AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಥಮ ಬಾರಿಗೆ ATT ನಲ್ಲಿ ದಿ ಪೈಂಟರ್ ಚಿತ್ರ ಬಿಡುಗಡೆ

Covid ಸಂದರ್ಭದಲ್ಲಿ ಹೊಸ ಕನ್ನಡ ಚಿತ್ರ ದಿ ಪೈಂಟರ್​ಗೆ ಬಿಡುಗಡೆಯ ಸಂಭ್ರಮ. ಇದೆ ಆಗಸ್ಟ್ 14ರಂದು ರಾತ್ರಿ 9 ಘಂಟೆಗೆ shreyaset.com ATT (Any Time Theater) ನಲ್ಲಿ ಬಿಡುಗಡೆ ಗೊಳ್ಳುತ್ತಿರುವ ಚಿತ್ರ ದಿ ಪೈಂಟರ್. ಇದು World Digital Premier. ಏಕ ಕಾಲಕ್ಕೆ ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಲಿದೆ. ಕೆಲವು ದಿನಗಳ ಹಿಂದೆ ಉಗ್ರಂ ಖ್ಯಾತಿಯ ರೋರಿಂಗ್ ಸ್ಟಾರ್  ಶ್ರೀಮುರಳಿ ಈ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ್ದು, ಸಾಮಾಜಿಕ ತಾಣದಲ್ಲಿ ಟ್ರೈಲರ್ ತುಂಬಾ ವೈರಲ್ […]

ಪ್ರಥಮ ಬಾರಿಗೆ ATT ನಲ್ಲಿ ದಿ ಪೈಂಟರ್ ಚಿತ್ರ ಬಿಡುಗಡೆ
ಸಾಧು ಶ್ರೀನಾಥ್​
|

Updated on: Aug 14, 2020 | 1:30 PM

Share

Covid ಸಂದರ್ಭದಲ್ಲಿ ಹೊಸ ಕನ್ನಡ ಚಿತ್ರ ದಿ ಪೈಂಟರ್​ಗೆ ಬಿಡುಗಡೆಯ ಸಂಭ್ರಮ. ಇದೆ ಆಗಸ್ಟ್ 14ರಂದು ರಾತ್ರಿ 9 ಘಂಟೆಗೆ shreyaset.com ATT (Any Time Theater) ನಲ್ಲಿ ಬಿಡುಗಡೆ ಗೊಳ್ಳುತ್ತಿರುವ ಚಿತ್ರ ದಿ ಪೈಂಟರ್. ಇದು World Digital Premier. ಏಕ ಕಾಲಕ್ಕೆ ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಲಿದೆ.

ಕೆಲವು ದಿನಗಳ ಹಿಂದೆ ಉಗ್ರಂ ಖ್ಯಾತಿಯ ರೋರಿಂಗ್ ಸ್ಟಾರ್  ಶ್ರೀಮುರಳಿ ಈ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ್ದು, ಸಾಮಾಜಿಕ ತಾಣದಲ್ಲಿ ಟ್ರೈಲರ್ ತುಂಬಾ ವೈರಲ್ ಆಗಿ ಸದ್ದು ಮಾಡುತ್ತಿದೆ. ATT  ಮೂಲಕ ಬಿಡುಗಡೆ ಆಗುತ್ತಿರುವ ಏಕೈಕ ಕನ್ನಡ ಚಲನಚಿತ್ರ ದಿ ಪೈಂಟರ್ ಅನ್ನು ತಮ್ಮ ಮನೆಯಲ್ಲಿ ಕೂತು ವೀಕ್ಷಕರು 50 ರೂಪಾಯಿ ಕೊಟ್ಟು ವೀಕ್ಷಿಸಬಹುದು ಎಂದು ನಿರ್ದೇಶಕ ವೆಂಕಟ್ ಭಾರದ್ವಾಜ್ ಹೇಳಿದ್ದಾರೆ.

ಈ ಚಿತ್ರವು ಸಂಪೂರ್ಣವಾಗಿ Lockdown ನಲ್ಲಿ ಮಾಡಿದ್ದ ಕಾರಣ, ಸಾಮಾಜಿಕ ತಾಣದಲ್ಲಿ ಚಿತ್ರಕ್ಕೆ ಒಳ್ಳೆ ಅಭಿಪ್ರಾಯ ವ್ಯಕ್ತವಾಗುತ್ತಿದೆಯೆಂದು ವೆಂಕಟ್ ಭಾರದ್ವಾಜ ತಮ್ಮ ಅಭಿಪ್ರಾಯ ಹಂಚಿಕೊಂಡರು. ಚಿತ್ರಕ್ಕೆ ಕೇವಲ 50 ರೂಪಾಯಿ ನೀಡುವುದರಿಂದ ಅದರಲ್ಲಿ ಬರುವ ಆದಾಯದಲ್ಲಿ ಶೇಕಡಾ 20 ರಷ್ಟು ಹಣವನ್ನು ಸಂಕಷ್ಟದಲ್ಲಿರುವ ಕನ್ನಡ ಚಲನಚಿತ್ರ ಕಾರ್ಮಿಕರಿಗೆ ಕೊಡುವುದಾಗಿ ಚಿತ್ರ ತಂಡ ಹೇಳಿಕೊಂಡಿದೆ.

ತಾವುಗಳೆಲ್ಲ ಸ್ವಾತಂತ್ರ್ಯ ದಿನ ಪೂರ್ವದಂದು ಮನೆಯಲ್ಲಿ ಕೂತು ಈ ಒಳ್ಳೆಯ ಸಿನಿಮಾ ನೋಡಿ ಎಂಬುದು ವೆಂಕಟ್ ಭಾರದ್ವಾಜ್  ಆಶಯ. ದಿ ಪೈಂಟರ್ ಚಿತ್ರಕ್ಕಾಗಿ ಸುಮಾರು 40ಕ್ಕು ಹೆಚ್ಚು ನಟರು ಹಾಗೂ ತಂತ್ರಜ್ಞರು ಶ್ರಮಿಸಿದ್ದಾರೆ.

ಚಿತ್ರಕ್ಕೆ ಚಂದನ್ ಪಿ  ಸಂಕಲನ, ಲವ್ ಪ್ರಾಣ್ ಮೆಹ್ತಾ ರವರ ಸಂಗೀತವಿದೆ. ಡಾ.ರಾಜ್ ಕಮಲ್ ಬಂಡವಾಳ ಹೂಡಿದ್ದು ಕನ್ನಡಿಗರ ಆಶೀರ್ವಾದಕ್ಕಾಗಿ ಕಾಯುತ್ತಿದ್ದಾರೆ.

ಚಿತ್ರ ನೋಡುವುದು ಹೇಗೆ: ಹಿಂದಿ ಬಲ್ಲವರು ಹಾಗೂ ಉತ್ತರ ಭಾರತದ ವಾಸಿಗಳು ಕೂಡ ಈ ಚಿತ್ರವನ್ನು ಸವಿಯಬಹುದಾಗಿದೆ. ಈ ಚಿತ್ರವನ್ನು shreyaset.com google ಸ್ಟೋರ್ ನಲ್ಲಿ ಡೌನ್​ಲೋಡ್​ ಮಾಡಿ 50 ರೂ ಹಣ ಪಾವತಿ ಮಾಡಿ ನೋಡಬಹುದು. ಈ ಚಿತ್ರದ ಲೈಸೆನ್ಸ್ 48 ಘಂಟೆಗಳ ಕಾಲ ಚಾಲ್ತಿಯಲ್ಲಿರುತ್ತದೆ. ಯಾವ ಸಂದರ್ಭದಲ್ಲಿ ಬೇಕಾದರೂ ಈ ಚಿತ್ರವನ್ನು  (Mobile, Tv, Computer) ನಲ್ಲಿ ನೋಡಬಹುದು.

ತಾರಾಗಣದಲ್ಲಿ ವೆಂಕಟ್ ಭಾರದ್ವಾಜ್, ಡಾ.ರಾಜ್ ಕಮಲ್, ಶಿನವ್, ವೆಂಕಟ್ ಶಾಸ್ತ್ರೀ, ಶಮೀಕ್, ಕಬೀರ್, ಉಮಾ, ಮಧುರ, ಶಮಾ, ಮಣಿಮಾರನ್, ಹಾಗು ಇತರರು ಇದ್ದಾರೆ.