ಮೊದಲ ಅರೆಸ್ಟ್! ನಟಿ ರಾಗಿಣಿ ಆಪ್ತ ರವಿಶಂಕರ್ 5 ದಿನ CCB ಕಸ್ಟಡಿಗೆ

| Updated By: ಸಾಧು ಶ್ರೀನಾಥ್​

Updated on: Sep 03, 2020 | 6:06 PM

[lazy-load-videos-and-sticky-control id=”cmTqyyJs2Z4″] ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಜಾಲದ ನಂಟು ಆರೋಪ ಪ್ರಕರಣದಲ್ಲಿ CCB ಅಧಿಕಾರಿಗಳಿಂದ ರಾಗಿಣಿ ಆಪ್ತ ರವಿಶಂಕರ್ ಬಂಧನವಾಗಿದೆ. ನಿನ್ನೆಯಿಂದ CCBಯ ವಶದಲ್ಲೇ ಇರುವ ರವಿಶಂಕರ್​ನ ಅಧಿಕೃತವಾಗಿ ಅರೆಸ್ಟ್ ಮಾಡಲಾಗಿದೆ. ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಜಾಲದ ನಂಟು ಆರೋಪ ಪ್ರಕರಣದಲ್ಲಿ ರವಿಶಂಕರ್‌ನನ್ನು ಸಿಸಿಬಿ ಅಧಿಕಾರಿಗಳು 5 ದಿನ ತಮ್ಮ ಕಸ್ಟಡಿಗೆ ಪಡೆದಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಜಡ್ಜ್ ಮುಂದೆ ಹಾಜರುಪಡಿಸಿ, ವಶಕ್ಕೆ ಪಡೆದಿದಿದ್ದಾರೆ. ಈ ನಡುವೆ, ಚಾಮರಾಜಪೇಟೆಯಲ್ಲಿರುವ CCB ಕಚೇರಿಗೆ ಭೇಟಿಕೊಟ್ಟ ನಗರ ಪೊಲೀಸ್​ ಆಯುಕ್ತ ಕಮಲ್​ […]

ಮೊದಲ ಅರೆಸ್ಟ್! ನಟಿ ರಾಗಿಣಿ ಆಪ್ತ ರವಿಶಂಕರ್  5 ದಿನ CCB ಕಸ್ಟಡಿಗೆ
Follow us on

[lazy-load-videos-and-sticky-control id=”cmTqyyJs2Z4″]

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಜಾಲದ ನಂಟು ಆರೋಪ ಪ್ರಕರಣದಲ್ಲಿ CCB ಅಧಿಕಾರಿಗಳಿಂದ ರಾಗಿಣಿ ಆಪ್ತ ರವಿಶಂಕರ್ ಬಂಧನವಾಗಿದೆ. ನಿನ್ನೆಯಿಂದ CCBಯ ವಶದಲ್ಲೇ ಇರುವ ರವಿಶಂಕರ್​ನ ಅಧಿಕೃತವಾಗಿ ಅರೆಸ್ಟ್ ಮಾಡಲಾಗಿದೆ.

ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಜಾಲದ ನಂಟು ಆರೋಪ ಪ್ರಕರಣದಲ್ಲಿ ರವಿಶಂಕರ್‌ನನ್ನು ಸಿಸಿಬಿ ಅಧಿಕಾರಿಗಳು 5 ದಿನ ತಮ್ಮ ಕಸ್ಟಡಿಗೆ ಪಡೆದಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಜಡ್ಜ್ ಮುಂದೆ ಹಾಜರುಪಡಿಸಿ, ವಶಕ್ಕೆ ಪಡೆದಿದಿದ್ದಾರೆ.

ಈ ನಡುವೆ, ಚಾಮರಾಜಪೇಟೆಯಲ್ಲಿರುವ CCB ಕಚೇರಿಗೆ ಭೇಟಿಕೊಟ್ಟ ನಗರ ಪೊಲೀಸ್​ ಆಯುಕ್ತ ಕಮಲ್​ ಪಂತ್ ಸುಮಾರು 1 ಗಂಟೆಯ ಕಾಲ ವಿಚಾರಣೆಯ ಮಾಹಿತಿ ಪಡೆದರು. ಬೆಳಗ್ಗೆಯಿಂದ ನಡೆದಿರುವ ತನಿಖೆಯ ಮಾಹಿತಿ ಪಡೆದ ಕಮಲ್​ ಪಂತ್​ರ ನಿರ್ಗಮನ ಬಳಿಕ ರವಿಶಂಕರ್​ನ ಅಧಿಕೃತವಾಗಿ ಅರೆಸ್ಟ್​ ಮಾಡಲಾಯಿತು. ವಿಚಾರಣೆಗೊಳಗಾದವರ ಪರ ಲಾಯರ್‌ಗಳ ಹೇಳಿಕೆ ಸೇರಿದಂತೆ ಒಟ್ಟಾರೆ ಇಂದಿನ ತನಿಖಾ ಮಾಹಿತಿ ಸಂಗ್ರಹಿಸಿದ ಕಮಲ್‌ ಪಂತ್‌ ಇಂದಿನ ತನಿಖೆಯಲ್ಲಿ ಯಾಱರ ಹೆಸರು ಕೇಳಿಬಂದಿದೆ ಎಂಬ ಮಾಹಿತಿ ಸಹ ಪಡೆದರು ಎಂದು ತಿಳಿದುಬಂದಿದೆ.

ಸದ್ಯ CCBಯಿಂದ ರವಿಶಂಕರ್​ನ ಮಾತ್ರ ವಶಕ್ಕೆ ಪಡೆಯಲಾಗಿದೆ. ಡ್ರಗ್​ ಪೆಡ್ಲರ್​ ಕಾರ್ತಿಕ್ ಹಾಗೂ ಸಂಜನಾ ಆಪ್ತ ಎಂದು ಹೇಳಲಾಗಿರುವ ರಾಹುಲ್ ವಿಚಾರಣೆ ಮುಂದುವರೆದಿದೆ. ಜೊತೆಗೆ, ನಾಳೆ ವಿಚಾರಣೆಗೆ ಹಾಜರಾಗುವಂತೆ ನಟಿ ರಾಗಿಣಿ ದ್ವಿವೇದಿಗೆ CCBಯಿಂದ ಸೂಚನೆ ನೀಡಲಾಗಿದೆ.

Published On - 5:30 pm, Thu, 3 September 20