ಕೆಂಡಸಂಪಿಗೆ ಸಿನಿಮಾ ಮೂಲಕ ಸಿನಿಮಾರಂಗಕ್ಕೆ ಹೆಜ್ಜೆ ಇಟ್ಟು ಸಕ್ಸಸ್ ಫುಲ್ ನಟಿಯಾಗಿ ಹೊರಹೊಮ್ಮಿರುವವರು ಮಾನ್ವಿತಾ ಕಾಮತ್ (Actress Manvita Kamath) ಮದುವೆ ಮುಹೂರ್ತ ಫಿಕ್ಸ್ ಆಗಿದೆ. ಮೈಸೂರು ಮೂಲದ ಸಂಗೀತ ನಿರ್ದೇಶಕ ಅರುಣ್ ಕುಮಾರ್ ಅವರೊಂದಿಗೆ ಕೆಂಡಸಂಪಿಗೆ ಕುವರಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದೇ ಮೇ 01 ರಂದು ಮಾನ್ವಿತಾ- ಅರುಣ್ ಕುಮಾರ್ ವಿವಾಹೋತ್ಸವ ನಡೆಯಲಿದೆ.
ಮಾನ್ವಿತಾ ಕಾಮತ್ ಹಾಗೂ ಅರುಣ್ ಕುಮಾರ್ ಕೊಂಕಣಿ ಸಂಪ್ರದಾಯದಂತೆ ಮೇ1 ಕ್ಕೆ ಹೊಸ ಬಾಳಿಗೆ ಹೆಜ್ಜೆ ಇಡಲಿದ್ದಾರೆ. ಅದಕ್ಕೂ ಮುನ್ನ ಏಪ್ರಿಲ್ 29ಕ್ಕೆ ಮೆಹಂದಿ ಕಾರ್ಯಕ್ರಮ, ಏಪ್ರಿಲ್ 30 ಅರಿಶಿನ ಶಾಸ್ತ್ರ ಜರುಗಿದರೆ, ಏಪ್ರಿಲ್ 30ರಂದು ಸಂಗೀತ್ ಕಾರ್ಯಕ್ರಮ ನಡೆಯಲಿದೆ. ಚಿಕ್ಕಮಗಳೂರಿನ ಕಳಸದಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಮದುವೆ ನಡೆಯಲಿದೆ. ಮಾನ್ವಿತಾ ಮತ್ತು ಅರುಣ್ ಅವರದ್ದು ಅರೇಂಜ್ ಮ್ಯಾರೇಜ್ ಆಗಿದ್ದು, ಅಮ್ಮ ನೋಡಿದ ವರನನ್ನೇ ಮಾನ್ವಿತಾ ಮದುವೆಯಾಗುತ್ತಿರುವುದು ವಿಶೇಷ.
ಆರ್ಜೆಯಾಗಿದ್ದ ಮಾನ್ವಿತಾ ಸುಕ್ಕ ಸೂರಿ ನಿರ್ದೇಶನದ ಕೆಂಡಸಂಪಿಗೆ ಚಿತ್ರದಲ್ಲಿ ನಾಯಕಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ಬಳಿಕ ಶಿವಣ್ಣನ ಟಗರು ಸಿನಿಮಾದಲ್ಲಿ ಬಣ್ಣ ಹಚ್ಚಿ ಟಗರು ಪುಟ್ಟಿಯಾಗಿ ಕರುನಾಡ ಪ್ರೇಕ್ಷಕರ ಮನ ಗೆದ್ದ ಈ ಸುಂದರಿ ಈಗ ಹಸೆಮಣೆ ಏರಲು ರೆಡಿಯಾಗಿದ್ದು, ಮದುವೆ ಸಕಲ ಸಿದ್ಧತೆಗಳು ಭರದಿಂದ ಸಾಗಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.