ಹೆಣ್ಣು ಭ್ರೂಣ ಹತ್ಯೆ ವಿರುದ್ಧ ಸಿನಿಮಾ ಸಂದೇಶ: ‘ತಾರಿಣಿ’ ಇದು ಗರ್ಭಿಣಿಯ ಕತೆ

Tarini: ಹೆಣ್ಣು ಭ್ರೂಣ ಹತ್ಯೆಯಂಥಹಾ ಪಿಡುಗಿನ ವಿರುದ್ಧ ಸಂದೇಶ ಹೊಂದಿರುವ ಸಿನಿಮಾ ಒಂದನ್ನು ನಿರ್ಮಾಣ ಮಾಡಲಾಗಿದೆ. ಮಮತಾ ರಾಹುತ್ ನಾಯಕಿಯಾಗಿ ನಟಿಸಿ, ಸಿದ್ದು ಪೂರ್ಣಚಂದ್ರ ನಿರ್ದೇಶನ ಮಾಡಿರುವ 'ತಾರಿಣಿ' ಸಿನಿಮಾದ ಫಸ್ಟ್ ಲುಕ್ ಇತ್ತೀಚೆಗೆ ಬಿಡುಗಡೆ ಆಗಿದೆ.

ಹೆಣ್ಣು ಭ್ರೂಣ ಹತ್ಯೆ ವಿರುದ್ಧ ಸಿನಿಮಾ ಸಂದೇಶ: 'ತಾರಿಣಿ' ಇದು ಗರ್ಭಿಣಿಯ ಕತೆ
Follow us
|

Updated on: Oct 01, 2023 | 10:02 PM

ಹೆಣ್ಣು ಭ್ರೂಣ ಹತ್ಯೆ ಸಾಮಾಜಿಕ ಪಿಡುಗು. ಹೆಣ್ಣು ಭ್ರೂಣ ಹತ್ಯೆ ಕುರಿತಾಗಿ ಸರ್ಕಾರ, ಚಿತ್ರರಂಗದ (Sandalwood) ಹಲವು ತಾರೆಯರು ಸಂದೇಶಗಳನ್ನು ಜಾಗೃತಿಗಳನ್ನು ಮೂಡಿಸಿದ್ದಾರೆ. ಹಾಗಿದ್ದರೂ ಸಹ ಹೆಣ್ಣು ಭ್ರೂಣ ಹತ್ಯೆ ಪೂರ್ಣವಾಗಿ ನಿರ್ನಾಮವಾಗಿಲ್ಲ. ಇದೀಗ ಹೆಣ್ಣು ಭ್ರೂಣ ಹತ್ಯೆಯಂಥಹಾ ಪಿಡುಗಿನ ವಿರುದ್ಧ ಸಂದೇಶ ಹೊಂದಿರುವ ಸಿನಿಮಾ ಒಂದನ್ನು ನಿರ್ಮಾಣ ಮಾಡಲಾಗಿದೆ. ಮಮತಾ ರಾಹುತ್ ನಾಯಕಿಯಾಗಿ ನಟಿಸಿ, ಸಿದ್ದು ಪೂರ್ಣಚಂದ್ರ ನಿರ್ದೇಶನ ಮಾಡಿರುವ ‘ತಾರಿಣಿ’ ಸಿನಿಮಾದ ಫಸ್ಟ್ ಲುಕ್ ಇತ್ತೀಚೆಗೆ ಬಿಡುಗಡೆ ಆಗಿದೆ. ಸಾಹಿತಿ, ಹೋರಾಟಗಾರ್ತಿ ಬಿ.ಟಿ.ಲಲಿತಾ ನಾಯಕ್ ಸೇರಿದಂತೆ ಹಲವು ಗಣ್ಯರು ‘ತಾರಿಣಿ’ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದರು.

ಗರ್ಭಿಣಿ ಹೆಣ್ಣಿನ ಕಥೆಯನ್ನು ಹೊಂದಿರುವ ಚಿತ್ರ “ತಾರಿಣಿ” ಎಂದು ಮಾತು ಆರಂಭಿಸಿದ ನಿರ್ದೇಶಕ ಸಿದ್ದು ಪೂರ್ಣಚಂದ್ರ, ”ಈ ಸಿನಿಮಾದ ವಿಶೇಷತೆಯೆಂದರೆ, ನಾಯಕಿ ಮಮತಾ ರಾಹುತ್, ಗರ್ಭಿಣಿ ಆಗಿರುವಾಗಲೇ ಈ ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಗರ್ಭಿಣಿ ಕುರಿತಾದ ಚಿತ್ರದಲ್ಲಿ ನಿಜವಾದ ಗರ್ಭಿಣಿಯೇ ನಟಿಸಿದ್ದಾರೆ. ಮಗು ಆದ ಬಳಿಕವೂ ನಟಿಸಿದ್ದಾರೆ. ಅವರಿಗೆ ಧನ್ಯವಾದಗಳು. ಹೆಣ್ಣು ಭ್ರೂಣ ಹತ್ಯೆ ಮಾಡಬೇಡಿ ಎಂಬ ಉತ್ತಮ ಸಂದೇಶವಿರುವ ಈ ಚಿತ್ರವನ್ನು ಮಮತಾ ರಾಹುತ್ ಅವರ ಪತಿ ಸುರೇಶ್ ಕೊಟ್ಯಾನ್ ಚಿತ್ರಾಪು ಅವರು ಶ್ರೀಗಜನಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಿಸಿದ್ದಾರೆ. ಸಿನಿಮಾ ತೆರೆಗೆ ಬರಲು ಸಿದ್ದವಾಗಿದೆ ಎಂದರು.

”ನಾನು ಏಳು ತಿಂಗಳ ಗರ್ಭಿಣಿ ಆಗಿದ್ದಾಗ ಈ ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಂಡೆ. ಕೆಲವು ದಿನಗಳ ಚಿತ್ರೀಕರಣ ನಂತರ ನನಗೆ ಅವಧಿಗೂ ಕೆಲವು ದಿನಗಳ ಮುಂಚೆಯೇ ಹೆರಿಗೆ ಆಯಿತು. ಆನಂತರ ಕೂಡ ನಾನು ಚಿತ್ರೀಕರಣದಲ್ಲಿ ಭಾಗಿಯಾದೆ. ನನ್ನ ಮಗು ಕೂಡ ಈ ಚಿತ್ರದಲ್ಲಿ ಅಭಿನಯಿಸಿದೆ. ಇದು ನಮ್ಮ ಮೊದಲ ನಿರ್ಮಾಣದ ಸಿನಿಮಾ ಆಗಿರುವ ಕಾರಣ ಹೆಚ್ಚಿನ ಜವಾಬ್ದಾರಿ ನನ್ನ ಮೇಲಿತ್ತು. ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ. ಸಹಕಾರ ನೀಡಿದ ಇಡೀ ತಂಡಕ್ಕೆ ಧನ್ಯವಾದ ಎಂದರು ನಾಯಕಿ ಮಮತಾ ರಾಹುತ್.

ಇದನ್ನೂ ಓದಿ:ಹಬ್ಬದ ಖುಷಿಯಲ್ಲಿ ಸೀರೆ ಧರಿಸಿ ಮಿಂಚಿದ ಚಂದನವನದ ಸುಂದರಿಯರು

ಇದು ನಮ್ಮ ಮೊದಲ ನಿರ್ಮಾಣದ ಸಿನಿಮಾ. ನಿರ್ದೇಶಕರು ಒಳ್ಳೆಯ ಕತೆ ನೀಡಿದ್ದಾರೆ. ಆ ಕಥೆಗೆ ಕಲಾವಿದರು ಜೀವತುಂಬಿದ್ದಾರೆ. ತಂತ್ರಜ್ಞರು ಸಹ ಸಿನಿಮಾಕ್ಕೆ ಜೀವ ತುಂಭಿದ್ದಾರೆ. ಅವರೆಲ್ಲರಿಗೂ ಧನ್ಯವಾದ. ಸಮಾಜಕ್ಕೆ ಈ ಚಿತ್ರ ಉತ್ತಮ ಸಂದೇಶ ಕೊಡಲಿದೆ ಎಂದು ನಿರ್ಮಾಪಕ ಸುರೇಶ್ ಕೊಟ್ಯಾನ್ ಚಿತ್ರಾಪು ಹೇಳಿದರು. ಚಿತ್ರದ ನಾಯಕ ರೋಹಿತ್ ಸೇರಿದಂತೆ ಅನೇಕ ಕಲಾವಿದರು ಹಾಗೂ ತಂತ್ರಜ್ಞರು ‘ತಾರಿಣಿ’ ಚಿತ್ರದ ಕುರಿತು ಮಾತನಾಡಿದರು.

“ತಾರಿಣಿ” ಪಾತ್ರದಲ್ಲಿ ಮಮತಾ ರಾಹುತ್ ನಟಿಸಿದ್ದು, ನಾಯಕನಾಗಿ ರೋಹಿತ್ ಅಭಿನಯಿಸಿದ್ದಾರೆ. ಭವಾನಿ ಪ್ರಕಾಶ್, ಸುಧಾ ಪ್ರಸನ್ನ, ಡಾ ಸುರೇಶ್ ಚಿತ್ರಾಪು, ಪ್ರಮಿಳಾ ಸುಬ್ರಹ್ಮಣ್ಯಂ, ವಿಜಯಲಕ್ಷ್ಮಿ, ದೀಪಿಕಾಗೌಡ, ಸನ್ನಿ, ತೇಜಸ್ವಿನಿ, ಕವಿತ ಕಂಬಾರ್, ಬೇಬಿ ನಿಶಿತಾ, ಬೇಬಿ ರಿಧಿ, ಪ್ರಿನ್ಸ್ ಜಿತಿನ್ ಕೋಟ್ಯಾನ್, ಮಟಿಲ್ಡಾ ಡಿಸೋಜ, ಅರ್ಚನ ಗಾಯಕ್ವಾಡ್, ಶೀಬಾ ಮೂರ್ತಿ, ಶ್ವೇತಾ, ಚೈತ್ರ, ಮಂಜು ನಂಜನಗೂಡು, ರಘು ಸಮರ್ಥ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಅಕ್ಕಿ ಮೂಟೆ ಹೊತ್ತು ಗಂಗಾವತಿಯಿಂದ ಮಂತ್ರಾಲಯದವರೆಗೆ ಭಕ್ತನ ಪಾದಯಾತ್ರೆ
ಅಕ್ಕಿ ಮೂಟೆ ಹೊತ್ತು ಗಂಗಾವತಿಯಿಂದ ಮಂತ್ರಾಲಯದವರೆಗೆ ಭಕ್ತನ ಪಾದಯಾತ್ರೆ
ಧೋನಿಯ ಪಾದ ಮುಟ್ಟಿ ನಮಸ್ಕರಿಸಿದ ಸಾಕ್ಷಿ: ವಿಡಿಯೋ ನೋಡಿ
ಧೋನಿಯ ಪಾದ ಮುಟ್ಟಿ ನಮಸ್ಕರಿಸಿದ ಸಾಕ್ಷಿ: ವಿಡಿಯೋ ನೋಡಿ
ಎದುರಗಡೆ ಆನೆ​, ಪಕ್ಕದಲ್ಲಿ ಎರಡೆರಡು ಹುಲಿ: ಸಫಾರಿಗರ ಪಾಡು ಏನಾಯ್ತು ನೋಡಿ
ಎದುರಗಡೆ ಆನೆ​, ಪಕ್ಕದಲ್ಲಿ ಎರಡೆರಡು ಹುಲಿ: ಸಫಾರಿಗರ ಪಾಡು ಏನಾಯ್ತು ನೋಡಿ
ವಾರ ಭವಿಷ್ಯ, ಜುಲೈ 08ರಿಂದ 14ರ ತನಕದ ರಾಶಿ ಭವಿಷ್ಯ ಹೀಗಿದೆ
ವಾರ ಭವಿಷ್ಯ, ಜುಲೈ 08ರಿಂದ 14ರ ತನಕದ ರಾಶಿ ಭವಿಷ್ಯ ಹೀಗಿದೆ
ಬಂಧುಗಳ ಮನೆಗೆ ಬರಿಗೈಯಲ್ಲಿ ಏಕೆ ಹೋಗಬಾರದು ಈ ವಿಡಿಯೋ ನೋಡಿ
ಬಂಧುಗಳ ಮನೆಗೆ ಬರಿಗೈಯಲ್ಲಿ ಏಕೆ ಹೋಗಬಾರದು ಈ ವಿಡಿಯೋ ನೋಡಿ
ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿದುಕೊಳ್ಳಲು ಈ ವಿಡಿಯೋ ನೋಡಿ
ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿದುಕೊಳ್ಳಲು ಈ ವಿಡಿಯೋ ನೋಡಿ
ಸುದೀಪ್​ರ ‘ಹುಚ್ಚ’ ಸಿನಿಮಾದಲ್ಲಿ ಗೆಳೆಯನ ಪಾತ್ರ ಕೇಳಿದ್ದರು ದರ್ಶನ್
ಸುದೀಪ್​ರ ‘ಹುಚ್ಚ’ ಸಿನಿಮಾದಲ್ಲಿ ಗೆಳೆಯನ ಪಾತ್ರ ಕೇಳಿದ್ದರು ದರ್ಶನ್
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ