ಬೆಂಗಳೂರು: ಸೆಲ್ಫಿ ವಿಡಿಯೋ ಮಾಡಿಕೊಂಡು ಸಹನಟಿ ಚಂದನಾ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ದಿನೇಶ್ನನ್ನು ಪೊಲೀಸರು ಬಂಧಿಸಿದ್ದಾರೆ. ತಾವರೆಕೆರೆಯ ಕೃಷ್ಣಮೂರ್ತಿ ಲೇಔಟ್‌ನಲ್ಲಿ ಮೇ 28ರಂದು ಸಹನಟಿ ಚಂದನಾ(29) ಸೆಲ್ಫಿ ವಿಡಿಯೋ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಸೆಲ್ಫಿ ವಿಡಿಯೋ ಮಾಡಿ ಸ್ಯಾಂಡಲ್ವುಡ್ ನಟಿ ಆತ್ಮಹತ್ಯೆ
ಆರೋಪಿ ದಿನೇಶ್ನೊಂದಿಗೆ ಚಂದನಾ 5 ವರ್ಷಗಳಿಂದ ಪ್ರೀತಿಯಲ್ಲಿದ್ದರು. ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ 5 ಲಕ್ಷ ಪಡೆದಿದ್ದ. ಹಾಗೂ ದೈಹಿಕವಾಗಿ ಆಕೆಯನ್ನ ಬಳಸಿಕೊಂಡಿದ್ದ. ಇಷ್ಟೆಲ್ಲಾ ಆದ ಮೇಲೆ ಮದುವೆಯಾಗಲು ನಿರಾಕರಿಸಿದ್ದಾನೆ. ಪ್ರಿಯಕರ ದಿನೇಶ್ ತನಗೆ ಮೊಸ ಮಾಡಿರುವುದಾಗಿ ಚಂದನಾ ಸೆಲ್ಫಿ ವಿಡಿಯೋದಲ್ಲಿ ಆರೋಪಿಸಿದ್ದಳು. ಸಹನಟಿಯ ಸಾವಿನ ನಂತರ ದಿನೇಶ್ ನಾಪತ್ತೆಯಾಗಿದ್ದ. ಸದ್ಯ ಸದ್ದುಗುಂಟೆ ಪಾಳ್ಯ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.
Published On - 8:29 am, Sun, 7 June 20