AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನರಂಜನೆ ವಿಭಾಗದಲ್ಲಿ 2021ರಲ್ಲಿ ಅತಿ ಹೆಚ್ಚು ರೀಟ್ವೀಟ್​ ಆದ ಟ್ವೀಟ್​ ಯಾವುದು ಗೊತ್ತಾ? ಇಲ್ಲಿದೆ ಮಾಹಿತಿ

Most Retweeted Tweet in 2021 | 2021 ಪೂರ್ಣಗೊಳ್ಳುವ ಕಾಲ ಸಮೀಪಿಸಿದೆ. ಇನ್ನು ಕೆಲವೇ ದಿನಗಳು ಕಳೆದರೆ ಹೊಸ ವರ್ಷ ಬರಲಿದೆ. 2021ರಲ್ಲಿ ಏನೆಲ್ಲ ಆಗಿತ್ತು ಎಂಬುದನ್ನು ಎಲ್ಲರೂ ಮೆಲುಕು ಹಾಕುತ್ತಿದ್ದಾರೆ.

ಮನರಂಜನೆ ವಿಭಾಗದಲ್ಲಿ 2021ರಲ್ಲಿ ಅತಿ ಹೆಚ್ಚು ರೀಟ್ವೀಟ್​ ಆದ ಟ್ವೀಟ್​ ಯಾವುದು ಗೊತ್ತಾ? ಇಲ್ಲಿದೆ ಮಾಹಿತಿ
ವಿಜಯ್
TV9 Web
| Updated By: Digi Tech Desk|

Updated on:Dec 11, 2021 | 2:55 PM

Share

ತಮಿಳಿನ ದಳಪತಿ ವಿಜಯ್​ಗೆ ದೊಡ್ಡ ಮಟ್ಟದ ಬೇಡಿಕೆ ಇದೆ. ಅವರು ನಟಿಸುವ ಸಿನಿಮಾಗಳು ರಿಲೀಸ್​ಗೂ ಮೊದಲೇ ಸಾಕಷ್ಟು ಹೈಪ್​ ಪಡೆದುಕೊಳ್ಳುತ್ತವೆ. ಬಿಡುಗಡೆ ಆಗುವುದಕ್ಕೂ ಮೊದಲೇ ದೊಡ್ಡ ಮಟ್ಟದಲ್ಲಿ ಬಿಸ್ನೆಸ್​ ಮಾಡುತ್ತವೆ. ಇದು ಈ ಮೊದಲಿನಿಂದಲೂ ನಡೆದುಕೊಂಡು ಬಂದೇ ಇದೆ. ಈಗ ಅವರು ನಟಿಸುವ ಸಿನಿಮಾಗಳು ದೊಡ್ಡ ಬಜೆಟ್​ನದ್ದಾಗಿರುತ್ತದೆ. ಈ ಕಾರಣಕ್ಕೆ ಮೇಕಿಂಗ್​ ದೃಷ್ಟಿಯಿಂದಲೂ ಸಾಕಷ್ಟು ಶ್ರೀಮಂತವಾಗಿರುತ್ತದೆ. ಇನ್ನು, ಕಲೆಕ್ಷನ್​ ವಿಚಾರದಲ್ಲಿಯೂ ವಿಜಯ್ ನಟಿಸಿದ ಚಿತ್ರಗಳು ಹಲವು ದಾಖಲೆ ಮಾಡಿದ ಉದಾಹರಣೆ ಇದೆ. ಈಗ ಅವರ ಸಿನಿಮಾದ ಪೋಸ್ಟರ್​ ಒಂದು ಅಚ್ಚರಿಯ ದಾಖಲೆ ಬರೆದಿದೆ. ಈ ವಿಚಾರ ಕೇಳಿ ಅಭಿಮಾನಿಗಳು ಸಖತ್​ ಖುಷಿಪಟ್ಟಿದ್ದಾರೆ. ಹಾಗಾದರೆ ಏನದು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

2021 ಪೂರ್ಣಗೊಳ್ಳುವ ಕಾಲ ಸಮೀಪಿಸಿದೆ. ಇನ್ನು ಕೆಲವೇ ದಿನಗಳು ಕಳೆದರೆ ಹೊಸ ವರ್ಷ ಬರಲಿದೆ. 2021ರಲ್ಲಿ ಏನೆಲ್ಲ ಆಗಿತ್ತು ಎಂಬುದನ್ನು ಎಲ್ಲರೂ ಮೆಲುಕು ಹಾಕುತ್ತಿದ್ದಾರೆ. ಚಿತ್ರರಂಗದಲ್ಲಿ ಈ ವರ್ಷ ಸಾಕಷ್ಟು ಕಹಿ ಘಟನೆಗಳು ನಡೆದಿವೆ. ಇದರ ಜತೆಗೆ ಕೆಲ ಒಳ್ಳೆಯ ಘಟನೆಗಳೂ ನಡೆದಿವೆ. 2021 ವಿಜಯ್​ ಅಭಿಮಾನಿಗಳ ಪಾಲಿಗೆ ವಿಶೇಷ ವರ್ಷವಾಗಿದೆ. ಅವರ ನಟನೆಯ ‘ಬೀಸ್ಟ್​’ ಚಿತ್ರದ ಪೋಸ್ಟರ್​ ಒಂದು ಅಚ್ಚರಿಯ ದಾಖಲೆ ಬರೆದಿದೆ.

ವಿಜಯ್​ 65ನೇ ಚಿತ್ರಕ್ಕೆ ‘ಬೀಸ್ಟ್’ ಎಂದು ಹೆಸರಿಡಲಾಗಿದೆ. ಹೆಸರಿಗೆ ತಕ್ಕಂತೆ ಫಸ್ಟ್​ ಲುಕ್​ ರಿಲೀಸ್​ ಮಾಡಲಾಗಿತ್ತು. ವಿಜಯ್ ಜೀನ್ಸ್​ ಹಾಕಿ, ಕೈನಲ್ಲಿ ಗನ್​ ಹಿಡಿದು ನಿಂತಿದ್ದು ಸಾಕಷ್ಟು ಗಮನ ಸೆಳೆದಿತ್ತು. ವಿಜಯ್​ ಚಿತ್ರಗಳಲ್ಲಿ ಆ್ಯಕ್ಷನ್​ಗಳಿಗೆ ಯಾವುದೇ ಕೊರತೆ ಇರುವುದಿಲ್ಲ. ಈ ಪೋಸ್ಟರ್​ ನೋಡಿದ ನಂತರದಲ್ಲಿ ಈ ಸಿನಿಮಾದಲ್ಲಿ ಆ್ಯಕ್ಷನ್​ ದೃಶ್ಯಗಳು ಕೊಂಚ ಜಾಸ್ತಿಯೇ ಇರಲಿದೆ ಎಂದು ಊಹಿಸಲಾಗಿತ್ತು. ಈ ಪೋಸ್ಟರ್​ ನೋಡಿ ಎಲ್ಲರೂ ಸಖತ್​ ಥ್ರಿಲ್​ ಆಗಿದ್ದರು. ಈ ಟ್ವೀಟ್​ ಬರೋಬ್ಬರಿ 1,41,400 ರೀಟ್ವೀಟ್​​ಗಳನ್ನು ಕಂಡಿತ್ತು. ಈ ಮೂಲಕ ಮನರಂಜನೆ ವಿಭಾಗದಲ್ಲಿ ಈ ವರ್ಷ ಅತಿ ಹೆಚ್ಚು ರೀಟ್ವೀಟ್​ ಆದ ಟ್ವೀಟ್​ ಎನ್ನುವ ಖ್ಯಾತಿಯನ್ನು ಗಳಿಸಿಕೊಂಡಿದೆ. ಇನ್ನು, ಈ ಟ್ವೀಟ್​ 3,43,500 ಲೈಕ್ಸ್​ ಪಡೆಯುವ ಮೂಲಕ ಈ ವರ್ಷ ಎಂಟರ್​ಟೇನ್​ಮೆಂಟ್​ ವಿಭಾಗದಲ್ಲಿ ಅತಿ ಹೆಚ್ಚು ಲೈಕ್ಸ್​ ಪಡೆದ ಟ್ವೀಟ್​ ಎನ್ನುವ ಹಿರಿಮೆ ಸಿಕ್ಕಿದೆ. ಈ ಮೂಲಕ ಬಾಲಿವುಡ್​ ಮಂದಿಯ ಟ್ವೀಟ್​ಗಳನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದುಕೊಂಡಿದೆ.

ಪೂಜಾ ಹೆಗ್ಡೆ ಈ ಸಿನಿಮಾದ ನಾಯಕಿ. ಅವರು ಇದೇ ಮೊದಲ ಬಾರಿಗೆ ವಿಜಯ್​ಗೆ ಜತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾವನ್ನು ನೆಲ್ಸನ್​ ದಿಲೀಪ್​ಕುಮಾರ್​ ನಿರ್ದೇಶನ ಮಾಡುತ್ತಿದ್ದಾರೆ. ಸನ್​ ಪಿಕ್ಚರ್ಸ್​ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ.

ಇದನ್ನೂ ಓದಿ: ‘ಪುಷ್ಪ’ ಐಟಂ ಸಾಂಗ್​ನಲ್ಲಿ ಹಾಟ್ ಆಗಿ ಮಿಂಚಿದ ಸಮಂತಾ; ಇಲ್ಲಿದೆ ವಿಶೇಷ ಹಾಡು

Published On - 1:35 pm, Sat, 11 December 21

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!