ಮಾಜಿ ಗಂಡನ ಕುಟುಂಬದ ಮೇಲೆ ಸಮಂತಾಗೆ ಇನ್ನೂ ಕಡಿಮೆ ಆಗಿಲ್ಲ ಪ್ರೀತಿ; ಇಲ್ಲಿದೆ ಹೊಸ ಸಾಕ್ಷಿ

Samantha | Akhil Akkineni: ಇನ್​​ಸ್ಟಾಗ್ರಾಮ್​ ಸ್ಟೋರಿ ಮೂಲಕ ಸಮಂತಾ ಅವರು ಅಖಿಲ್​ ಅಕ್ಕಿನೇನಿಗೆ ಶುಭ ಹಾರೈಸಿದ್ದಾರೆ. ‘ಏಜೆಂಟ್​’ ಸಿನಿಮಾ ಸೂಪರ್​ ಹಿಟ್​ ಆಗಲಿ ಎಂದು ಅವರು ವಿಶ್​ ಮಾಡಿದ್ದಾರೆ.

ಮಾಜಿ ಗಂಡನ ಕುಟುಂಬದ ಮೇಲೆ ಸಮಂತಾಗೆ ಇನ್ನೂ ಕಡಿಮೆ ಆಗಿಲ್ಲ ಪ್ರೀತಿ; ಇಲ್ಲಿದೆ ಹೊಸ ಸಾಕ್ಷಿ
ಸಮಂತಾ ರುತ್ ಪ್ರಭು

Updated on: Apr 09, 2023 | 8:40 AM

ನಟಿ ಸಮಂತಾ ರುತ್​ ಪ್ರಭು (Samantha Ruth Prabhu) ಅವರು ಈಗ ಒಂಟಿಯಾಗಿ ಜೀವನ ಸಾಗಿಸುತ್ತಿದ್ದಾರೆ. ಪ್ರೀತಿಸಿ ಮದುವೆ ಆಗಿದ್ದ ನಾಗ ಚೈತನ್ಯ (Naga Chaitany) ಮತ್ತು ಸಮಂತಾ ನಡುವೆ ವೈಮನಸ್ಸು ಮೂಡಿದ್ದು ಬೇಸರದ ಸಂಗತಿ. ವಿಚ್ಛೇದನದ ಬಳಿಕ ಮಾಜಿ ಗಂಡನ ಬಗ್ಗೆ ಸಮಂತಾ ಎಲ್ಲಿಯೂ ಮಾತನಾಡಿಲ್ಲ. ಇಬ್ಬರ ಡಿವೋರ್ಸ್​ಗೆ ನಿಜವಾದ ಕಾರಣ ಏನು ಎಂಬುದು ಇನ್ನೂ ಗೌಪ್ಯವಾಗಿಯೇ ಉಳಿದಿದೆ. ಅಚ್ಚರಿ ಏನೆಂದರೆ, ನಾಗ ಚೈತನ್ಯ ಕುಟುಂಬದ ಬಗ್ಗೆ ಸಮಂತಾ ಅವರಿಗೆ ಇನ್ನೂ ಪ್ರೀತಿ ಇದೆ. ಅದಕ್ಕೆ ಹೊಸ ಸಾಕ್ಷಿ ಎಂಬಂತೆ ನಾಗ ಚೈತನ್ಯ ಅವರ ಸಹೋದರ ಅಖಿಲ್​ ಅಕ್ಕಿನೇನಿಗೆ (Akhil Akkineni) ಸಮಂತಾ ಅವರು ಬರ್ತ್​ಡೇ ವಿಶ್​ ಮಾಡಿದ್ದಾರೆ. ಇದು ಅಭಿಮಾನಿಗಳಿಗೆ ಖುಷಿ ನೀಡಿದೆ.

ಅಖಿಲ್​ ಅಕ್ಕಿನೇನಿ ಅವರಿಗೆ ಈಗ 29 ವರ್ಷ ವಯಸ್ಸು. ಶನಿವಾರ (ಏಪ್ರಿಲ್​ 08) ಅವರು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಆ ಪ್ರಯುಕ್ತ ಅವರ ಹೊಸ ಸಿನಿಮಾ ‘ಏಜೆಂಟ್​’ ಪೋಸ್ಟರ್​ ಬಿಡುಗಡೆ ಮಾಡಲಾಗಿದೆ. ಸ್ನೇಹಿತರು, ಅಭಿಮಾನಿಗಳು, ಸೆಲೆಬ್ರಿಟಿಗಳು ಅಖಿಲ್​ಗೆ ಶುಭಾಶಯ ಕೋರಿದ್ದಾರೆ. ಇನ್​ಸ್ಟಾಗ್ರಾಮ್​ ಸ್ಟೋರಿ ಮೂಲಕ ಸಮಂತಾ ಕೂಡ ಅಖಿಲ್​ಗೆ ಶುಭ ಹಾರೈಸಿದ್ದಾರೆ. ‘ಏಜೆಂಟ್​’ ಸಿನಿಮಾ ಸೂಪರ್​ ಹಿಟ್​ ಆಗಲಿ ಎಂದು ಅವರು ವಿಶ್​ ಮಾಡಿದ್ದಾರೆ.

ಇದನ್ನೂ ಓದಿ: ಪ್ರಿಯಾಂಕಾ ಚೋಪ್ರಾ ರೀತಿ ಬ್ಯಾಕ್​ಲೆಸ್​ ಆಗಿ ನಟಿಸ್ತಾರಾ ಸಮಂತಾ ರುತ್​ ಪ್ರಭು?

ಇದನ್ನೂ ಓದಿ
Naga Chaitanya: ‘ಸಮಂತಾ ಸಿಕ್ಕರೆ ತಬ್ಬಿಕೊಳ್ತೀನಿ, ಟ್ಯಾಟೂ ತೆಗೆಸಲ್ಲ’: ಹಳೇ ಹೆಂಡತಿ ಬಗ್ಗೆ ನಾಗ ಚೈತನ್ಯ ನೇರ ಮಾತು
Samantha: ನಾಗ ಚೈತನ್ಯ ಜತೆ ವಾಸಿಸಿದ್ದ ಮನೆಯನ್ನು ದುಬಾರಿ ಬೆಲೆ ಕೊಟ್ಟು ಖರೀದಿಸಿದ ಸಮಂತಾ; ಏನಿದು ಸೆಂಟಿಮೆಂಟ್​?
Samantha: ‘ನಾಗ ಚೈತನ್ಯಗೆ ಡಿವೋರ್ಸ್​ ನೀಡಿದ ಬಳಿಕ ಕಷ್ಟ ಆಯ್ತು’; ಕಡೆಗೂ ನಿಜ ಒಪ್ಪಿಕೊಂಡ ಸಮಂತಾ
‘ಊ ಅಂಟಾವಾ ಮಾವ..’ ಎಂದು ಸಖತ್ ಆಗಿ ಸ್ಟೆಪ್ ಹಾಕಿದ ಸಮಂತಾ-ಅಕ್ಷಯ್ ಕುಮಾರ್

ಪ್ಯಾನ್​ ಇಂಡಿಯಾ ಮಟ್ಟದಲ್ಲಿ ‘ಏಜೆಂಟ್​’ ಸಿನಿಮಾ ರಿಲೀಸ್​ ಆಗಲಿದೆ. ತೆಲುಗಿನ ಜೊತೆಗೆ ಕನ್ನಡ, ಹಿಂದಿ, ಮಲಯಾಳಂ ಹಾಗೂ ತಮಿಳಿನಲ್ಲಿ ಈ ಚಿತ್ರ ತೆರೆಕಾಣಲಿದೆ. ಏಪ್ರಿಲ್​ 28ರಂದು ಚಿತ್ರವನ್ನು ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ. ಹೊಸ ಪೋಸ್ಟರ್​ನಲ್ಲಿ ಅಖಿಲ್​ ಅಕ್ಕಿನೇನಿ ಅವರು ಗನ್​ ಹಿಡಿದು ಪೋಸ್​ ನೀಡಿದ್ದಾರೆ.

ಇದನ್ನೂ ಓದಿ: Samantha: ‘ನಾನು ಇದನ್ನು ಹೇಳಲೇ ಇಲ್ಲ’: ಮಾಜಿ ಗಂಡನ ವಿಷಯಕ್ಕೆ ಸ್ಪಷ್ಟನೆ ನೀಡಿದ ಸಮಂತಾ

ಇನ್ನು, ಸಮಂತಾ ಅವರ ಸಿನಿಮಾಗಳ ವಿಚಾರಕ್ಕೆ ಬರುವುದಾದರೆ ಏಪ್ರಿಲ್​ 14ರಂದು ‘ಶಾಕುಂತಲಂ’ ಚಿತ್ರ ಬಿಡುಗಡೆ ಆಗಲಿದೆ. ಪೌರಾಣಿಕ ಕಥಾಹಂದರ ಇರುವ ಈ ಸಿನಿಮಾದಲ್ಲಿ ಸಮಂತಾ ಅವರು ಶಕುಂತಲೆಯ ಪಾತ್ರ ಮಾಡಿದ್ದಾರೆ. ಈ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಅವರು ಬ್ಯುಸಿ ಆಗಿದ್ದಾರೆ. ‘ಶಾಕುಂತಲಂ’ ಚಿತ್ರಕ್ಕೆ ಗುಣಶೇಖರ್​ ಅವರು ನಿರ್ದೇಶನ ಮಾಡಿದ್ದಾರೆ. ಅಲ್ಲು ಅರ್ಜುನ್​ ಪುತ್ರಿ ಅಲ್ಲು ಅರ್ಹಾ ಕೂಡ ಇದರಲ್ಲಿ ನಟಿಸಿರುವುದು ವಿಶೇಷ. ಅಭಿಮಾನಿಗಳು ಈ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಇದನ್ನೂ ಓದಿ: Rashmika Mandanna: ರಶ್ಮಿಕಾ ಮಂದಣ್ಣಗೆ ಮಹಿಳಾ ಪ್ರಧಾನ ಸಿನಿಮಾ ಸಿಗಲು ಕಾರಣವಾಗಿದ್ದು ಸಮಂತಾ

ಸಮಂತಾ ಅವರ ಕೈಯಲ್ಲಿ ಹಲವು ಸಿನಿಮಾ ಆಫರ್​ಗಳಿವೆ. ವಿಜಯ್​ ದೇವರಕೊಂಡ ಜೊತೆ ‘ಖುಷಿ’ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ. ಪ್ರಿಯಾಂಕಾ ಚೋಪ್ರಾ ಅಭಿನಯಿಸುತ್ತಿರುವ ‘ಸಿಟಾಡೆಲ್​’ ವೆಬ್​ ಸಿರೀಸ್​ನ ಭಾರತದ ವರ್ಷನ್​ನಲ್ಲಿ ಸಮಂತಾ ನಟಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 8:40 am, Sun, 9 April 23

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us