
ಉದಯಪುರದ ಟೈಲರ್ ಕನ್ಹಯ್ಯ ಲಾಲ್ (Kanhaiya Lal) ಹತ್ಯೆ ಖಂಡಿಸಿ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಹಾಡಹಗಲೇ ಇಂಥ ಹೇಯ ಕೃತ್ಯ ನಡೆದಿರುವುದಕ್ಕೆ ಹಲವು ಸೆಲೆಬ್ರಿಟಿಗಳು ಕೂಡ ಅಸಮಾಧಾನ ಹೊರಹಾಕಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ನಟ-ನಟಿಯರು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಬಾಲಿವುಡ್ ನಟ ಅನುಪಮ್ ಖೇರ್ (Anupam Kher), ಸ್ಯಾಂಡಲ್ವುಡ್ ನಟಿ ಪ್ರಣಿತಾ ಸುಭಾಷ್ ಅವರು ಕೂಡ ಈ ಕುರಿತು ಪೋಸ್ಟ್ ಮಾಡಿದ್ದಾರೆ. ‘ಹಿಂದೂಗಳ ಜೀವ ಮುಖ್ಯ’ ಎಂದು ಪ್ರಣಿತಾ ಅವರು ಫಲಕ ಹಿಡಿದು ನಿಂತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ನೆಟ್ಟಿಗರು ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಕನ್ಹಯ್ಯ ಲಾಲ್ ಹತ್ಯೆಯಿಂದಾಗಿ ಮನಸು ವಿಚಲಿತವಾಗಿದೆ ಎಂದು ಪ್ರಣಿತಾ ಸುಭಾಷ್ (Pranitha Subhash) ಹೇಳಿದ್ದಾರೆ. ಸದ್ಯ ಅವರ ಸೋಶಿಯಲ್ ಮೀಡಿಯಾ ಪೋಸ್ಟ್ ವೈರಲ್ ಆಗುತ್ತಿದೆ.
‘ಉದಯಪುರ ವಿಡಿಯೋವನ್ನು ನಾನು ನೋಡಲೇಬಾರದಿತ್ತು. ನಿಜಕ್ಕೂ ಭಯಾನಕ. ಹಿನ್ನೆಲೆಯಲ್ಲಿ ಕೇಳಿಸಿದ ಆ ಚೀರಾಟ ನಮ್ಮ ಮನದಲ್ಲಿ ಪ್ರತಿಧ್ವನಿಸುತ್ತಲೇ ಇರುತ್ತದೆ ಮತ್ತು ದೀರ್ಘ ಕಾಲದವರೆಗೆ ಕಾಡುತ್ತಲೇ ಇರುತ್ತದೆ. #JusticeForKanhaiyaLal’ ಎಂದು ಪ್ರಣಿತಾ ಸುಭಾಸ್ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಮತ್ತೊಂದು ಪೋಸ್ಟ್ನಲ್ಲಿ ‘ಹಿಂದೂಗಳ ಜೀವ ಮುಖ್ಯ’ ಎಂದು ಪ್ರಣಿತಾ ಸುಭಾಷ್ ಅವರು ಫಲಕ ಹಿಡಿದು ನಿಂತಿರುವ ಫೋಟೋ ಹಂಚಿಕೊಂಡಿದ್ದಾರೆ. ‘ಯಾರಿಗಾದರೂ ಕೇಳುತ್ತಿದೆಯೇ’ ಎಂದು ಅವರ ಅದಕ್ಕೆ ಕ್ಯಾಪ್ಷನ್ ನೀಡಿದ್ದಾರೆ. ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ 3 ಸಾವಿರಕ್ಕೂ ಅಧಿಕ ಜನರು ಇದಕ್ಕೆ ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Pranitha Subhash: ನಟಿ ಪ್ರಣಿತಾ ಸುಭಾಷ್ಗೆ ಹೆಣ್ಣುಮಗು; ಇಲ್ಲಿದೆ ಫೋಟೋ
Published On - 10:17 am, Thu, 30 June 22