ಟಾಲಿವುಡ್‌ ದಿಗ್ಗಜ ನಟರ ಕುಟುಂಬದಲ್ಲಿ ಸಂಭ್ರಮ, ನೆರವೇರಿತು ನಿಹಾರಿಕಾಳ ಎಂಗೇಜ್‌ಮೆಂಟ್‌

ಹೈದರಾಬಾದ್: ಕೊರೊನಾ ವೈರಸ್‌ ಹಾವಳಿಯಿಂದಾಗಿ ಚಿತ್ರಮಂದಿರಗಳೆಲ್ಲಾ ಬಂದ್ ಆಗಿವೆ. ಸಿನಿಮಾ ಶೂಟಿಂಗ್‌ಗಳು ಕೂಡ ಸ್ಥಗಿತಗೊಂಡಿವೆ. ಟಾಲಿವುಡ್‌ ಸಿನಿಮಾ ಕಲಾವಿದರು ಈ ಬಿಡುವಿನ ಅವಧಿಯಲ್ಲಿ ಗ್ರೀನ್‌ ಚಾಲೆಂಜ್‌.. ಕೊರೊನಾ ಜಾಗೃತಿ, ಇನ್ನಿತರ ಕಾರ್ಯಗಳಲ್ಲಿ ತೊಡಗಿದ್ದಾರೆ. ಈಗ ಟಾಲಿವುಡ್‌ ದಿಗ್ಗಜ ನಟರ ಕುಟುಂಬದಲ್ಲಿ ಸಡಗರ ಸಂಭ್ರಮ ಮನೆ ಮಾಡಿದೆ. ಅದ್ಧೂರಿ ವೇದಿಕೆ.. ಸಡಗರ.. ಸಂಭ್ರಮ.. ಜಗಮಗಿಸುವ ಬೆಳಕಿನ ಚಿತ್ತಾರ… ಎಲ್ಲರ ಮೊಗದಲ್ಲೂ ಸಂತಸ.. ಸಡಗರ.. ಟಾಲಿವುಡ್‌ನ ಸ್ಟೈಲಿಶ್ ಸ್ಟಾರ್‌ ಅಲ್ಲು ಅರ್ಜುನ್‌.. ಮೆಗಾ ಸ್ಟಾರ್ ಚಿರಂಜೀವ್‌ ಪುತ್ರ ರಾಮ್‌ಚರಣ್ ದಂಪತಿ.. […]

ಟಾಲಿವುಡ್‌ ದಿಗ್ಗಜ ನಟರ ಕುಟುಂಬದಲ್ಲಿ ಸಂಭ್ರಮ, ನೆರವೇರಿತು ನಿಹಾರಿಕಾಳ ಎಂಗೇಜ್‌ಮೆಂಟ್‌
Follow us
ಆಯೇಷಾ ಬಾನು
|

Updated on:Aug 14, 2020 | 8:56 AM

ಹೈದರಾಬಾದ್: ಕೊರೊನಾ ವೈರಸ್‌ ಹಾವಳಿಯಿಂದಾಗಿ ಚಿತ್ರಮಂದಿರಗಳೆಲ್ಲಾ ಬಂದ್ ಆಗಿವೆ. ಸಿನಿಮಾ ಶೂಟಿಂಗ್‌ಗಳು ಕೂಡ ಸ್ಥಗಿತಗೊಂಡಿವೆ. ಟಾಲಿವುಡ್‌ ಸಿನಿಮಾ ಕಲಾವಿದರು ಈ ಬಿಡುವಿನ ಅವಧಿಯಲ್ಲಿ ಗ್ರೀನ್‌ ಚಾಲೆಂಜ್‌.. ಕೊರೊನಾ ಜಾಗೃತಿ, ಇನ್ನಿತರ ಕಾರ್ಯಗಳಲ್ಲಿ ತೊಡಗಿದ್ದಾರೆ. ಈಗ ಟಾಲಿವುಡ್‌ ದಿಗ್ಗಜ ನಟರ ಕುಟುಂಬದಲ್ಲಿ ಸಡಗರ ಸಂಭ್ರಮ ಮನೆ ಮಾಡಿದೆ.

ಅದ್ಧೂರಿ ವೇದಿಕೆ.. ಸಡಗರ.. ಸಂಭ್ರಮ.. ಜಗಮಗಿಸುವ ಬೆಳಕಿನ ಚಿತ್ತಾರ… ಎಲ್ಲರ ಮೊಗದಲ್ಲೂ ಸಂತಸ.. ಸಡಗರ..

ಟಾಲಿವುಡ್‌ನ ಸ್ಟೈಲಿಶ್ ಸ್ಟಾರ್‌ ಅಲ್ಲು ಅರ್ಜುನ್‌.. ಮೆಗಾ ಸ್ಟಾರ್ ಚಿರಂಜೀವ್‌ ಪುತ್ರ ರಾಮ್‌ಚರಣ್ ದಂಪತಿ.. ನಟ ಸಾಯಿಧರಮ್‌ ತೇಜ ಸೇರಿದಂತೆ ಅನೇಕ ಕಲಾವಿದರ ಬಳಗ ಸಂಭ್ರಮದಿಂದ ಓಡಾಡಿಕೊಂಡಿದ್ದಾರೆ. ಮೆಗಾಸ್ಟಾರ್ ಜಿರಂಜೀವಿ ಮೊಗದಲ್ಲಿ ಮಂದಹಾಸ ಎದ್ದುಕಾಣ್ತಿತ್ತು. ಅಷ್ಟಕ್ಕೂ ಈ ಸಂಭ್ರಮ ಸಡಗರಕ್ಕೆ ಕಾರಣವೇನು ಅಂದುಕೊಂಡ್ರಾ. ಅದು ಬೇರೇನೂ ಅಲ್ಲ. ಮೆಗಾ ಸ್ಟಾರ್‌ ಕುಟುಂಬದ ಎಂಗೇಜ್‌ ಮೆಂಟ್‌ ಕಾರ್ಯಕ್ರಮ. ಹೌದು ಹೈದರಾಬಾದ್‌ನಲ್ಲಿ ಚಿರಂಜೀವಿ ಸಹೋದರ ನಾಗಬಾಬು ಪುತ್ರಿಯ ಎಂಗೇಜ್‌ಮೆಂಟ್‌ ಸಮಾರಂಭ.

ಚಿರಂಜೀವಿ ಸಹೋದರ ನಾಗಬಾಬು ಸಹ ಟಾಲಿವುಡ್‌ನ ಫಿಲ್ಮ್ ಚೇಂಬರ್‌ನಲ್ಲಿ ಪ್ರಮುಖ ಪದಾಧಿಕಾರಿಯಾಗಿ ಹಾಗೂ ಅನೇಕ ಚಿತ್ರಗಳಲ್ಲೂ ಪ್ರಮುಖ ಪಾತ್ರಗಳಲ್ಲಿ ನಟಿಸಿದವರು. ನಾಗಬಾಬು ಪುತ್ರಿ ನಿಹಾರಿಕಾ ಕೂಡ ಹಲವು ಸಿನಿಮಾ, ಸೀರಿಯಲ್‌ಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ. ಆಂಧ್ರಪ್ರದೇಶದ ಗುಂಟೂರು ಜಿಲ್ಲಾ ಪೊಲೀಸ್ ಅಧಿಕಾರಿ ಪುತ್ರ ಚೈತನ್ಯ ಜತೆ ನಿಶ್ಚಿತಾರ್ಥ ನೆರವೇರಿತು.

ಕೊರೊನಾ ಹಿನ್ನೆಲೆಯಲ್ಲಿ ಕುಟುಂಬ ಸದಸ್ಯರು ಹಾಗೂ ಆಪ್ತರು ಮಾತ್ರ ಪಾಲ್ಗೊಂಡಿದ್ರು. ಆದ್ರೆ ಟಾಲಿವುಡ್‌ನ ಮೆಗಾ ಫ್ಯಾಮಿಲಿಯಲ್ಲಿ ಬಹಳ ದಿನಗಳ ಬಳಿಕ ಇಂಥಾದ್ದೊಂದು ಅದ್ದೂರಿ ಕಾರ್ಯಕ್ರಮ ಜರುಗಿದ್ದು, ಮೆಗಾಸ್ಟಾರ್‌ ಚಿರಂಜೀವಿ ಹಾಗೂ ಅವ್ರ ಸಹೋದರ ನಾಗಬಾಬುರ ಸಂತಸಕ್ಕೆ ಪಾರವೇ ಇರಲಿಲ್ಲ. ಎಲ್ಲರೂ ಕೂಡಿ ನಿಹಾರಿಕಾಳ ಎಂಗೇಜ್‌ಮೆಂಟ್‌ ಕಾರ್ಯಕ್ರಮವನ್ನ ಸಂಭ್ರಮದಿಂದಲೇ ನೆರವೇರಿಸಿದ್ದು, ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ.

Published On - 7:38 am, Fri, 14 August 20

ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ