ಬೆಂಗಳೂರಿನಲ್ಲಿ ಸೆಲ್ಫಿ ವಿಡಿಯೋ ಮಾಡಿ ಸ್ಯಾಂಡಲ್ವುಡ್ ನಟಿ ಆತ್ಮಹತ್ಯೆ
ಬೆಂಗಳೂರು: ಸೆಲ್ಫಿ ವಿಡಿಯೋ ಮಾಡಿ ಸ್ಯಾಂಡಲ್ ವುಡ್ ನಟಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ತಾವರೆಕೆರೆಯಲ್ಲಿ ನಡೆದಿದೆ. ಜಾಹೀರಾತು, ಕಿರುತೆರೆಯಲ್ಲಿ ಹಾಗೂ ಕೆಲ ಸಿನಿಮಾದಲ್ಲಿ ಸಹ ನಟಿಯಾಗಿ ಅಭಿನಯಿಸಿದ್ದ ಚಂದನಾ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯುವಕನ ಮೋಸಕ್ಕೆ ಬಲಿಯಾಗಿ ನಟಿ ಚಂದನಾ ವಿಷ ಸೇವಿಸಿದ್ದಾರೆ. ತಾವರೆಕೆರೆಯ ಕೃಷ್ಣಮೂರ್ತಿ ಲೇಔಟ್ನಲ್ಲಿ 3 ದಿನಗಳ ಹಿಂದೆ ಸೆಲ್ಫಿ ವಿಡಿಯೋ ಮಾಡಿ ಕಣ್ಣೀರಿಟ್ಟು ನಟಿ ಚಂದನಾ ವಿಷ ಕುಡಿದು ಸಾವಿಗೀಡಾಗಿದ್ದಾರೆ. ಮೇ 28 ರಂದು ನಡೆದ ಘಟನೆ ತಡವಾಗಿ ಬೆಳಕಿಗೆ […]
ಬೆಂಗಳೂರು: ಸೆಲ್ಫಿ ವಿಡಿಯೋ ಮಾಡಿ ಸ್ಯಾಂಡಲ್ ವುಡ್ ನಟಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ತಾವರೆಕೆರೆಯಲ್ಲಿ ನಡೆದಿದೆ. ಜಾಹೀರಾತು, ಕಿರುತೆರೆಯಲ್ಲಿ ಹಾಗೂ ಕೆಲ ಸಿನಿಮಾದಲ್ಲಿ ಸಹ ನಟಿಯಾಗಿ ಅಭಿನಯಿಸಿದ್ದ ಚಂದನಾ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಯುವಕನ ಮೋಸಕ್ಕೆ ಬಲಿಯಾಗಿ ನಟಿ ಚಂದನಾ ವಿಷ ಸೇವಿಸಿದ್ದಾರೆ. ತಾವರೆಕೆರೆಯ ಕೃಷ್ಣಮೂರ್ತಿ ಲೇಔಟ್ನಲ್ಲಿ 3 ದಿನಗಳ ಹಿಂದೆ ಸೆಲ್ಫಿ ವಿಡಿಯೋ ಮಾಡಿ ಕಣ್ಣೀರಿಟ್ಟು ನಟಿ ಚಂದನಾ ವಿಷ ಕುಡಿದು ಸಾವಿಗೀಡಾಗಿದ್ದಾರೆ. ಮೇ 28 ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಚಂದನಾ ಹಾಗೂ ಆರೋಪಿ ಪ್ರಿಯಕರ ದಿನೇಶ್ 5 ವರ್ಷಗಳಿಂದ ಪ್ರೀತಿಸುತ್ತಿದ್ರು. ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ದಿನೇಶ್ 5 ಲಕ್ಷ ರೂಪಾಯಿ ಪಡೆದಿದ್ದ. ಅಲ್ಲದೆ, ಚಂದನಾರನ್ನು ನಂಬಿಸಿ ದೈಹಿಕವಾಗಿ ಬಳಸಿಕೊಂಡಿದ್ದಾನೆ. ಬಳಿಕ ಚಂದನಾಳ ಗರ್ಭಪಾತ ಕೂಡ ಮಾಡಿಸಿದ್ದಾನೆ ಎನ್ನಲಾಗಿದೆ.
ಕೊನೆಗೆ ಮದುವೆಯಾಗಲು ನಿರಾಕರಿಸಿ ಮಾನಸಿಕ ಹಿಂಸೆ ನೀಡಿದ್ದಾನೆ. ಈ ಹಿನ್ನೆಲೆಯಲ್ಲಿ ಸೆಲ್ಫಿ ವಿಡಿಯೋ ಮಾಡಿ ಚಂದನಾ ವಿಷ ಸೇವಿಸಿದ್ದಾರೆ. ಅಸ್ವಸ್ಥ ಚಂದನಾರನ್ನು ಪ್ರಿಯಕರನೇ ಆಸ್ಪತ್ರೆಗೆ ದಾಖಲಿಸಿದ್ದಾನೆ. ಚಂದನಾ ಮೃತಪಟ್ಟ ವಿಷಯ ತಿಳಿಯುತ್ತಿದ್ದಂತೆ ದಿನೇಶ್ ನಾಪತ್ತೆಯಾಗಿದ್ದಾನೆ.
ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಿಯಕರ ದಿನೇಶ್ ವಿರುದ್ಧ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾದ ದಿನೇಶ್ಗಾಗಿ ಪೊಲೀಸರ ಹುಡುಕಾಟ ನಡೆಸುತ್ತಿದ್ದಾರೆ.
Published On - 3:10 pm, Mon, 1 June 20