ದೇವಿ ಚಾಮುಂಡೇಶ್ವರಿಯ ದರ್ಶನ ಪಡೆದ ‘ಫ್ಯಾಂಟಮ್’ ಸುದೀಪ್, ಅಭಿಮಾನಿಗಳಿಗೆ ಕೈ ಸನ್ನೆ ಮೂಲಕ ಸೈಲೆಂಟ್ ಎಂದ ಆರಾಧ್ಯದೈವ!
ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ನಟ ಕಿಚ್ಚ ಸುದೀಪ್ ನಾಡದೇವಿ ಚಾಮುಂಡೇಶ್ವರಿಯ ದರ್ಶನ ಮಾಡಿದ್ದಾರೆ. ಈ ವೇಳೆ ಸುದೀಪ್ ದೇವಸ್ಥಾನದಲ್ಲಿ ನಿಶ್ಯಬ್ಧ ಕಾಪಾಡುವಂತೆ ತುಟಿ ಮೇಲೆ ಬೆರಳು ಇಟ್ಟು ಅಭಿಮಾನಿಗಳಿಗೆ ಸನ್ನೆ ಮಾಡಿದ್ರು.
ಮೈಸೂರು: ಜಿಲ್ಲೆಯ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ನಟ ಕಿಚ್ಚ ಸುದೀಪ್ ನಾಡದೇವಿ ಚಾಮುಂಡೇಶ್ವರಿಯ ದರ್ಶನ ಮಾಡಿದ್ದಾರೆ. ಈ ವೇಳೆ ವಿಶೇಷ ಪೂಜೆ ಸಲ್ಲಿಸಿದ್ದು ನಟ ಸುದೀಪ್ ಜೊತೆ ನಿರ್ದೇಶಕ ಅನೂಪ್ ಭಂಡಾರಿ ಸಹ ಆಗಮಿಸಿದ್ರು. ಕಿಚ್ಚ ಸುದೀಪ್ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದ ದೃಶ್ಯ ಕಂಡು ಬಂದಿದೆ.
ರಂಗಿತರಂಗ ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ಸದ್ಯ ಈಗ ಫ್ಯಾಂಟಮ್ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ. ಹಾಗೂ ಕಿಚ್ಚ ಸುದೀಪ್ ಅದೇ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ ನಿರ್ದೇಶಕ ಹಾಗೂ ನಟ ಇಬ್ಬರೂ ಚಾಮುಂಡಿಬೆಟ್ಟಕ್ಕೆ ಆಗಮಿಸಿ ನಾಡದೇವಿಯ ಆಶೀರ್ವಾದ ಪಡೆದ್ರು.
ದೇವಾಲಯದಲ್ಲಿ ಪ್ರದಕ್ಷಿಣೆ ಹಾಕುವ ವೇಳೆ ಸುದೀಪ್ ಜೊತೆ ಫೋಟೋ ಕ್ಲಿಕ್ಕಿಸಲು ಕೆಲ ಅಭಿಮಾನಿಗಳು ಮುಗಿಬಿದ್ದಿದ್ದರು. ಈ ವೇಳೆ ಸುದೀಪ್ ದೇವಸ್ಥಾನದಲ್ಲಿ ನಿಶ್ಯಬ್ಧ ಕಾಪಾಡುವಂತೆ ತುಟಿ ಮೇಲೆ ಬೆರಳು ಇಟ್ಟು ಅಭಿಮಾನಿಗಳಿಗೆ ಸನ್ನೆ ಮಾಡಿದ್ರು. ಹಾಗೂ ಅಭಿಮಾನಿಯೊಬ್ಬನಿಗೆ ಸಂಯಮದಿಂದ ವರ್ತಿಸುವಂತೆ ಕಿವಿಮಾತು ಹೇಳಿದ್ರು. ಇದರ ಜೊತೆಗೆ ಮಾಸ್ಕ್ ಧರಿಸದೇ ಫೋಟೋ ತೆಗೆಸಿಕೊಳ್ಳಲು ಬಂದ ಅಭಿಮಾನಿಗೆ ಮತ್ತೊಬ್ಬ ಅಭಿಮಾನಿ ಕ್ಲಾಸ್ ತೆಗೆದುಕೊಂಡ ಘಟನೆ ಸಹ ನಡೀತು.
ಫ್ಯಾಂಟಮ್ ಕಿಚ್ಚ ಎದುರು ಸೊಂಟ ಬಳುಕಿಸಿ.. ಕಿಚ್ಚು ಹಚ್ಚಲು ಬರ್ತಿದ್ದಾರೆ ಬಾಲಿವುಡ್‌ನ ಈ ನಟಿ..!