಿ ಹರಿಹರನ್​ ಮೀಟೂ ಕಾನೂನು ಸಮರ: ಅರ್ಜುನ್​ ಸರ್ಜಾಗೆ ಗೆಲುವು? ಸಾಕ್ಷಿ ಕೊರತೆಯಿಂದ ಬಿ ರಿಪೋರ್ಟ್

ಕೆಲವೇ ಗಂಟೆಗಳಲ್ಲಿ 8 ಮಿಲಿಯನ್​ ವೀವ್ಸ್​ ಪಡೆದ ಸಮಂತಾ ಸಾಂಗ್​; ಇನ್ನಷ್ಟು ಹೆಚ್ಚಿತು ‘ಪುಷ್ಪ’ ಹವಾ​