‘ಪ್ರೀತಿಯಿಂದ ಮನೆ ಹತ್ತಿರ ಬಂದರೆ ಬರಬೇಡಿ ಅನ್ನೋದು ನಮ್ಮ ಸಂಪ್ರದಾಯವಲ್ಲ’: ಅಭಿಷೇಕ್ ಅಂಬರೀಷ್ ಹೀಗೆ ಹೇಳಿದ್ದೇಕೆ?
ಈ ವರ್ಷ ಅಭಿಷೇಕ್ ಅಂಬರೀಷ್ ಅವರು ಅವಿವಾರನ್ನು ಮದುವೆ ಆಗಿದ್ದಾರೆ. ಮದುವೆಯ ಬಳಿಕ ಮೊದಲ ವರ್ಷದ ಜನ್ಮದಿನ. ಈ ಹಿನ್ನೆಲೆಯಲ್ಲಿ ಅದ್ದೂರಿಯಾಗಿ ಬರ್ತ್ಡೇ ಆಚರಿಸಿಕೊಳ್ಳಬೇಕಿತ್ತು. ಆದರೆ, ಅಭಿಷೇಕ್ ಆ ರೀತಿ ಮಾಡುತ್ತಿಲ್ಲ. ಅವರು ಬರ್ತ್ಡೇನ ಸರಳವಾಗಿ ಆಚರಿಸಿಕೊಳ್ಳಲು ನಿರ್ಧರಿಸಿದ್ದಾರೆ. ಈ ಬಗ್ಗೆ ಅವರು ಬರೆದುಕೊಂಡಿದ್ದಾರೆ.
ಅಂಬರೀಷ್ (Ambareesh) ಅವರನ್ನು ಕಂಡರೆ ಫ್ಯಾನ್ಸ್ಗೆ ಸಾಕಷ್ಟು ಪ್ರೀತಿ ಇತ್ತು. ಅಭಿಮಾನಿಗಳನ್ನು ಅಂಬಿ ನಡೆಸಿಕೊಳ್ಳುತ್ತಿದ್ದ ರೀತಿ ಹಾಗಿತ್ತು. ಈ ಪ್ರೀತಿಯನ್ನು ಅಭಿಮಾನಿಗಳು ಮಗನ ಮೇಲೂ ತೋರಿಸುತ್ತಿದ್ದಾರೆ. ಅಂಬಿಗೆ ಕೊಟ್ಟಷ್ಟೇ ಪ್ರೀತಿಯನ್ನು ಫ್ಯಾನ್ಸ್ ಅಭಿಷೇಕ್ಗೂ ನೀಡುತ್ತಿದ್ದಾರೆ. ಅಭಿಷೇಕ್ ಅವರು ಸಾಲು ಸಾಲು ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ. ಅಕ್ಟೋಬರ್ 3 ಅವರ ಜನ್ಮದಿನ. ಆದರೆ, ಬರ್ತ್ಡೇನ ಅದ್ದೂರಿಯಾಗಿ ಆಚರಿಸಿಕೊಳ್ಳದೇ ಇರಲು ಅವರು ನಿರ್ಧರಿಸಿದ್ದಾರೆ. ಇದಕ್ಕೆ ಕಾರಣ ಏನು ಎಂಬುದನ್ನು ಅವರು ತಿಳಿಸಿದ್ದಾರೆ.
ಈ ವರ್ಷ ಅಭಿಷೇಕ್ ಅಂಬರೀಷ್ ಅವರು ಅವಿವಾರನ್ನು ಮದುವೆ ಆಗಿದ್ದಾರೆ. ಮದುವೆಯ ಬಳಿಕ ಮೊದಲ ವರ್ಷದ ಜನ್ಮದಿನ. ಈ ಹಿನ್ನೆಲೆಯಲ್ಲಿ ಅದ್ದೂರಿಯಾಗಿ ಬರ್ತ್ಡೇ ಆಚರಿಸಿಕೊಳ್ಳಬೇಕಿತ್ತು. ಆದರೆ, ಅಭಿಷೇಕ್ ಆ ರೀತಿ ಮಾಡುತ್ತಿಲ್ಲ. ಈ ಬಾರಿ ಮಳೆ ಸರಿಯಾಗ ಆಗದ ಕಾರಣ ಬರಗಾಲದ ಪರಿಸ್ಥಿತಿ ನಿರ್ಮಾಣ ಆಗಿದೆ. ಈ ಕಾರಣದಿಂದಲೇ ಅವರು ಬರ್ತ್ಡೇನ ಸರಳವಾಗಿ ಆಚರಿಸಿಕೊಳ್ಳಲು ನಿರ್ಧರಿಸಿದ್ದಾರೆ. ಈ ಬಗ್ಗೆ ಅವರು ಬರೆದುಕೊಂಡಿದ್ದಾರೆ.
‘ಕೆಲವೇ ದಿನಗಳಲ್ಲಿ ನನ್ನ ಹುಟ್ಟುಹಬ್ಬ ಇರುವುದರಿಂದ ಕೆಲವೊಂದು ವಿಷಯಗಳನ್ನು ತಿಳಿಸಲು ಇಚ್ಛಿಸುತ್ತೇನೆ. ಈ ವರ್ಷ ನಮ್ಮ ರಾಜ್ಯದಲ್ಲಿ ಬರಗಾಲ ಉಂಟಾಗಿರುವುದರಿಂದ ಹಾಗೂ ನಮ್ಮ ಕಾವೇರಿಗಾಗಿ ಹಲವಾರು ಜನರು ಹೋರಾಟ ಮಾಡುತ್ತಿರುವುದರಿಂದ ಈ ವರ್ಷ ನಾನು ನನ್ನ ಹುಟ್ಟುಹಬ್ಬವನ್ನ ಸರಳವಾಗಿ ಆಚರಿಸಿಕೊಳ್ಳಲು ಇಚ್ಛಿಸಿದ್ದೇನೆ’ ಎಂದು ಅಭಿಷೇಕ್ ಪತ್ರ ಆರಂಭಿಸಿದ್ದಾರೆ.
‘ಎಲ್ಲಾ ರೆಬೆಲ್ ಅಭಿಮಾನಿಗಳು ನಿಮ್ಮ ಊರುಗಳಲ್ಲಿಯೇ, ನೀವು ಇರುವಲ್ಲಿಯೇ ನನಗೆ ಶುಭಹಾರೈಸಿ ಆಶೀರ್ವದಿಸಿ. ಅಭಿಮಾನಿಗಳು ಪ್ರೀತಿಯಿಂದ ಮನೆ ಹತ್ತಿರ ಬಂದರೆ ಬರಬೇಡಿ ಅನ್ನುವುದು ನಮ್ಮ ಸಂಪ್ರದಾಯವಲ್ಲ. ಆದರೆ, ಬಂದವರು ಯಾವುದೇ ಹಾರ, ಕೇಕ್, ಪಟಾಕಿಗಳನ್ನು ಹಾಗೂ ಉಡುಗೊರೆಗಳನ್ನು ತರದೆ ಬಂದು ಶುಭ ಹಾರೈಸಿ. ಇಂತಿ ನಿಮ್ಮ ಪ್ರೀತಿಯ ಅಭಿಷೇಕ್ ಅಂಬರೀಷ್’ ಎಂದು ಅವರು ಪತ್ರ ಪೂರ್ಣಗೊಳಿಸಿದ್ದಾರೆ.
ಇದನ್ನೂ ಓದಿ: ತಲಕಾವೇರಿಯಲ್ಲಿ ಅಭಿಷೇಕ್ ಅಂಬರೀಷ್-ಅವಿವಾ ದಂಪತಿಯಿಂದ ವಿಶೇಷ ಪೂಜೆ
ಅದ್ದೂರಿಯಾಗಿ ಅಭಿಷೇಕ್ ಬರ್ತ್ಡೇ ಆಚರಿಸಬೇಕು ಎನ್ನುವ ಅಭಿಮಾನಿಗಳ ಆಸೆ ಈಡೇರುತ್ತಿಲ್ಲ. ಕೊನೆಪಕ್ಷ ಮನೆ ಬಳಿ ಬಂದು ವಿಶ್ ಮಾಡಲು ಅವಕಾಶ ಸಿಕ್ಕಿದೆಯಲ್ಲ ಎಂದು ಫ್ಯಾನ್ಸ್ ಸಮಾಧಾನಪಟ್ಟುಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ