ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ಪೂನಂ ಕೊರಳಿಗೆ ಬಂತು ಮಾಂಗಲ್ಯ ಸೂತ್ರ

ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ಪೂನಂ ಕೊರಳಿಗೆ ಬಂತು ಮಾಂಗಲ್ಯ ಸೂತ್ರ

ಯುವಕರ ಕನಸಿನ ಕನ್ಯೆ, ನಟಿ-ರೂಪದರ್ಶಿ ಪೂನಂ ಪಾಂಡೆ ಚಲನಚಿತ್ರ ನಿರ್ದೇಶಕ ಸ್ಯಾಮ್ ಬಾಂಬೆ ಅವರನ್ನು ವಿವಾಹವಾಗಿದ್ದಾರೆ.

ಸ್ವತಃ ಈ ವಿಚಾರವನ್ನು ಪೂನಂ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಮದುವೆಯ ಕೆಲವು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಜೊತೆಗೆ ನಿಮ್ಮೊಂದಿಗೆ ಏಳು ಜನ್ಮವನ್ನು ಎದುರು ನೋಡುತ್ತಿದ್ದೇನೆ ಎಂದು ಪೂನಂ, ಇನಿಯ ಸ್ಯಾಮ್ ಬಗ್ಗೆ ಬರೆದುಕೊಂಡಿದ್ದಾರೆ.

ಸ್ಯಾಮ್ ಬಾಂಬೆ ಸಹ ಸಾಮಾಜಿಕ ಜಾಲತಾಣದಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದು, ನಿನ್ನೊಂದಿಗೆ ನನ್ನ ಜೀವನ ಶಾಶ್ವತವಾಗಿ ಪ್ರಾರಂಭವಾಗಿದೆ ಎಂಬ ಶೀರ್ಷಿಕೆ ನೀಡಿದ್ದಾರೆ. ಈ ವರ್ಷದ ಜುಲೈನಲ್ಲಿ ಇವರಿಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ಇದನ್ನೂ ಓದಿ: ಪಡ್ಡೆ ಹುಡುಗರ ಕನಸಿನ ಕನ್ಯೆ ಪೂನಂ ಪಾಂಡೆ ಕೊಟ್ಟ ಶಾಕಿಂಗ್ ನ್ಯೂಸ್! ಏನದು?

https://www.instagram.com/p/CE9aM0hpgv_/?utm_source=ig_web_button_share_sheet

Click on your DTH Provider to Add TV9 Kannada