ಸ್ಯಾಂಡಲ್ವುಡ್ ನಟ ಚಿರಂಜೀವಿ ಸರ್ಜಾ ಇನ್ನಿಲ್ಲ
ಬೆಂಗಳೂರು: ಸ್ಯಾಂಡಲ್ವುಡ್ ನಟ ಚಿರಂಜೀವಿ ಸರ್ಜಾ(39) ಹೃದಯಾಘಾತದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. 1980ರ ಅಕ್ಟೋಬರ್ 17ರಂದು ಜನಿಸಿದ್ದ ಚಿರಂಜೀವಿ ಸರ್ಜಾ, ಬೆಂಗಳೂರಿನ ಬಾಲ್ಡ್ವಿನ್ ಬಾಲಕರ ಪ್ರೌಢಶಾಲೆಯಲ್ಲಿ ಶಿಕ್ಷಣ ಪಡೆದಿದ್ದರು. ಜಯನಗರದ ವಿಜಯಾ ಕಾಲೇಜಿನಲ್ಲಿ ಪದವಿ ಮಾಡಿದ್ದರು. ಚಿತ್ರರಂಗದಲ್ಲಿ ಚಿರಂಜೀವಿ ಸರ್ಜಾ ಕುಟುಂಬ ಸಕ್ರಿಯವಾಗಿದೆ. ನಟ ಅರ್ಜುನ್ ಸರ್ಜಾ ಸೋದರಳಿಯ: ಚಿರಂಜೀವಿ ಸರ್ಜಾ, ದಕ್ಷಿಣ ಭಾರತದ ಖ್ಯಾತ ನಟ ಅರ್ಜುನ್ ಸರ್ಜಾ ಅವರ ಸೋದರಳಿಯ. 2006ರಿಂದ ಅರ್ಜುನ್ ಸರ್ಜಾ ಜೊತೆ ಸಹಾಯಕ ನಿರ್ದೇಶಕನಾಗಿ ಗುರುತಿಸಿಕೊಂಡಿದ್ರು. 2009ರಲ್ಲಿ ‘ವಾಯುಪುತ್ರ’ […]
ಬೆಂಗಳೂರು: ಸ್ಯಾಂಡಲ್ವುಡ್ ನಟ ಚಿರಂಜೀವಿ ಸರ್ಜಾ(39) ಹೃದಯಾಘಾತದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.
1980ರ ಅಕ್ಟೋಬರ್ 17ರಂದು ಜನಿಸಿದ್ದ ಚಿರಂಜೀವಿ ಸರ್ಜಾ, ಬೆಂಗಳೂರಿನ ಬಾಲ್ಡ್ವಿನ್ ಬಾಲಕರ ಪ್ರೌಢಶಾಲೆಯಲ್ಲಿ ಶಿಕ್ಷಣ ಪಡೆದಿದ್ದರು. ಜಯನಗರದ ವಿಜಯಾ ಕಾಲೇಜಿನಲ್ಲಿ ಪದವಿ ಮಾಡಿದ್ದರು. ಚಿತ್ರರಂಗದಲ್ಲಿ ಚಿರಂಜೀವಿ ಸರ್ಜಾ ಕುಟುಂಬ ಸಕ್ರಿಯವಾಗಿದೆ.
ನಟ ಅರ್ಜುನ್ ಸರ್ಜಾ ಸೋದರಳಿಯ: ಚಿರಂಜೀವಿ ಸರ್ಜಾ, ದಕ್ಷಿಣ ಭಾರತದ ಖ್ಯಾತ ನಟ ಅರ್ಜುನ್ ಸರ್ಜಾ ಅವರ ಸೋದರಳಿಯ. 2006ರಿಂದ ಅರ್ಜುನ್ ಸರ್ಜಾ ಜೊತೆ ಸಹಾಯಕ ನಿರ್ದೇಶಕನಾಗಿ ಗುರುತಿಸಿಕೊಂಡಿದ್ರು. 2009ರಲ್ಲಿ ‘ವಾಯುಪುತ್ರ’ ಮೂಲಕ ಬೆಳ್ಳಿತೆರೆಗೆ ಪ್ರವೇಶ ಮಾಡಿದ್ದರು. ಈವರೆಗೆ 22 ಸಿನಿಮಾಗಳಲ್ಲಿ ಚಿರಂಜೀವಿ ಸರ್ಜಾ ಅಭಿನಯಿಸಿದ್ದಾರೆ. 2017ರ ಅಕ್ಟೋಬರ್ನಲ್ಲಿ ಮೇಘನಾ ರಾಜ್ ಜತೆ ನಿಶ್ಚಿತಾರ್ಥ ವಾಗಿತ್ತು. 2018ರ ಮೇ 2ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.
ವಾಯುಪುತ್ರ, ಗಂಡೆದೆ, ಚಿರು, ದಂಡಂ ದಶಗುಣಂ, ಕೆಂಪೇಗೌಡ, ವರದನಾಯಕ, ವಿಜಿಲ್, ಚಂದ್ರಲೇಖ, ಅಜಿತ್, ರುದ್ರತಾಂಡವ, ಆಟಗಾರ, ರಾಮಲೀಲಾ, ಆಕೆ, ಭರ್ಜರಿ, ಸಂಹಾರ, ಸಿಜರ್, ಅಮ್ಮ ಐ ಲವ್ ಯು, ಶಿವಾರ್ಜುನ ಸೇರಿ ಹಲವು ಸಿನಿಮಾಗಳಲ್ಲಿ ಚಿರಂಜೀವಿ ಸರ್ಜಾ ನಟಿಸಿದ್ದರು.
ಮೃತ ಚಿರಂಜೀವಿ ಸರ್ಜಾಗೂ ಕೊರೊನಾ ಟೆಸ್ಟ್: ಸ್ಯಾಂಡಲ್ವುಡ್ ನಟ ಚಿರಂಜೀವಿ ಸರ್ಜಾ ವಿಧಿವಶ ಹಿನ್ನೆಲೆಯಲ್ಲಿ ಕೊರೊನಾ ಟೆಸ್ಟ್ ಮಾಡಲು ವೈದ್ಯರು ನಿರ್ಧರಿಸಿದ್ದಾರೆ. ಗಂಟಲು ದ್ರವ ತೆಗೆದು ಕೊವಿಡ್ ಟೆಸ್ಟ್ ಮಾಡಲು ಅಪೋಲೊ ಆಸ್ಪತ್ರೆ ವೈದ್ಯರಿಗೆ ಆರೋಗ್ಯಾಧಿಕಾರಿಗಳ ಸೂಚನೆ ನೀಡಿದ್ದಾರೆ.
3 ದಿನದ ಹಿಂದೆ ಬ್ರೇನ್ ಸ್ಟ್ರೋಕ್: 3 ದಿನದ ಹಿಂದೆ ಮನೆಯಲ್ಲಿದ್ದಾಗ ಚಿರಂಜೀವಿ ಸರ್ಜಾಗೆ ಬ್ರೇನ್ ಸ್ಟ್ರೋಕ್ ಆಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ವಾಪಸಾಗಿದ್ದರು. ಇಂದು ಮತ್ತೆ 3 ಬಾರಿ ಫಿಟ್ಸ್ ಕಾಣಿಸಿಕೊಂಡಿತ್ತು. ಹೀಗಾಗಿ ಮಧ್ಯಾಹ್ನ ಅಪೋಲೊ ಆಸ್ಪತ್ರೆಗೆ ಕರೆದೊಯ್ದಿದ್ದರು. ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯೆಯೇ ಚಿರಂಜೀವಿ ಸರ್ಜಾ ಕೊನೆಯುಸಿರೆಳೆದಿದ್ದಾರೆ.
Published On - 4:31 pm, Sun, 7 June 20