ಪುನೀತ್ ಪ್ರತಿಮೆಗೆ ಆಂಧ್ರ ಪ್ರದೇಶದಲ್ಲಿ ಹೆಚ್ಚಾಯ್ತು ಬೇಡಿಕೆ; ಅಪ್ಪು ಪ್ರತಿಮೆ ತಯಾರಿಸಿ ಸುಸ್ತಾದ ಶಿಲ್ಪಿ

ಪುನೀತ್ ಪ್ರತಿಮೆಗೆ ಆಂಧ್ರ ಪ್ರದೇಶದಲ್ಲಿ ಹೆಚ್ಚಾಯ್ತು ಬೇಡಿಕೆ; ಅಪ್ಪು ಪ್ರತಿಮೆ ತಯಾರಿಸಿ ಸುಸ್ತಾದ ಶಿಲ್ಪಿ
ಪುನೀತ್​ ರಾಜ್​ಕುಮಾತ್​ ಪ್ರತಿಮೆ

ಪುನೀತ್ ರಾಜ್​ಕುಮಾರ್​ ಭೌತಿಕವಾಗಿ ನಮ್ಮ ನಡುವೆ ಇಲ್ಲದಿದ್ದರೂ ಕೋಟಿ ಜನರ ಹೃದಯದಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ. ಅವರ ಒಳ್ಳೆಯತನ, ಅವರು ಕೈಗೊಂಡ ಸೇವಾ ಕಾರ್ಯಕ್ರಮಗಳು ಅವರನ್ನು ಈಗಲೂ ನೆನಪಿಸಿಕೊಳ್ಳುವಂತೆ ಮಾಡಿದೆ.

TV9kannada Web Team

| Edited By: Rajesh Duggumane

Dec 11, 2021 | 2:05 PM

ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಅವರ ಅಕಾಲಿಕ ಮರಣ ವಾರ್ತೆಯನ್ನು ಅಭಿಮಾನಿಗಳಿಗೆ ಇನ್ನೂ ಅರಗಿಸಿಕೊಳ್ಳೋಕೆ ಆಗುತ್ತಿಲ್ಲ. ಪುನೀತ್ ನಿಧನದಿಂದ ಅವರ ಅಭಿಮಾನಿಗಳು ಶಾಕ್​ಗೆ ಒಳಗಾಗಿದ್ದಾರೆ. ಅವರು ಮೃತಪಟ್ಟು ಒಂದೂವರೆ ತಿಂಗಳು ಕಳೆಯುತ್ತಾ ಬಂದರೂ ನೋವು ಎಂಬುದು ಕಿಂಚಿತ್ತೂ ಕಡಿಮೆ ಆಗುತ್ತಿಲ್ಲ. ಪುನೀತ್​ಗೆ ಕರ್ನಾಟಕ ಮಾತ್ರವಲ್ಲದೆ ಪರಭಾಷೆಯಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ. ಬೇರೆ ರಾಜ್ಯಗಳಲ್ಲೂ ಪುನೀತ್​ಗೆ ನಮನ ಸಲ್ಲಿಸುವ ಕಾರ್ಯ ನಡೆದಿದೆ. ಕನ್ನಡ ಚಿತ್ರರಂಗ​ ಮಾತ್ರವಲ್ಲದೆ ಪರಭಾಷೆಯಲ್ಲಿರುವ ಅಭಿಮಾನಿಗಳು ಕೂಡ ಪುನೀತ್​ ಅವರನ್ನು ನೆನೆಯುತ್ತಿದ್ದಾರೆ. ಅವರ ಮೇಲಿನ ಅಭಿಮಾನವನ್ನು ನಾನಾ ರೀತಿಯಲ್ಲಿ ವ್ಯಕ್ತಪಡಿಸಲಾಗುತ್ತಿದೆ. ಕೆಲವರು ಪುನೀತ್ ದಾರಿಯಲ್ಲಿ ಸಾಗಿ ಸಮಾಜ ಸೇವೆ ಮಾಡುತ್ತಿದ್ದಾರೆ. ಸಾಕಷ್ಟು ಮಂದಿ ಆಂಧ್ರ ಪ್ರದೇಶದಲ್ಲಿ ಪುನೀತ್​ ಅವರ ಪ್ರತಿಮೆ ನಿರ್ಮಾಣ ಮಾಡುತ್ತಿದ್ದಾರೆ. ಹೀಗಾಗಿ, ಅಲ್ಲಿನ ಶಿಲ್ಪಿಗಳಿಗೆ ಸಾಕಷ್ಟು ಆರ್ಡರ್​ಗಳು ಬರುತ್ತಿವೆ.

ಪುನೀತ್ ರಾಜ್​ಕುಮಾರ್​ ಭೌತಿಕವಾಗಿ ನಮ್ಮ ನಡುವೆ ಇಲ್ಲದಿದ್ದರೂ ಕೋಟಿ ಜನರ ಹೃದಯದಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ. ಅವರ ಒಳ್ಳೆಯತನ, ಅವರು ಕೈಗೊಂಡ ಸೇವಾ ಕಾರ್ಯಕ್ರಮಗಳು ಅವರನ್ನು ಈಗಲೂ ನೆನಪಿಸಿಕೊಳ್ಳುವಂತೆ ಮಾಡಿದೆ. ಎಲ್ಲಾ ಏರಿಯಾಗಳಲ್ಲಿ ಪುನೀತ್ ಪ್ರತಿಮೆ ಸ್ಥಾಪಿಸಲು ಆಸಕ್ತಿ ತೋರಿದ್ದಾರೆ. ಆಂಧ್ರ ಪ್ರದೇಶದಲ್ಲೂ ಈ ರೀತಿ ಮಾಡಲಾಗುತ್ತಿದೆ. ಇಲ್ಲಿನ ಗುಂಟೂರು ಜಿಲ್ಲೆಯ ತೆನಾಲಿ ಜಿಲ್ಲೆಯ ಶಿಲ್ಪಿ ಕಾಟೂರಿ ವೆಂಕಟೇಶ್ವರರಾವ್ ಅವರಿಗೆ ಪುನೀತ್​ ಪ್ರತಿಮೆ ನಿರ್ಮಾಣಕ್ಕೆ ಭಾರೀ ಆರ್ಡರ್​ಗಳು ಬರುತ್ತಿವೆ.

ವೆಂಕಟೇಶ್ವರ್​ ಅವರು ಮಕ್ಕಳಾದ ರವಿಚಂದ್ರನ್ ಮತ್ತು ಶ್ರೀ ಹರ್ಷಲಾ ಜತೆ ಸೇರಿ 3ಡಿ ಪ್ರಿಂಟಿಂಗ್ ತಂತ್ರಜ್ಞಾನದಲ್ಲಿ ಪುನೀತ್ ರಾಜ್‌ಕುಮಾರ್ ಅವರ ಪ್ರತಿಮೆಗಳನ್ನು ತಯಾರಿಸುತ್ತಿದ್ದಾರೆ. ಅಭಿಮಾನಿಗಳ ಆಸೆಯಂತೆ 3ಡಿ ತಂತ್ರಜ್ಞಾನದಿಂದ ಮೂರ್ತಿಗಳ ತಯಾರಿಕೆ ಆರಂಭವಾಗಿದೆ. ಈ ತಂತ್ರಜ್ಞಾನದಿಂದ 3 ಇಂಚುಗಳಿಂದ ಹಿಡಿದು 100 ಅಡಿವರೆಗೆ ಮೂರ್ತಿಗಳನ್ನು ತಯಾರಿಸಬಹುದು. ಇದರಿಂದ ಸಿದ್ಧಪಡಿಸಿದ ಮೂರ್ತಿಗಳು ತುಂಬಾನೇ ಅದ್ಭುತವಾಗಿ ಮೂಡಿ ಬರುತ್ತವೆ.  ಈಗ ಪುನೀತ್​ ಅವರ ಪ್ರತಿಮೆ ನಿರ್ಮಾಣಕ್ಕೆ ಸಾಕಷ್ಟು ಆರ್ಡರ್​ ಬರುತ್ತಿದ್ದು, ಇವರು ಹಗಲು ರಾತ್ರಿ ಎನ್ನದೇ ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಗ್ರಾಹಕರ ಬೇಡಿಕೆಯನ್ನು ಈಡೇರಿಸಲು ಪ್ರಯತ್ನಿಸುತ್ತಿದ್ದಾರೆ.

ಇದನ್ನೂ ಓದಿ: ಪುನೀತ್​ ನಿಧನದ ಬಳಿಕ ರಾಘಣ್ಣ ನಟನೆಯ ಮೊದಲ ಚಿತ್ರ ‘ರಾಜಿ’; ಮುಹೂರ್ತದ ವೇಳೆ ಭಾವುಕ ಮಾತು

ಮ್ಯೂಸಿಯಂ ಆಗಲಿದೆ ಡಾ. ರಾಜ್​ ಆಡಿ ಬೆಳೆದ ಮನೆ; ಪುನೀತ್​ ಆಸೆ ಈಡೇರಿಸಲು ಕುಟುಂಬದ ನಿರ್ಧಾರ

Follow us on

Related Stories

Most Read Stories

Click on your DTH Provider to Add TV9 Kannada