
ಅಭಿಷೇಕ್ ಅಂಬರೀಷ್ (Abhishek Ambareesh) ಇತ್ತೀಚೆಗೆ ಸೈಲೆಂಟ್ ಆಗಿದ್ದಾರೆ. ಖ್ಯಾತ ನಟ ಅಂಬರೀಷ್ ಅವರ ಮಗನಾಗಿದ್ದರೂ ಸಿನಿಮಾ ರಂಗದಲ್ಲಿ ಅವರು ಅಷ್ಟಾಗಿ ಆ್ಯಕ್ಟೀವ್ ಆಗಿಲ್ಲ. ಈಗ ಅವರು ತಮ್ಮನ್ನು ತಾವು ಅಯೋಗ್ಯ ಎಂದು ಕರೆದುಕೊಂಡಿದ್ದಾರೆ. ಈ ಸಂದರ್ಭದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಚರ್ಚೆಗೆ ಕಾರಣ ಆಗಿದೆ. ಅನೇಕರು ಈ ವಿಡಿಯೋ ಹಂಚಿಕೊಳ್ಳುತ್ತಾ ಇದ್ದಾರೆ.
ಅಭಿಷೇಕ್ ಅವರು ಮೊದಲು ನಟಿಸಿದ್ದು 2019ರ ‘ಅಮರ್’ ಸಿನಿಮಾದಲ್ಲಿ. ಈ ಚಿತ್ರ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತು. ಆ ಬಳಿಕ 2023ರಲ್ಲಿ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾ ಮಾಡಿದರು. ಈ ಚಿತ್ರ ಕೂಡ ಫೇಲ್ ಆಯಿತು. ಸಿನಿಮಾ ಸಂಪೂರ್ಣವಾಗಿ ಸೋತಿತ್ತು. ಆ ಬಳಿಕ ಅಭಿಷೇಕ್ ಅಂಬರೀಷ್ ಅವರು ‘ಕಾಳಿ’ ಚಿತ್ರ ಒಪ್ಪಿಕೊಂಡರು. ಈ ಸಿನಿಮಾದ ಲುಕ್ 2022ರಲ್ಲೇ ರಿಲೀಸ್ ಆಗಿದ್ದರೂ ಸಿನಿಮಾ ಸೆಟ್ಟೇರಿಲಿಲ್ಲ.
Abhishek Ambareesh 😌 pic.twitter.com/U6gEcJzdeO
— ಸಿನಿ_ಚಿಂತಕ (@CineChintaka) August 2, 2026
ಅಭಿಷೇಕ್ ವೃತ್ತಿ ಜೀವನದಲ್ಲಿ ಮಾಡಿದ್ದು ಕೇವಲ ಎರಡು ಸಿನಿಮಾ ಮಾತ್ರ. ಹೀಗಾಗಿ, ಅವರ ಮುಂದಿನ ಸಿನಿಮಾ ಯಾವಾಗ ಎಂಬ ಪ್ರಶ್ನೆ ಮುಡೋದು ಸಹಜ. ಇತ್ತೀಚೆಗೆ ನಡೆದ ‘ಅಯೋಗ್ಯ 2’ ಸಿನಿಮಾ ಈವೆಂಟ್ನಲ್ಲಿ ಅಭಿಷೇಕ್ ಅಂಬರೀಷ್ ಅವರಿಗೆ ಈ ಬಗ್ಗೆ ಪ್ರಶ್ನೆ ಮಾಡಲಾಗಿದೆ. ‘ನಿಮ್ಮ ಮುಂದಿನ ಸಿನಿಮಾ ಯಾವಾಗ’ ಎಂದು ಆ್ಯಂಕರ್ ನಿರಂಜನ್ ದೇಶಪಾಂಡೆ ಕೇಳಿದರು. ಇದಕ್ಕೆ ಅಭಿಷೇಕ್ ಕೊಟ್ಟ ಉತ್ತರ ವಿಚಿತ್ರವಾಗಿತ್ತು.
ಇದನ್ನೂ ಓದಿ: ‘ಪ್ರೀತಿಯಿಂದ ಮನೆ ಹತ್ತಿರ ಬಂದರೆ ಬರಬೇಡಿ ಅನ್ನೋದು ನಮ್ಮ ಸಂಪ್ರದಾಯವಲ್ಲ’: ಅಭಿಷೇಕ್ ಅಂಬರೀಷ್ ಹೀಗೆ ಹೇಳಿದ್ದೇಕೆ?
‘ನಾವಿಲ್ಲಿ ಅಯೋಗ್ಯ 2 ಸಿನಿಮಾ ಬಗ್ಗೆ ಮಾತನಾಡೋಕೆ ಬಂದಿದ್ದೇವೆ. ಈ ಅಯೋಗ್ಯನ ಬಗ್ಗೆ ಬಿಟ್ಟುಬಿಡಿ’ ಎಂದು ನೇರವಾಗಿ ಹೇಳಿದರು. ಆಗ ಇದಕ್ಕೂ ಕೆಲವರು ಚಪ್ಪಾಳೆ ತಟ್ಟಿ, ಶಿಳ್ಳೆ ಹೊಡೆದರು. ‘ಬಹುಶಃ ಹೆಚ್ಚಿನ ಹಣ ಕೊಟ್ಟಿದ್ದೇನೆ’ ಎಂದು ಅವರೇ ಒಪ್ಪಿಕೊಂಡರು. ಈ ವಿಡಿಯೋ ವೈರಲ್ ಆಗಿದ್ದು, ನಾನಾ ರೀತಿಯಲ್ಲಿ ಪ್ರತಿಕ್ರಿಯಿಸಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.