AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾರ್ಟಿ ವೇಳೆ ಸುದೀಪ್ ಕಾಲಮೇಲೆ ಮಲಗಿ ನಿದ್ದೆ ಮಾಡಿದ್ದ ಚಂದನ್ ಕುಮಾರ್

ಸಂದರ್ಶನವೊಂದರಲ್ಲಿ ಮಾತನಾಡಿರುವ ನಟ ಚಂದನ್ ಕುಮಾರ್ ತಮ್ಮ ಪಾರ್ಟಿ ಅನುಭವಗಳ ಕುರಿತು ಆಸಕ್ತಿದಾಯಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಪಾರ್ಟಿ ಮೂನ್‌ನಲ್ಲಿ ಕಿಚ್ಚ ಸುದೀಪ್ ಅವರ ತೊಡೆ ಮೇಲೆ ತಾನು ಮಲಗಿದ್ದೆ ಎಂದು ಅವರು ತಮಾಷೆಯಾಗಿ ಹೇಳಿಕೊಂಡಿದ್ದು, ಈ ವಿಡಿಯೋ ಸದ್ಯ ಎಲ್ಲರ ಗಮನ ಸೆಳೆದಿದೆ.

ಪಾರ್ಟಿ ವೇಳೆ ಸುದೀಪ್ ಕಾಲಮೇಲೆ ಮಲಗಿ ನಿದ್ದೆ ಮಾಡಿದ್ದ ಚಂದನ್ ಕುಮಾರ್
ಸುದೀಪ್​-ಚಂದನ್
ರಾಜೇಶ್ ದುಗ್ಗುಮನೆ
|

Updated on:Nov 17, 2026 | 1:17 PM

Share

ಮುಖ್ಯಾಂಶಗಳು

  • ಪಾರ್ಟಿ ಮಾಡಿದರೆ ನಾಳೆ ಎಂಬ ಚಿಂತೆಯೇ ಇರಲ್ಲ ಎಂದ ಚಂದನ್ ಕುಮಾರ್
  • ಸುದೀಪ್ ಸರ್ ತೊಡೆ ಮೇಲೆ ಮಲಗಿದ್ದಾಗಿ ಅಚ್ಚರಿಯ ಸಂಗತಿ ಬಿಚ್ಚಿಟ್ಟ ನಟ
  • ನನ್ನ ಡ್ರಿಂಕಿಂಗ್ ಕೆಪಾಸಿಟಿ ಕಡಿಮೆ: ಫಿಟ್‌ನೆಸ್ ಬಗ್ಗೆ ಮಾತನಾಡಿದ ನಟ

ಕಿರುತೆರೆ ಹಾಗೂ ಹಿರಿತೆರೆಯಲ್ಲಿ ತಮ್ಮದೇ ಆದ ಗುರುತು ಮೂಡಿಸಿರುವ ನಟ ಚಂದನ್ ಕುಮಾರ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮ್ಮ ವೈಯಕ್ತಿಕ ಜೀವನ ಹಾಗೂ ಪಾರ್ಟಿ ಅನುಭವಗಳ ಬಗ್ಗೆ ಅಚ್ಚರಿಯ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಪಾರ್ಟಿ ಸಮಯದಲ್ಲಿ ತಾವು ವರ್ತಿಸುವ ರೀತಿಯನ್ನು ಅವರು ಮುಕ್ತವಾಗಿ ಹಂಚಿಕೊಂಡಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಿಂದ ಸುದೀಪ್ ಹಾಗೂ ಚಂದನ್ ಅವರ ಬಾಂಧವ್ಯ ಎಂಥದ್ದು ಎಂಬುದು ಕೂಡ ರಿವೀಲ್ ಆಗಿದೆ.

ಪಾರ್ಟಿ ಮೂಡ್ ಬಗ್ಗೆ ಮಾತನಾಡಿದ ಚಂದನ್ ಕುಮಾರ್, ತಾವು ಪಾರ್ಟಿಗಳಲ್ಲಿ ಹೇಗೆ ವಿಭಿನ್ನವಾಗಿ ವರ್ತಿಸುತ್ತೇನೆ ಎಂಬುದನ್ನು ವಿವರಿಸಿದ್ದಾರೆ. ‘ನಾನು ಪಾರ್ಟಿ ಮಾಡಿದರೆ ನಾಳೆ ಎಂಬ ಚಿಂತೆಯೇ ಇರುವುದಿಲ್ಲ. ಅಷ್ಟು ಎಕ್ಸ್‌ಟ್ರೀಮ್ ಆಗಿ ಎಂಜಾಯ್ ಮಾಡುತ್ತೇನೆ. ಬಿಫೋರ್ ಪಾರ್ಟಿ ಮತ್ತು ಆಫ್ಟರ್ ಪಾರ್ಟಿ ನನ್ನಲ್ಲಿ ಸಿಕ್ಕಾಪಟ್ಟೆ ಡಿಫರೆನ್ಸ್ ಇರುತ್ತದೆ. ಮನಸ್ಸಿನಲ್ಲಿರುವುದನ್ನೆಲ್ಲ ಹಾಗೆಯೇ ಮಾತನಾಡಿಬಿಡುತ್ತೇನೆ. ಆ ಸಮಯದಲ್ಲಿ ನಾನು ತುಂಬಾ ಎಕ್ಸ್‌ಟ್ರಾವರ್ಟ್ ಆಗಿಬಿಡುತ್ತೇನೆ’ ಎಂದು ಅವರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ತಮ್ಮ ಮರೆಯಲಾಗದ ಖಾಸಗಿ ಪಾರ್ಟಿ ಘಟನೆಯೊಂದನ್ನು ಸ್ಮರಿಸಿಕೊಂಡ ಚಂದನ್ ಕುಮಾರ್, ‘ನಟ ಕಿಚ್ಚ ಸುದೀಪ್ ಸರ್ ಅವರ ಮನೆಯಲ್ಲಿ ನಡೆದ ಪಾರ್ಟಿ ವೊಂದರಲ್ಲಿ ನಾನೇನು ಮಾಡಿದೆ ಗೊತ್ತಾ? ಆರ್ ಸಿ ಬಿ ತಂಡ ಫೈನಲ್ ಗೆಲ್ಲುತ್ತದೆ ಎಂದು ನನಗೆ ಪಕ್ಕಾ ಗೊತ್ತಾಯಿತು. ನನ್ನ ಕ್ಯಪಾಸಿಟಿ ಕಡಿಮೆ. ಹೀಗಾಗಿ ಒಂದು ಪೆಗ್ ಕುಡಿದ ಬಳಿಕ ಸುದೀಪ್ ಸರ್ ಅವರ ತೊಡೆಯ ಮೇಲೆಯೇ ಮಲಗಿಬಿಟ್ಟಿದ್ದೆ. ಪಾಪ, ಅಲ್ಲಿ ಅಷ್ಟು ಜನ ಇದ್ದರೂ ಸುದೀಪ್ ಸರ್ ನನ್ನನ್ನು ಪ್ರೀತಿಯಿಂದ ಮಲಗಿಸಿಕೊಂಡಿದ್ದರು’ ಎಂದು ನಗುತ್ತಾ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ರದ್ದಾದ ಟಾಸ್ಕ್​​ನಲ್ಲಿ ಗೆದ್ದವರ್ಯಾರು? ಮನೆಗೆ ಸುದೀಪ್ ನೀಡಿದ ಶಿಕ್ಷೆ ಏನು?

ಇದೇ ವೇಳೆ ತಮ್ಮ ಆರೋಗ್ಯ ಹಾಗೂ ಫಿಟ್‌ನೆಸ್ ಬಗ್ಗೆಯೂ ಮಾತನಾಡಿದ ಚಂದನ್, ತಾವೊಬ್ಬ ಫಿಟ್‌ನೆಸ್ ಫ್ರಿಕ್ ಆಗಿರುವುದರಿಂದ ಮದ್ಯ ಸೇವನೆಯ ಸಾಮರ್ಥ್ಯ ತಮಗೆ ಕಡಿಮೆ ಎಂದಿದ್ದಾರೆ. ಪ್ರತಿದಿನ ವರ್ಕೌಟ್ ಮಾಡುವುದರಿಂದ ಕೇವಲ ಒಂದು ಪೆಗ್‌ಗೆ ಅಥವಾ ಒಂದು ಬಾಟಲ್ ಬಿಯರ್‌ಗೆ ತಮಗೆ ನಶೆ ಏರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಕುಡಿಯುವ ಸಾಮರ್ಥ್ಯ ಹೆಚ್ಚಿರುವುದು ದೊಡ್ಡದಲ್ಲ, ಅದು ಆರೋಗ್ಯಕ್ಕೆ ಹಾನಿ ಮಾಡುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 1:15 pm, Tue, 17 November 26

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಬೆಂಗಳೂರಿನಲ್ಲಿ ಆಶಾ ಕಾರ್ಯಕರ್ತೆಯರ ಬೃಹತ್ ಪ್ರತಿಭಟನೆ
ಬೆಂಗಳೂರಿನಲ್ಲಿ ಆಶಾ ಕಾರ್ಯಕರ್ತೆಯರ ಬೃಹತ್ ಪ್ರತಿಭಟನೆ
ಸೌಜನ್ಯ ಪ್ರಕರಣ: ತನಿಖೆಗಾಗಿ ಎಸ್​ಐಟಿಯಿಂದ ಮೆಡಿಕಲ್ ಬೋರ್ಡ್ ರಚನೆ
ಸೌಜನ್ಯ ಪ್ರಕರಣ: ತನಿಖೆಗಾಗಿ ಎಸ್​ಐಟಿಯಿಂದ ಮೆಡಿಕಲ್ ಬೋರ್ಡ್ ರಚನೆ
ದೆಹಲಿಯಲ್ಲಿ ತಮಿಳುನಾಡು ಸಿಎಂ ವಿಜಯ್​ ಜೊತೆ ಸಿಎಂ ಡಿಕೆಶಿ ಚರ್ಚಿಸಿದ್ದೇನು?
ದೆಹಲಿಯಲ್ಲಿ ತಮಿಳುನಾಡು ಸಿಎಂ ವಿಜಯ್​ ಜೊತೆ ಸಿಎಂ ಡಿಕೆಶಿ ಚರ್ಚಿಸಿದ್ದೇನು?
ಬೇಲೂರಿನ ಕೋಗಿಲಮನೆ ಬಳಿ 30ಕ್ಕೂ ಹೆಚ್ಚು ಕಾಡಾನೆಗಳು ಪ್ರತ್ಯಕ್ಷ
ಬೇಲೂರಿನ ಕೋಗಿಲಮನೆ ಬಳಿ 30ಕ್ಕೂ ಹೆಚ್ಚು ಕಾಡಾನೆಗಳು ಪ್ರತ್ಯಕ್ಷ
19 ವರ್ಷದ ಇಬ್ಬರು ವಿದ್ಯಾರ್ಥಿನಿಯರು ರಸ್ತೆ ಅಪಘಾತದಲ್ಲಿ ಬಲಿ
19 ವರ್ಷದ ಇಬ್ಬರು ವಿದ್ಯಾರ್ಥಿನಿಯರು ರಸ್ತೆ ಅಪಘಾತದಲ್ಲಿ ಬಲಿ
ಚಳ್ಳಕೆರೆ ಬಳಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಸಾರಿಗೆ ಬಸ್: 42 ಮಂದಿ ಪಾರು
ಚಳ್ಳಕೆರೆ ಬಳಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಸಾರಿಗೆ ಬಸ್: 42 ಮಂದಿ ಪಾರು
ಸ್ಟಿಂಗ್ ಪ್ರಕರಣ: ಪೊಲೀಸರಿಗೆ ಮೊಬೈಲ್ ನೀಡಲು ಕೃಪಾ ಆಳ್ವ ನಿರಾಕರಣೆ!
ಸ್ಟಿಂಗ್ ಪ್ರಕರಣ: ಪೊಲೀಸರಿಗೆ ಮೊಬೈಲ್ ನೀಡಲು ಕೃಪಾ ಆಳ್ವ ನಿರಾಕರಣೆ!
ಪ್ರಧಾನಿ ಮೋದಿ ಆಡಳಿತದ ಯಶೋಗಾಥೆ, ಯೋಜನೆಗಳ ಅಧ್ಯಯನ
ಪ್ರಧಾನಿ ಮೋದಿ ಆಡಳಿತದ ಯಶೋಗಾಥೆ, ಯೋಜನೆಗಳ ಅಧ್ಯಯನ
ವೀರಾಂಜನೇಯ ವಿಗ್ರಹಕ್ಕೆ ಲೇಪಿಸಿದ ಬೆಣ್ಣೆ 17 ದಿನ ಕಳೆದರೂ ಕರಗಿಲ್ಲ
ವೀರಾಂಜನೇಯ ವಿಗ್ರಹಕ್ಕೆ ಲೇಪಿಸಿದ ಬೆಣ್ಣೆ 17 ದಿನ ಕಳೆದರೂ ಕರಗಿಲ್ಲ
‘ಮಾಡಿರೋದೇ ಒಂದು ಸಿನಿಮಾ, ಗಂಡಸರ ಹಾಗೆ ನಡೆದುಕೋ; ಜಗ್ಗುಗೆ ಮಂಜು ಅವಾಜ್
‘ಮಾಡಿರೋದೇ ಒಂದು ಸಿನಿಮಾ, ಗಂಡಸರ ಹಾಗೆ ನಡೆದುಕೋ; ಜಗ್ಗುಗೆ ಮಂಜು ಅವಾಜ್