‘ಯಾರನ್ನೂ ಬಲವಂತ ಮಾಡಬಾರದು’; ಚುನಾವಣೆ ಸೋಲಿನ ಬಳಿಕ ಒಗಟಾಗಿ ಮಾತನಾಡಿದ ಉಪೇಂದ್ರ

|

Updated on: May 18, 2023 | 10:19 AM

ಇಷ್ಟು ದಿನ ಉಪೇಂದ್ರ ಅವರು ಸೋಲಿನ ವಿಚಾರದಲ್ಲಿ ಮೌನವಾಗಿದ್ದರು. ಈಗ ಅವರು ಒಗಟಿನ ರೂಪದಲ್ಲಿ ಟ್ವೀಟ್ ಮಾಡಿದ್ದಾರೆ.

‘ಯಾರನ್ನೂ ಬಲವಂತ ಮಾಡಬಾರದು’; ಚುನಾವಣೆ ಸೋಲಿನ ಬಳಿಕ ಒಗಟಾಗಿ ಮಾತನಾಡಿದ ಉಪೇಂದ್ರ
ಉಪೇಂದ್ರ
Follow us on

ನಟ ಉಪೇಂದ್ರ (Upendra) ಅವರು ರಾಜಕೀಯ ಹಾಗೂ ಸಿನಿಮಾ ರಂಗದಲ್ಲಿ ಬ್ಯುಸಿ ಇದ್ದಾರೆ. ಪ್ರಜಾಕೀಯ ಪಕ್ಷ ಸ್ಥಾಪಿಸಿರುವ ಅವರು ಅದರ ಕೆಲಸಗಳಲ್ಲೂ ತೊಡಗಿಕೊಂಡಿದ್ದಾರೆ. ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಪ್ರಜಾಕೀಯ ಪಕ್ಷದ ಸದಸ್ಯರು ಸ್ಪರ್ಧೆ ಮಾಡಿದ್ದರು. ಆದರೆ, ಯಾರೊಬ್ಬರೂ ಗೆಲ್ಲಲು ಸಾಧ್ಯವಾಗಲೇ ಇಲ್ಲ. ಇಷ್ಟು ದಿನ ಉಪೇಂದ್ರ ಅವರು ಸೋಲಿನ ವಿಚಾರದಲ್ಲಿ ಮೌನವಾಗಿದ್ದರು. ಈಗ ಅವರು ಒಗಟಿನ ರೂಪದಲ್ಲಿ ಟ್ವೀಟ್ ಮಾಡಿದ್ದಾರೆ. ಇದರ ಅರ್ಥವೇನು ಎಂಬ ಬಗ್ಗೆ ಅನೇಕರಿಗೆ ಪ್ರಶ್ನೆ ಮೂಡಿದೆ.

ಮಾರ್ಮಿಕವಾಗಿ ಟ್ವೀಟ್ ಮಾಡಿರುವ ಉಪೇಂದ್ರ, ‘ಒಂದು ದೊಡ್ಡ ಕಲ್ಲು ರಸ್ತೆಗೆ ಅಡ್ಡವಾಗಿ ಬಿದ್ದಿದೆ. ಅದನ್ನು ಎತ್ತಲು ಹತ್ತು ಜನ ಬೇಕು. ಅದನ್ನು ನಾವೆಲ್ಲಾ ಸೇರಿ ತೆಗೆಯೋಣ ಎಂದರೆ ‘ನೀವು ಎತ್ತಿ ತೋರಿಸಿ ನಾವು ಜೊತೆ ಸೇರುತ್ತೇವೆ’ ಎನ್ನುತ್ತಿದ್ದಾರೆ. ಏನು ಮಾಡುವುದು? ಜನಸಾಮಾನ್ಯ ಅಲ್ಲ. ಜನ ಅಸಾಮಾನ್ಯರು ತಿಳಿಸಿ’ ಎಂದು ಉಪೇಂದ್ರ ಬರೆದುಕೊಂಡಿದ್ದಾರೆ.

ಮತ್ತೊಂದು ಟ್ವೀಟ್​ನಲ್ಲಿ ‘ಯಾರನ್ನೂ ಬಲವಂತ ಮಾಡಬಾರದು’ ಎಂದು ಉಪೇಂದ್ರ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಅವರು ಪ್ರಜಾಕೀಯ ಹ್ಯಾಶ್​ಟ್ಯಾಗ್ ಹಾಕಿದ್ದಾರೆ. ಈ ಟ್ವೀಟ್ ಬಗ್ಗೆ ಹಲವು ರೀತಿಯಲ್ಲಿ ಚರ್ಚೆ ಆಗುತ್ತಿದೆ. ನಾನಾ ರೀತಿಯಲ್ಲಿ ಇದ್ನು ಅರ್ಥೈಸಲಾಗುತ್ತಿದೆ.

ಇದನ್ನೂ ಓದಿ: ಉಪೇಂದ್ರ, ರಿಷಬ್ ಸೇರಿ ಹಲವು ಸೆಲೆಬ್ರಿಟಿಗಳಿಂದ ಮತದಾನ; ಇಲ್ಲಿದೆ ಫೋಟೋಸ್

ಚುನಾವಣೆಗೂ ಮೊದಲು ಟ್ವೀಟ್ ಮಾಡಿದ್ದ ಉಪೇಂದ್ರ, ‘ನಂಬಿದರೆ ನಂಬಿ ಬಿಟ್ಟರೆ ಬಿಡಿ. ತುಂಬಾ ರಾಜಕಾರಿಣಿಗಳ ಮಕ್ಕಳೇ ಪ್ರಜಾಕಾರಿಣಿಗಳು. ರಾಜಕಾರಿಣಿಗಳ ಮನೆಯಲ್ಲೇ ವೋಟ್ ಡಿವೈಡ್ ಮಾಡಿ, ಪ್ರಜಾಕೀಯಕ್ಕೆ ವೋಟ್ ಹಾಕಿಸಿದ್ದಾರೆ ನಮ್ಮ ಅಸಾಮಾನ್ಯ ಪ್ರಜಾ ಪ್ರಭುಗಳು’ ಎಂದು ಬರೆದುಕೊಂಡಿದ್ದರು. ಆದರೆ, ಪ್ರಜಾಕೀಯ ಒಂದೇ ಒಂದು ಸ್ಥಾನ ಗೆಲ್ಲಲು ಸಾಧ್ಯವಾಗಿಲ್ಲ. ಈ ಬಗ್ಗೆ ಅವರಿಗೆ ಬೇಸರ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ