ಖ್ಯಾತ ನಟಿ ಪ್ರಣಿತಾ ಸುಭಾಷ್ (Pranitha Subhash) ಅವರು ಗುಡ್ ನ್ಯೂಸ್ ನೀಡಿದ್ದಾರೆ. ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಅವರು ಇತ್ತೀಚೆಗೆ ಪ್ರೆಗ್ನೆಂಟ್ ಆಗಿರುವ ವಿಚಾರ ಹೇಳಿಕೊಂಡಿದ್ದರು. ಈಗ ಅವರ ಮನೆಗೆ ಹೆಣ್ಣು ಮಗುವಿನ ಆಗಮನ ಆಗಿದೆ. ಈ ವಿಚಾರವನ್ನು ಪ್ರಣಿತಾ ಅವರು ಸೋಶಿಯಲ್ ಮೀಡಿಯಾದಲ್ಲಿ ಅಧಿಕೃತ ಮಾಡಿದ್ದಾರೆ. ಅಲ್ಲದೆ, ಮಗುವಿನ ಜತೆ ಇರುವ ಮುದ್ದಾದ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ. ತಾಯಿ-ಮಗಳು ಇಬ್ಬರೂ ಆರೋಗ್ಯವಾಗಿದ್ದಾರೆ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯಗಳು ಬರುತ್ತಿವೆ.
‘ನನ್ನ ತಾಯಿ ಸ್ತ್ರೀರೋಗ ತಜ್ಞೆ. ಹೀಗಾಗಿ, ಈ ವಿಚಾರದಲ್ಲಿ ನಾನು ಬಹಳ ಅದೃಷ್ಟವಂತೆ. ಹಾಗಾಗಿ ನನ್ನ ಡೆಲಿವರಿ ಯಾವುದೇ ಒತ್ತಡವಿಲ್ಲದೆ ಸರಾಗವಾಗಿ ಆಯಿತು. ಆದರೆ ನನ್ನ ತಾಯಿ ಪಾಲಿಗೆ ಇದು ಬಹಳ ಕಠಿಣ ಹಾಗೂ ಭಾವನಾತ್ಮಕ ಕ್ಷಣವಾಗಿತ್ತು. ನನ್ನ ಕಠಿಣ ಕ್ಷಣದಲ್ಲಿ ಸಾಥ್ ನೀಡಿದ ಪ್ರತಿಯೊಬ್ಬ ವೈದ್ಯರಿಗೂ ಧನ್ಯವಾದಗಳು’ ಎಂದು ಪ್ರಣಿತಾ ಬರೆದುಕೊಂಡಿದ್ದಾರೆ. ಅವರು ಹಂಚಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
The last few days have been surreal. Ever since our baby girl arrived.. ?❤️ pic.twitter.com/kKWsTU8gqW
— Pranitha Subhash (@pranitasubhash) June 10, 2022
2021ರ ಮೇ ತಿಂಗಳಲ್ಲಿ ಉದ್ಯಮಿ ನಿತಿನ್ ರಾಜು ಜೊತೆ ಪ್ರಣಿತಾ ಹಸೆಮಣೆ ಏರಿದರು. ಕೊವಿಡ್ ಮುಂಜಾಗ್ರತೆ ಕ್ರಮವಾಗಿ ಕೇವಲ ಆಪ್ತರ ಸಮ್ಮುಖದಲ್ಲಿ ಅವರ ಮದುವೆ ಸಮಾರಂಭ ನಡೆದಿತ್ತು. ಅವರದ್ದು ಲವ್ ಕಮ್ ಅರೇಂಜ್ ಮ್ಯಾರೇಜ್. 2010ರಿಂದಲೂ ಪ್ರಣಿತಾ ಸುಭಾಷ್ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.
ಕನ್ನಡದ ‘ಪೊರ್ಕಿ’ ಸಿನಿಮಾ ಮೂಲಕ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟರು. ಆ ಸಿನಿಮಾದಲ್ಲಿ ಅವರಿಗೆ ಭರ್ಜರಿ ಖ್ಯಾತಿ ಸಿಕ್ಕಿತು. ಅನೇಕ ಸ್ಟಾರ್ ಹೀರೋಗಳ ಜೊತೆಗೆ ಅವರು ತೆರೆ ಹಂಚಿಕೊಂಡಿದ್ದಾರೆ. ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು, ಹಿಂದಿ ಸಿನಿಮಾಗಳಲ್ಲೂ ಪ್ರಣಿತಾ ಸುಭಾಷ್ ನಟಿಸಿದ್ದಾರೆ. ಆ ಮೂಲಕ ಅವರು ದೇಶಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:19 pm, Fri, 10 June 22