‘ನಟ್ವರ್​ಲಾಲ್‌’ ಚಿತ್ರದಿಂದ 2ನೇ ಹಾಡು ಬಿಡುಗಡೆ; ‘ವರಾಹ ರೂಪಂ..’ ಗಾಯಕನ ರೊಮ್ಯಾಂಟಿಕ್​ ಗೀತೆ ಇದು

‘ಅಚ್ಚಚ್ಚೋ ಅಚ್ಚು ಮೆಚ್ಚಿವಳು..’ ಹಾಡನ್ನು ಭರ್ಜರಿ ಚೇತನ್ ಕುಮಾರ್ ಬರೆದಿದ್ದಾರೆ. ಧರ್ಮ ವಿಶ್​ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ‘ವರಾಹ ರೂಪಂ..’ ಹಾಡಿನ ಮೂಲಕ ಕನ್ನಡದಲ್ಲಿ ಜನಪ್ರಿಯತೆ ಪಡೆದ ಗಾಯಕ ಸಾಯಿ ವಿಘ್ನೇಶ್ ಅವರು ಇದೇ ಮೊದಲ ಬಾರಿಗೆ ಚಂದನವನದಲ್ಲಿ ರೊಮ್ಯಾಂಟಿಕ್ ಹಾಡಿಗೆ ಧ್ವನಿ ನೀಡಿದ್ದಾರೆ.

‘ನಟ್ವರ್​ಲಾಲ್‌’ ಚಿತ್ರದಿಂದ 2ನೇ ಹಾಡು ಬಿಡುಗಡೆ; ‘ವರಾಹ ರೂಪಂ..’ ಗಾಯಕನ ರೊಮ್ಯಾಂಟಿಕ್​ ಗೀತೆ ಇದು
ತನುಷ್ ಶಿವಣ್ಣ, ಸೋನಲ್ ಮಾಂಥೆರೋ
Edited By:

Updated on: Nov 07, 2023 | 6:35 AM

‘ಕಾಂತಾರ’ ಸಿನಿಮಾದ ಯಶಸ್ಸಿನಲ್ಲಿ ಆ ಚಿತ್ರದ ಹಾಡುಗಳ ಕೊಡುಗೆ ಕೂಡ ಸಾಕಷ್ಟಿದೆ. ಅದರಲ್ಲೂ ‘ವರಾಹ ರೂಪಂ..’ ಹಾಡು ಸೂಪರ್​ ಹಿಟ್​ ಆಯಿತು. ಈ ಗೀತೆಗೆ ಧ್ವನಿ ನೀಡಿದ್ದು ಸಾಯಿ ವಿಘ್ನೇಶ್ (Sai Vignesh)​. ಅವರ ಕಂಠದಿಂದ ಕನ್ನಡದಲ್ಲಿ ಇನ್ನೊಂದು ಹೊಸ ಗೀತೆ ಮೂಡಿಬಂದಿದೆ. ಅದು ‘ಮಿಸ್ಟರ್​ ನಟ್ವರ್​ಲಾಲ್​’ ಸಿನಿಮಾದಿಂದ. ಈ ಮೊದಲು ‘ಮಡಮಕ್ಕಿ’, ‘ನಂಜುಂಡಿ ಕಲ್ಯಾಣ’ ಸಿನಿಮಾಗಳಲ್ಲಿ ಹೀರೋ ಆಗಿ ಮಿಂಚಿದ್ದ ನಟ ತನುಷ್ ಶಿವಣ್ಣ (Thanush Shivanna) ಅವರು ಈಗ ‘ಮಿಸ್ಟರ್​ ನಟ್ವರ್​ಲಾಲ್​’ (Mr Natwarlal) ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಲವ ಅವರು ‘ಮಿಸ್ಟರ್ ನಟ್ವರ್​ಲಾಲ್’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಟೀಸರ್ ಮತ್ತು ಮೊದಲ ಹಾಡಿಗೆ ಮೆಚ್ಚುಗೆ ಸಿಕ್ಕಿದೆ. ಈಗ ಎರಡನೇ ಹಾಡು ಕೂಡ ಗಮನ ಸೆಳೆಯುತ್ತಿದೆ. ಸದ್ಯಕ್ಕೆ ಪ್ರಚಾರ ಕಾರ್ಯದಲ್ಲಿ ಈ ಚಿತ್ರತಂಡ ನಿರತವಾಗಿದೆ.

ಒಂದು ಹೊಸ ಕಥೆಯೊಂದಿಗೆ ನಟ ತನುಷ್​ ಶಿವಣ್ಣ ಅವರು ‘ಮಿಸ್ಟರ್​ ನಟ್ವರ್​ಲಾಲ್’ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬರಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಖ್ಯಾತ ನಟಿ ಸೋನಲ್ ಮಾಂಥೆರೋ ಅವರ ನಾಯಕಿಯಾಗಿ ಅಭಿನಯಿಸಿದ್ದಾರೆ. ಈ ಸಿನಿಮಾದಿಂದ ‘ಅಚ್ಚಚ್ಚೋ ಅಚ್ಚು ಮೆಚ್ಚಿವಳು..’ ಎಂಬ 2ನೇ ಹಾಡು ಬಿಡುಗಡೆ ಆಗಿದೆ. ಪ್ರೇಕ್ಷಕರಿಂದ ಈ ಹಾಡಿಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.

ಇದನ್ನೂ ಓದಿ: ಜಿಗರ್‌; ಸಿನಿಮಾದ ಹಾಡು ಬಿಡುಗಡೆ: ಸಂಚಿತ್ ಹೆಗ್ಡೆ ದನಿಯಲ್ಲಿ ಹೊಸ ಹಾಡು

‘ಅಚ್ಚಚ್ಚೋ ಅಚ್ಚು ಮೆಚ್ಚಿವಳು..’ ಹಾಡನ್ನು ಭರ್ಜರಿ ಚೇತನ್ ಕುಮಾರ್ ಬರೆದಿದ್ದಾರೆ. ಸಂಗೀತ ನಿರ್ದೇಶಕ ಧರ್ಮ ವಿಶ್​ ಅವರು ಈ ಗೀತೆಗೆ ಸಂಗೀತ ಸಂಯೋಜಿಸಿದ್ದಾರೆ. ಕನ್ನಡದಲ್ಲಿ ‘ಕಾಂತಾರ’ ಸಿನಿಮಾದ ‘ವರಾಹ ರೂಪಂ..’ ಹಾಡಿನ ಮೂಲಕ ಗಾಯಕ ಸಾಯಿ ವಿಘ್ನೇಶ್ ಅವರು ದೊಡ್ಡ ಮಟ್ಟದ ಜನಪ್ರಿಯತೆ ಪಡೆದುಕೊಂಡರು. ಈಗ ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಅವರು ರೊಮ್ಯಾಂಟಿಕ್ ಹಾಡಿಗೆ ಧ್ವನಿ ನೀಡಿದ್ದಾರೆ. ಈ ಹಾಡಿನಿಂದಾಗಿ ‘ಮಿಸ್ಟರ್​ ನಟ್ವರ್​ಲಾಲ್​’ ಸಿನಿಮಾ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಹೆಚ್ಚಿದೆ.

ಇದನ್ನೂ ಓದಿ: Mellage Song: ರಮ್ಯಾ ನಿರ್ಮಾಣದ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದಿಂದ ಬಂತು ‘ಮೆಲ್ಲಗೆ..’ ಮೆಲೋಡಿ ಸಾಂಗ್​

‘ಮಿಸ್ಟರ್​ ನಟ್ವರ್​ಲಾಲ್’ ಸಿನಿಮಾದಲ್ಲಿ ದೊಡ್ಡ ತಾರಾಬಳಗ ಇದೆ. ತನುಷ್ ಶಿವಣ್ಣ ಮತ್ತು ಸೋನಾಲ್ ಮಾಂಥೆರೋ ಜೊತೆಗೆ ನಾಗಭೂಷಣ್, ಕಾಕ್ರೋಚ್ ಸುಧಿ, ಯಶ್ ಶೆಟ್ಟಿ, ರಾಜೇಶ್ ನಟರಂಗ, ರಘು ರಾಮನಕೊಪ್ಪ, ರಾಜೇಂದ್ರ ಕಾರಂತ್ ಸೇರಿದಂತೆ ಅನೇಕ ಕಲಾವಿದರು ಅಭಿನಯಿಸಿದ್ದಾರೆ.

Acchacchacho Lyrical | Mr.Natwarlal | Sai Vignesh | Tanush Shivanna | Sonal | Lava | Dharma Vish

ಈ ಸಿನಿಮಾವನ್ನ ತನುಷ್ ಶಿವಣ್ಣ ಅವರೇ ನಿರ್ಮಾಣ ಮಾಡಿದ್ದಾರೆ. ಶೀಘ್ರವೇ ಸಿನಿಮಾವನ್ನು ರಿಲೀಸ್​ ಮಾಡಲು ತಯಾರಿ ನಡೆದಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:26 pm, Mon, 6 November 23

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us