ಚಾಲೆಂಜಿಂಗ್ ಸ್ಟಾರ್ ದರ್ಶನ್ ಫಾರ್ಮ್ ಹೌಸ್ ಸೇರಿತು ಹೊಸ ‘ಐರಾವತ’!
ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ಕಾರು ಕ್ರೇಜ್ ಎಷ್ಟಿದೆ ಅನ್ನೋದಕ್ಕೆ ಅವರ ಮನೆಯ ಗ್ಯಾರೇಜ್ನಲ್ಲಿರೋ ಐಶಾರಾಮಿ ಕಾರುಗಳೇ ಸಾಕ್ಷಿ. ಆದ್ರೀಗ ದಾಸ ಮತ್ತೊಂದು ಹೊಸ ವಾಹನವನ್ನ ಖರೀದಿ ಮಾಡಿದ್ದಾರೆ. ಆ ವಾಹನವೇರಿ ಒಂದು ಸುತ್ತು ಸುತ್ತಿ ಬಂದಿದ್ದಾರೆ. ದರ್ಶನ್ ತಮ್ಮ ಫಾರ್ಮ್ ಹೌಸ್ನಲ್ಲಿ ಕೆಲಸ ಮಾಡಲು ಹೊಸ ವಾಹನ ಖರೀದಿ ಮಾಡಿದ್ದಾರೆ. ಅದುವೇ ಈ ಟ್ರ್ಯಾಕ್ಟರ್.. ಫಾರ್ಮ್ ಹೌಸ್ ಅಂದ್ಮೇಲೆ, ಕೆಲಸಕ್ಕೇನು ಕಮ್ಮಿ. ಪ್ರತಿ ದಿನಾನೂ ಒಂದಲ್ಲ ಒಂದು ಕೆಲಸ ಇದ್ದೇ ಇರುತ್ತೆ. ಅದ್ರಲ್ಲೂ ದರ್ಶನ್ಗೆ ಬಿಡುವು ಸಿಕ್ಕಿರೋದ್ರಿಂದ […]
ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ಕಾರು ಕ್ರೇಜ್ ಎಷ್ಟಿದೆ ಅನ್ನೋದಕ್ಕೆ ಅವರ ಮನೆಯ ಗ್ಯಾರೇಜ್ನಲ್ಲಿರೋ ಐಶಾರಾಮಿ ಕಾರುಗಳೇ ಸಾಕ್ಷಿ. ಆದ್ರೀಗ ದಾಸ ಮತ್ತೊಂದು ಹೊಸ ವಾಹನವನ್ನ ಖರೀದಿ ಮಾಡಿದ್ದಾರೆ. ಆ ವಾಹನವೇರಿ ಒಂದು ಸುತ್ತು ಸುತ್ತಿ ಬಂದಿದ್ದಾರೆ.
ದರ್ಶನ್ ತಮ್ಮ ಫಾರ್ಮ್ ಹೌಸ್ನಲ್ಲಿ ಕೆಲಸ ಮಾಡಲು ಹೊಸ ವಾಹನ ಖರೀದಿ ಮಾಡಿದ್ದಾರೆ. ಅದುವೇ ಈ ಟ್ರ್ಯಾಕ್ಟರ್.. ಫಾರ್ಮ್ ಹೌಸ್ ಅಂದ್ಮೇಲೆ, ಕೆಲಸಕ್ಕೇನು ಕಮ್ಮಿ. ಪ್ರತಿ ದಿನಾನೂ ಒಂದಲ್ಲ ಒಂದು ಕೆಲಸ ಇದ್ದೇ ಇರುತ್ತೆ. ಅದ್ರಲ್ಲೂ ದರ್ಶನ್ಗೆ ಬಿಡುವು ಸಿಕ್ಕಿರೋದ್ರಿಂದ ಫಾರ್ಮ್ ಹೌಸ್ ಕಡೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಹೀಗಾಗಿ ಹೊಸ ಟ್ರ್ಯಾಕ್ಟರ್ ಖರೀದಿ ಮಾಡಿದ್ದಾರೆ.
ದರ್ಶನ್ ಹೊಸ ಟ್ರ್ಯಾಕ್ಟರ್ ಖರೀದಿಸಿ ಸುಮ್ಮನಾಗಿಲ್ಲ. ಬದಲಿಗೆ ತಾವೇ ಟ್ರ್ಯಾಕ್ಟರ್ ಚಲಾಯಿಸಿಕೊಂಡು ಹೋಗಿ ಡೀಸಲ್ ಹಾಕಿಸಿಕೊಂಡು ಬಂದಿದ್ದಾರೆ. ಈ ಫೋಟೋಗಳೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ದಾಸನ ಹೊಸ ಐರಾವತ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಜೊತೆಗೆ ಮಾಸ್ಕ್ ಹಾಕಿಕೊಳ್ಳುವಂತೆ ಸಲಹೆ ಕೂಡ ನೀಡಿದ್ದಾರೆ.
Published On - 3:45 pm, Wed, 15 July 20