ತಲಕಾವೇರಿಯಲ್ಲಿ ಅಭಿಷೇಕ್ ಅಂಬರೀಷ್​-ಅವಿವಾ ದಂಪತಿಯಿಂದ ವಿಶೇಷ ಪೂಜೆ

ತಲಕಾವೇರಿಯಲ್ಲಿ ಅಭಿಷೇಕ್ ಅಂಬರೀಷ್​-ಅವಿವಾ ದಂಪತಿಯಿಂದ ವಿಶೇಷ ಪೂಜೆ

ರಾಜೇಶ್ ದುಗ್ಗುಮನೆ
|

Updated on:Sep 30, 2023 | 12:02 PM

ನಟ ಅಭಿಷೇಕ್ ಅಂಬರೀಷ್ ಹಾಗೂ ಅವಿವಾ ದಂಪತಿ ಮಳೆಗಾಗಿ ಪ್ರಾರ್ಥಿಸಿ ವಿಶೇಷ ಪೂಜೆ ಮಾಡಿದ್ದಾರೆ. ಕೊಡಗು ಜಿಲ್ಲೆಯ ತಲಕಾವೇರಿಗೆ ಈ ದಂಪತಿ ಭೇಟಿ ನೀಡಿದ್ದಾರೆ. ಮಳೆ ಬರಲಿ ಎಂದು ಪ್ರಾರ್ಥಿಸುವುದರ ಜೊತೆಗೆ ಕಾವೇರಿ ವಿವಾದ ಬಗೆಹರಿಯಲೆಂದು ಪ್ರಾರ್ಥನೆ ಸಲ್ಲಿಸಿದ್ದಾರೆ. ರೈತರಿಗೆ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ಅಂಬರೀಷ್ ಅವರು ಹೆಗಲಮೇಲೆ ಹಸಿರು ಟವೆಲ್ ಹಾಕಿದ್ದರು.

ಈ ವರ್ಷ ರಾಜ್ಯದಲ್ಲಿ ಮಳೆಯ ಅಭಾವ ಕಾಡಿದೆ. ಸರಿಯಾದ ಪ್ರಮಾಣದಲ್ಲಿ ಮಳೆ ಬೀಳುತ್ತಿಲ್ಲ. ಇದು ರಾಜ್ಯದ ಜನರ ಚಿಂತೆಗೆ ಕಾರಣ ಆಗಿದೆ. ಬೆಳೆ ಬೆಳೆಯಲು ಸರಿಯಾದ ನೀರು ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಮಳೆ ಆಗದೇ ಇದ್ದಾಗ ಕೆಲವರು ವಿಶೇಷ ಪೂಜೆ ಮಾಡಿಸುತ್ತಾರೆ. ನಟ ಅಭಿಷೇಕ್ ಅಂಬರೀಷ್ (Abhishek Ambareesh) ಹಾಗೂ ಅವಿವಾ ದಂಪತಿ ಮಳೆಗಾಗಿ ಪ್ರಾರ್ಥಿಸಿ ವಿಶೇಷ ಪೂಜೆ ಮಾಡಿದ್ದಾರೆ. ಕೊಡಗು ಜಿಲ್ಲೆಯ ತಲಕಾವೇರಿಗೆ ಈ ದಂಪತಿ ಭೇಟಿ ನೀಡಿದ್ದಾರೆ. ಮಳೆ ಬರಲಿ ಎಂದು ಪ್ರಾರ್ಥಿಸುವುದರ ಜೊತೆಗೆ ಕಾವೇರಿ ವಿವಾದ (Cauvery Dispute) ಬಗೆಹರಿಯಲೆಂದು ಪ್ರಾರ್ಥನೆ ಸಲ್ಲಿಸಿದ್ದಾರೆ. ರೈತರಿಗೆ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ಅಂಬರೀಷ್ ಅವರು ಹೆಗಲಮೇಲೆ ಹಸಿರು ಟವೆಲ್ ಹಾಕಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published on: Sep 30, 2023 11:32 AM