ಅರೆಸ್ಟ್ ಆಗ್ತಿದ್ದಂತೇ ‘ಮುದುಡಿದ ತಾವರೆ‘ಗಳಾದ ತಾರೆಯರು! ಗೋಳಾಟ ಒಂದಾ, ಎರಡಾ?

|

Updated on: Sep 10, 2020 | 1:20 PM

ಬೆಂಗಳೂರು:ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟಿರುವ ಪ್ರಕರಣ ಸಂಬಂಧ ನಟಿ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿಯನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಆದರೆ ಇವರಿಬ್ಬರಿಗೂ ಪೊಲೀಸ್ ಕಸ್ಟಡಿಗೆ ಹೋದ ಬಳಿಕ ಕಾಯಿಲೆಗಳು ಒಂದೊಂದಾಗಿ ಶುರುವಾಗಿವೆ. ಸಿಸಿಬಿ ಬಂಧನಕ್ಕೂ ಮುನ್ನ ಆರಾಮಾಗಿದ್ದ ನಟಿಯರು ಈಗ ಸಿಸಿಬಿ ಕಸ್ಟಡಿಗೆ ಹೋಗುತ್ತಿದ್ದಂತೆ ದಿನಕ್ಕೊಂದು ನೆಪ, ದಿನಕ್ಕೊಂದು ಆರೋಗ್ಯ ಸಮಸ್ಯೆ ಹೇಳುತ್ತಿದ್ದಾರೆ. ಜಿಮ್ಮು, ವರ್ಕೌಟ್, ಶಾಪಿಂಗ್ ಅಂತ ಆರಾಮವಾಗಿದ್ದ ನಟಿಯರು ಅರೆಸ್ಟ್ ಆಗ್ತಿದ್ದಂತೆಯೇ ಮುದುಡಿದ ತಾವರೆಗಳಂತಾಗಿದ್ದಾರೆ. ರಾಗಿಣಿಗೆ ಒಂದು ರೀತಿ ಸಮಸ್ಯೆ ಆದ್ರೆ, ಸಂಜನಾಗೆ […]

ಅರೆಸ್ಟ್ ಆಗ್ತಿದ್ದಂತೇ ‘ಮುದುಡಿದ ತಾವರೆ‘ಗಳಾದ ತಾರೆಯರು! ಗೋಳಾಟ ಒಂದಾ, ಎರಡಾ?
Follow us on

ಬೆಂಗಳೂರು:ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟಿರುವ ಪ್ರಕರಣ ಸಂಬಂಧ ನಟಿ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿಯನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಆದರೆ ಇವರಿಬ್ಬರಿಗೂ ಪೊಲೀಸ್ ಕಸ್ಟಡಿಗೆ ಹೋದ ಬಳಿಕ ಕಾಯಿಲೆಗಳು ಒಂದೊಂದಾಗಿ ಶುರುವಾಗಿವೆ.

ಸಿಸಿಬಿ ಬಂಧನಕ್ಕೂ ಮುನ್ನ ಆರಾಮಾಗಿದ್ದ ನಟಿಯರು ಈಗ ಸಿಸಿಬಿ ಕಸ್ಟಡಿಗೆ ಹೋಗುತ್ತಿದ್ದಂತೆ ದಿನಕ್ಕೊಂದು ನೆಪ, ದಿನಕ್ಕೊಂದು ಆರೋಗ್ಯ ಸಮಸ್ಯೆ ಹೇಳುತ್ತಿದ್ದಾರೆ. ಜಿಮ್ಮು, ವರ್ಕೌಟ್, ಶಾಪಿಂಗ್ ಅಂತ ಆರಾಮವಾಗಿದ್ದ ನಟಿಯರು ಅರೆಸ್ಟ್ ಆಗ್ತಿದ್ದಂತೆಯೇ ಮುದುಡಿದ ತಾವರೆಗಳಂತಾಗಿದ್ದಾರೆ. ರಾಗಿಣಿಗೆ ಒಂದು ರೀತಿ ಸಮಸ್ಯೆ ಆದ್ರೆ, ಸಂಜನಾಗೆ ಮತ್ತೊಂದು ರೀತಿ ಸಮಸ್ಯೆ. ಇಬ್ಬರೂ ದಿನೇ ದಿನೇ ಆರೋಗ್ಯ ಸಮಸ್ಯೆಗಳನ್ನೇ ಹೇಳಿಕೊಳ್ಳುತ್ತಿದ್ದಾರೆ. ಇದು ಸಿಸಿಬಿ ಅಧಿಕಾರಿಗಳಿಗೆ ತಲೆನೋವು ತಂದಿದ್ದು, ತನಿಖೆ ನಡೆಸುವುದು ಕಷ್ಟವಾಗುತ್ತಿದೆ.

ಕೆ.ಸಿ.ಜನರಲ್ ಆಸ್ಪತ್ರೆಗೆ ರಾಗಿಣಿ ತಂದೆ ಆಗಮನ:
ಇನ್ನು ಮೆಡಿಕಲ್ ಟೆಸ್ಟ್‌ಗಾಗಿ ಸಿಸಿಬಿ ಅಧಿಕಾರಿಗಳು ನಟಿ ರಾಗಿಣಿ ದ್ವಿವೇದಿಯನ್ನು ಕೆ.ಸಿ.ಜನರಲ್ ಆಸ್ಪತ್ರೆಗೆ ಕರೆತಂದಿದ್ದಾರೆ. ಸದ್ಯ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿರುವ ರಾಗಿಣಿಯನ್ನು ನೋಡಲು ತಂದೆ ರಾಕೇಶ್ ಆಗಮಿಸಿದ್ದಾರೆ. ಸದ್ಯ ನಟಿಯರಿಬ್ಬರಿಗೂ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ಮಾಡಿಸಲಾಗುತ್ತಿದೆ. ಜೊತೆಗೆ ಡೋಪಿಂಗ್ ಟೆಸ್ಟ್‌ಗೆ ನಿರ್ಧರಿಸಲಾಗಿದೆ.

ಮೆಡಿಕಲ್ ಟೆಸ್ಟ್ ಬಳಿಕ ಎಫ್ಎಸ್‌ಎಲ್ ಕಚೇರಿಗೆ ಶಿಫ್ಟ್ ಮಾಡಲಾಗುತ್ತೆ. ನಂತರ ಸಿಸಿಬಿ ಇನ್ಸ್‌ಪೆಕ್ಟರ್ ಅಂಜುಮಾಲಾ & ಟೀಂನಿಂದ ವಿಚಾರಣೆ ನಡೆಯುತ್ತೆ. ಆದರೆ ಸಂಜನಾ ಆಸ್ಪತ್ರೆಯಲ್ಲಿ ಟೆಸ್ಟ್ ಮಾಡಿಸಿಕೊಳ್ಳಲು ನಿರಾಕರಿಸಿದ್ದಾರೆ. ನಾನು ಡೋಪ್ ಟೆಸ್ಟ್ ಮಾಡಿಸಿಕೊಳ್ಳಲ್ಲವೆಂದು ಗಲಾಟೆ ಮಾಡುತ್ತಿದ್ದಾರೆ. ಮೆಡಿಕಲ್ ಟೆಸ್ಟ್ ಮಾಡುವುದಾದರೆ ನೀವು ಮಾಡಿಕೊಳ್ಳಿ ಆದರೆ ಡೋಪ್ ಟೆಸ್ಟ್ ಮಾಡಿಸಿಕೊಳ್ಳಲ್ಲ ಎಂದು ಹಠ ಮಾಡುತ್ತಿದ್ದಾರೆ.

Published On - 1:09 pm, Thu, 10 September 20