Mellage Song: ರಮ್ಯಾ ನಿರ್ಮಾಣದ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದಿಂದ ಬಂತು ‘ಮೆಲ್ಲಗೆ..’ ಮೆಲೋಡಿ ಸಾಂಗ್​

Raj B Shetty: ಒಂದಷ್ಟು ಕಾರಣಗಳಿಂದಾಗಿ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾ ಮೇಲೆ ನಿರೀಕ್ಷೆ ಮೂಡಿದೆ. ‘ಮೆಲ್ಲಗೆ..’ ಹಾಡಿನಿಂದಾಗಿ ಆ ನಿರೀಕ್ಷೆ ಇನ್ನಷ್ಟು ಜಾಸ್ತಿ ಆಗಿದೆ. ಈ ಗೀತೆಗೆ ಮಿಧುನ್‍ ಮುಕುಂದನ್‍ ಸಂಗೀತ ಸಂಯೋಜಿಸಿದ್ದಾರೆ. ಮಾಧುರಿ ಶೇಷಾದ್ರಿ ಅವರ ಕಂಠದಲ್ಲಿ ಈ ಹಾಡು ಮೂಡಿಬಂದಿದೆ. ಪೃಥ್ವಿ ಅವರು ಸಾಹಿತ್ಯ ರಚಿಸಿದ್ದಾರೆ.

Mellage Song: ರಮ್ಯಾ ನಿರ್ಮಾಣದ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದಿಂದ ಬಂತು ‘ಮೆಲ್ಲಗೆ..’ ಮೆಲೋಡಿ ಸಾಂಗ್​
ಸಿರಿ ರವಿಕುಮಾರ್​, ರಾಜ್​ ಬಿ. ಶೆಟ್ಟಿ
Follow us
|

Updated on: Nov 06, 2023 | 9:01 PM

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ರಾಜ್​ ಬಿ. ಶೆಟ್ಟಿ (Raj B Shetty) ನಟನೆ, ನಿರ್ದೇಶನದ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದಲ್ಲಿ ರಮ್ಯಾ ದಿವ್ಯ ಸ್ಪಂದನಾ (Ramya Divya Spandana) ಅವರು ಅಭಿನಯಿಸಬೇಕಿತ್ತು. ಆದರೆ ಕಾರಣಾಂತರಗಳಿಂದ ಅವರು ಆ ಪ್ರಾಜೆಕ್ಟ್​ನಿಂದ ಹಿಂದೆ ಸರಿದು, ಕೇವಲ ನಿರ್ಮಾಪಕಿಯಾಗಿ ಮುಂದುವರಿದರು. ನಾಯಕಿಯ ಸ್ಥಾನಕ್ಕೆ ನಟಿ ಸಿರಿ ರವಿಕುಮಾರ್​ ಎಂಟ್ರಿ ಆಯಿತು. ಈ ಸಿನಿಮಾದ ಬಿಡುಗಡೆಗೆ ಈಗ ದಿನಗಣನೆ ಶುರುವಾಗಿದೆ. ನವೆಂಬರ್​ 24ರಂದು ‘ಸ್ವಾತಿ ಮುತ್ತಿನ ಮಳೆ ಹನಿಯೇ(Swathi Mutthina Male Haniye) ಸಿನಿಮಾ ರಿಲೀಸ್​ ಆಗಲಿದೆ. ಈಗ ಈ ಚಿತ್ರದಿಂದ ಮೊದಲ ಸಾಂಗ್​ ಬಿಡುಗಡೆ ಆಗಿದೆ. ‘ಮೆಲ್ಲಗೆ..’ ಎಂಬ ಈ ಸಾಂಗ್​ ಸಖತ್​ ಮಧುರವಾಗಿದೆ. ಸಂಗೀತಪ್ರೇಮಿಗಳು ಈ ಹಾಡನ್ನು ಕೇಳಿ ತಲೆದೂಗುತ್ತಿದ್ದಾರೆ. ಒಂದಷ್ಟು ಕಾರಣಗಳಿಂದಾಗಿ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದ ಮೇಲೆ ನಿರೀಕ್ಷೆ ಮೂಡಿದೆ. ‘ಮೆಲ್ಲಗೆ..’ ಹಾಡಿನಿಂದಾಗಿ ಆ ನಿರೀಕ್ಷೆ ಇನ್ನಷ್ಟು ಜಾಸ್ತಿ ಆಗಿದೆ.

‘ಒಂದು ಮೊಟ್ಟೆಯ ಕಥೆ’, ‘ಗರುಡ ಗಮನ ವೃಷಭ ವಾಹನ’ ಸಿನಿಮಾಗಳ ನಿರ್ದೇಶನದಿಂದ ಗುರುತಿಸಿಕೊಂಡಿರುವ ರಾಜ್​ ಬಿ. ಶೆಟ್ಟಿ ಅವರು ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾಗೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಹಾಗಾಗಿ ಅಭಿಮಾನಿಗಳಿಗೆ ಈ ಸಿನಿಮಾದ ಕಥೆಯ ಬಗ್ಗೆ ವಿಶೇಷವಾದ ನಿರೀಕ್ಷೆ ಮನೆ ಮಾಡಿದೆ. ‘ಮೆಲ್ಲಗೆ..’ ಗೀತೆಗೆ ಮಿಧುನ್‍ ಮುಕುಂದನ್‍ ಅವರು ಸಂಗೀತ ಸಂಯೋಜಿಸಿದ್ದಾರೆ. ಮಾಧುರಿ ಶೇಷಾದ್ರಿ ಅವರ ಕಂಠದಲ್ಲಿ ಈ ಹಾಡು ಮೂಡಿಬಂದಿದೆ. ಪೃಥ್ವಿ ಅವರು ಈ ಹಾಡನ್ನು ಬರೆದಿದ್ದಾರೆ. ಹಾಡಿನ ಬಗ್ಗೆ ಮಾತಾಡಿದ ರಾಜ್‍ ಬಿ. ಶೆಟ್ಟಿ ಅವರು, ‘ಪ್ರೀತಿಯ ಕುರಿತ ಮಹಿಳೆಯ ದೃಷ್ಟಿಕೋನದ ಹಾಡು ಇದು. ಈ ಪ್ರೀತಿಯನ್ನು ಮಹಿಳೆಯರು ಹೇಗೆ ಅನುಭವಿಸುತ್ತಾರೆ ಎಂಬುದು ಬೇಕಾಗಿತ್ತು. ಆದ್ದರಿಂದ ಪೃಥ್ವಿ ಅವರಿಂದ ಇದನ್ನು ಬರೆಸಿದ್ದೇನೆ’ ಎಂದಿದ್ದಾರೆ.

‘ಮೆಲ್ಲಗೆ..’ ಗೀತೆಯಲ್ಲಿ ಶಾಸ್ತ್ರೀಯ ಸಂಗೀತದ ಸ್ಪರ್ಶ ಇದೆ. ಸಂಗೀತ ನಿರ್ದೇಶಕ ಮಿಧುನ್‍ ಮುಕುಂದನ್‍ ಅವರು ತಮ್ಮ ಸಂಗೀತದಿಂದ ಮೋಡಿ ಮಾಡುತ್ತಾರೆ ಎಂಬುದು ರಾಜ್​ ಬಿ. ಶೆಟ್ಟಿ ಅವರ ಅಭಿಪ್ರಾಯ. ಸ್ವತಃ ಹಿನ್ನೆಲೆ ಗಾಯಕಿಯೂ ಆಗಿರುವ ಈ ಸಿನಿಮಾದ ನಟಿ ಸಿರಿ ರವಿಕುಮಾರ್ ಈ ಸಾಂಗ್​ಗೆ ಫಿದಾ ಆಗಿದ್ದಾರೆ. ತಾವು ಈ ಹಾಡನ್ನು ಮತ್ತೆ ಮತ್ತೆ ಕೇಳುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದಲ್ಲಿ ರಾಜ್‍ ಬಿ. ಶೆಟ್ಟಿ ಮತ್ತು ಸಿರಿ ರವಿಕುಮಾರ್​ ಜೊತೆಗೆ ಬಾಲಾಜಿ ಮನೋಹರ್‍, ರೇಖಾ ಕೂಡ್ಲಿಗಿ, ಸೂರ್ಯ ವಸಿಷ್ಠ, ಜೆ.ಪಿ. ತುಮ್ಮಿನಾಡು, ಸ್ನೇಹ ಶರ್ಮಾ ಮುಂತಾದ ಕಲಾವಿದರು ನಟಿಸಿದ್ದಾರೆ.

ಇದನ್ನೂ ಓದಿ: ಹೃದಯಾಘಾತ ವಿಚಾರಕ್ಕೆ ಸ್ಪಷ್ಟನೆ ನೀಡಿದ ನಟಿ ರಮ್ಯಾ

‘ಸ್ಯಾಂಡಲ್‌ವುಡ್‌ ಕ್ವೀನ್‌’ ರಮ್ಯಾ ದಿವ್ಯ ಸ್ಪಂದನಾ ಅವರ ಒಡೆತನದ ‘ಆ್ಯಪಲ್‍ ಬಾಕ್ಸ್ ಸ್ಟುಡಿಯೋಸ್‍’ ಸಂಸ್ಥೆಯ ಮೂಲಕ ನಿರ್ಮಾಣ ಆದ ಮೊದಲ ಸಿನಿಮಾ ‘ಸ್ವಾತಿ ಮುತ್ತಿನ ಮಳೆ ಹನಿಯೇ’. ಈ ಸಿನಿಮಾದ ನಿರ್ಮಾಣದಲ್ಲಿ ‘ಲೈಟರ್‍ ಬುದ್ಧ ಫಿಲ್ಮ್ಸ್​’ ಸಂಸ್ಥೆ ಕೂಡ ಕೈ ಜೋಡಿಸಿದೆ. ‘ಕೆ.ಆರ್.ಜಿ. ಸ್ಟುಡಿಯೋಸ್‍’ ಮೂಲಕ ರಾಜ್ಯಾದ್ಯಂತ ನವೆಂಬರ್​ 24ರಂದು ರಿಲೀಸ್​ ಆಗಲಿದೆ. ಪ್ರವೀಣ್‍ ಶ್ರೀಯಾನ್‍ ಅವರು ಈ ಸಿನಿಮಾದ ಛಾಯಾಗ್ರಹಣ ಮಾಡುವುದರ ಜೊತೆಗೆ, ರಾಜ್‍ ಜೊತೆಗೂಡಿ ಸಂಕಲನದ ಜವಾಬ್ದಾರಿಯನ್ನೂ ನಿಭಾಯಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ ತಿಳಿಯಿರಿ
ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ ತಿಳಿಯಿರಿ
Navratri 2024 4th Day: ನವರಾತ್ರಿ 4ನೇ ದಿನ ಕುಷ್ಮಾಂಡ ದೇವಿಯ ಮಹತ್ವವೇನು?
Navratri 2024 4th Day: ನವರಾತ್ರಿ 4ನೇ ದಿನ ಕುಷ್ಮಾಂಡ ದೇವಿಯ ಮಹತ್ವವೇನು?
Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ