ನಶೆ ರಾಣಿ ರಾಗಿಣಿಗೆ ಎಷ್ಟು ಬಾಯ್​ ಫ್ರೆಂಡ್ಸ್​ ಗೊತ್ತಾ!?

| Updated By: Digi Tech Desk

Updated on: Jun 23, 2023 | 11:51 AM

ಬೆಂಗಳೂರು: ಡ್ರಗ್ಸ್ ಜಾಲದ ನಂಟಿರುವ ಪ್ರಕರಣದಲ್ಲಿ ಜೈಲು ಸೇರಿದ ತುಪ್ಪದ ಹುಡುಗಿಯ ಬಾಯ್​ಫ್ರೆಂಡ್ಸ್ ಲಿಸ್ಟ್​ ಕೇಳಿ ಸಿಸಿಬಿ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ. ಅದೆಷ್ಟು ಹುಡುಗರ ಮೇಲೆ ರಾಗಿಣಿಗೆ ಲವ್ ಆಗಿದೆ ಗೊತ್ತಾ? ಶಿವಪ್ರಕಾಶ್, ರವಿಶಂಕರ್ ಪ್ರೇಮದ ಮಧ್ಯೆ ಮತ್ತೊಂದು, ಮಗದೊಂದು ಅಂತಾ ಅನೇಕ ಲವ್ ಸ್ಟೋರಿಗಳು ಇವೆಯಂತೆ! ಅದೂ ಸಾಲದು ಅಂತಾ.. ಕನ್ನಡದ ಸ್ಟಾರ್ ನಟರೊಬ್ಬರ ಮೇಲೂ ನಶೆ ರಾಣಿ ರಾಗಿಣಿಗೆ ಕ್ರಷ್ ಆಗಿತ್ತಂತೆ! ಜುಮ್ ಜುಮ್ಮಾಯಾ ಹುಡುಗಿ ರಾಗಿಣಿಯ ಲವ್ ಸ್ಟೋರಿಗಳ ಪುರಾಣ ಇಲ್ಲಿದೆ ಓದಿಕೊಳ್ಳಿ. ಸದ್ಯಕ್ಕೆ.. […]

ನಶೆ ರಾಣಿ ರಾಗಿಣಿಗೆ ಎಷ್ಟು ಬಾಯ್​ ಫ್ರೆಂಡ್ಸ್​ ಗೊತ್ತಾ!?
Follow us on

ಬೆಂಗಳೂರು: ಡ್ರಗ್ಸ್ ಜಾಲದ ನಂಟಿರುವ ಪ್ರಕರಣದಲ್ಲಿ ಜೈಲು ಸೇರಿದ ತುಪ್ಪದ ಹುಡುಗಿಯ ಬಾಯ್​ಫ್ರೆಂಡ್ಸ್ ಲಿಸ್ಟ್​ ಕೇಳಿ ಸಿಸಿಬಿ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ. ಅದೆಷ್ಟು ಹುಡುಗರ ಮೇಲೆ ರಾಗಿಣಿಗೆ ಲವ್ ಆಗಿದೆ ಗೊತ್ತಾ? ಶಿವಪ್ರಕಾಶ್, ರವಿಶಂಕರ್ ಪ್ರೇಮದ ಮಧ್ಯೆ ಮತ್ತೊಂದು, ಮಗದೊಂದು ಅಂತಾ ಅನೇಕ ಲವ್ ಸ್ಟೋರಿಗಳು ಇವೆಯಂತೆ! ಅದೂ ಸಾಲದು ಅಂತಾ.. ಕನ್ನಡದ ಸ್ಟಾರ್ ನಟರೊಬ್ಬರ ಮೇಲೂ ನಶೆ ರಾಣಿ ರಾಗಿಣಿಗೆ ಕ್ರಷ್ ಆಗಿತ್ತಂತೆ! ಜುಮ್ ಜುಮ್ಮಾಯಾ ಹುಡುಗಿ ರಾಗಿಣಿಯ ಲವ್ ಸ್ಟೋರಿಗಳ ಪುರಾಣ ಇಲ್ಲಿದೆ ಓದಿಕೊಳ್ಳಿ.

ಸದ್ಯಕ್ಕೆ.. ಎರಡೆರಡ್ಲ ನಾಕು! 
ಒಂದಲ್ಲ, ಎರಡಲ್ಲ, ಮೂವರಲ್ಲ, ರಾಗಿಣಿಗೆ ನಾಲ್ವರು ಬಾಯ್​ಫ್ರೆಂಡ್ಸ್ ಇದಾರಂತೆ. ಖರ್ಚಿಗಾಗಿ ಒಬ್ಬ, ಸುತ್ತಾಡಿಸೋಕೆ ಇನ್ನೊಬ್ಬ, ಪಾರ್ಟಿಗೆ ಮತ್ತೊಬ್ಬ.. ಹೀಗೆ ನಾನಾ ಕಾರಣಗಳಿಗೆ ಅಂತಾ ನಾಲ್ವರು ಬಾಯ್​ಫ್ರೆಂಡ್ಸ್​ಗಳನ್ನು ರಾಗಿಣಿ ಮೈಂಟೇನ್ ಮಾಡ್ತಿದ್ರಂತೆ. ಶಿವಪ್ರಕಾಶ್, ರವಿಶಂಕರ್ ಆಯ್ತು.. ಕನ್ನಡದ ಸ್ಟಾರ್ ನಟನ ಜತೆಗೂ ರಾಗಿಣಿಗೆ ಲವ್ ಆಗಿತ್ತಂತೆ. ಸಿಸಿಬಿ ಮುಂದೆ ಆ  ಸ್ಟಾರ್ ಲವ್ ಬ್ರೇಕಪ್ ಬಗ್ಗೆ ತುಪ್ಪದ ಹುಡುಗಿ ಬಾಯ್ಬಿಟ್ಟಿದ್ದಾರೆ.

ಓರ್ವ ಉದ್ಯಮಿ ಜತೆಗೂ..
ಸ್ಯಾಂಡಲ್​ವುಡ್​ ನಟನೂ ನನ್ನ ಬಾಯ್​ಫ್ರೆಂಡ್ ಆಗಿದ್ದ. ಆಮೇಲೆ ಆತನ ಜತೆ ರಿಲೇಷನ್ ಶಿಪ್ ಬ್ರೇಕಪ್ ಆಗಿತ್ತು ಎಂದು ಸಿಸಿಬಿ ಮುಂದೆ ರಾಗಿಣಿ ತನ್ನ ಪ್ರೇಮ್​ಕಹಾನಿ ತೆರೆದಿಟ್ಟಿದ್ದಾರೆ. ಇದಾದ ನಂತರ ಓರ್ವ ಉದ್ಯಮಿ ಜತೆಗೆ ಗೆಳೆತನ ಇತ್ತು. ಆ ಉದ್ಯಮಿ ಬಳಿಕ.. ಶಿವಪ್ರಕಾಶ್ ಚಪ್ಪಿ ಸಂಪರ್ಕಕ್ಕೆ ಬಂದಿದ್ದ. ಆ ಮೇಲೆ ಹೊಸ ರಿಲೇಷನ್ ಶಿಪ್ ಶುರುವಾಗಿತ್ತು. ಚಪ್ಪಿ ಜತೆಗೆ ಜಗಳವಾದ ನಂತ್ರ ಅಶೋಕನಗರದಲ್ಲಿ ಕೇಸ್ ಆಗಿತ್ತು. ಇದಾದ ಬಳಿಕ ರವಿಶಂಕರ್ ಜತೆಗೆ ರಾಗಿಣಿ ಲವ್ವಿಡವ್ವಿ ಶುರುವಾಯ್ತಂತೆ.

ಪಿಯು ಫೇಲ್ ಆದವನನ್ನು ಮದುವೆ ಆಗ್ತಿಯಾ?
ರಾಗಿಣಿ ಬಾಯ್ ಫ್ರೆಂಡ್ಸ್ ಲಿಸ್ಟ್ ಕೇಳಿ ಸಿಸಿಬಿಯೇ ಶಾಕ್ ಆಗಿದೆ. ಹಿರಿಯ ಅಧಿಕಾರಿ ಮುಂದೆ ಲವ್ ಸ್ಟೋರಿ ಬಗ್ಗೆ ರಾಗಿಣಿ ತನ್ನ ರಂಗೀನ್ ಕಹಾನಿ ಹೇಳುತ್ತಿದ್ದರೆ.. ಆ ಖಡಕ್ ಅಧಿಕಾರಿ ಒಳಗೊಳಗೆ ಏನು ಅಂದ್ಕೊಂಡ್ರೋ.. ಅಂತೂ ‘ಏನಮ್ಮ ನೀನು ದೊಡ್ಡ ಹೀರೋಯಿನ್ ಇದ್ದೀಯಾ! ಯಾಕೆ ಸೆಕೆಂಡ್ ಪಿಯು ಫೇಲ್ ಆದವನನ್ನು ಮದುವೆ ಆಗ್ತಿಯಾ? ರವಿಶಂಕರ್​ನನ್ನು ಯಾಕೆ ಮದುವೆ ಆಗ್ತಿಯಾ?’ ಎಂದು ಕೇಳಿದ್ದಾರೆ.

ಅದಕ್ಕೆ ಉತ್ತರಿಸಿದ ರಾಗಿಣಿ, ನಾ ಯಾಕೆ ರವಿಶಂಕರನನ್ನು ಮದುವೆ ಆಗ್ಬೇಕು ಸಾರ್? ಎಂದಾಗ ಭಯಂಕರ ಸತ್ಯವೊಂದನ್ನು ಹೊರಬಿದ್ದಿದೆ. ರವಿಶಂಕರ್ ತನ್ನ ಪತ್ನಿಗೆ ಡೈವರ್ಸ್ ನೀಡಿ ನಿನ್ನ ಪ್ರೀತಿಸುತ್ತಿದ್ದಾನಂತೆ ಅಲ್ಲಮ್ಮಾ? ಎಂದು ಸಿಸಿಬಿ ಅಧಿಕಾರಿ ನಟಿ ರಾಗಿಣಿಗೆ ಕೇಳಿದ್ರೆ.. ನಾನು ಅವನನ್ನು ಮದುವೆ ಆಗ್ತೀನಿ ಅಂತಾ ಎಲ್ಲೂ ಹೇಳಿಲ್ಲವಲ್ಲ. ರವಿಶಂಕರ್​ನ್ನು ಮದುವೆ ಆಗುವುದೂ ಇಲ್ಲ ಎಂದು ರಾಗಿಣಿ ಉತ್ತರಿಸಿದ್ದಾರೆ. ನನಗೆ ರವಿಶಂಕರ್ ಓರ್ವ ಒಳ್ಳೆಯ ಗೆಳೆಯ ಅಷ್ಟೇ. ಇವನಷ್ಟೇ ಅಲ್ಲ, ಈ ಹಿಂದೆ ಸ್ಟಾರ್ ನಟ ಬಾಯ್​ಫ್ರೆಂಡ್ ಆಗಿದ್ದ ನಂತರ ಆ ನಟನ ಜತೆ ರಿಲೇಷನ್ ಶಿಪ್ ಬ್ರೇಕಪ್ ಆಗಿತ್ತು ಎಂದು ತನ್ನ ಪ್ರೇಮ್ ಕಹಾನಿ ಬಿಚ್ಚಿಟ್ಟಿದ್ದಾರೆ.

Published On - 10:38 am, Tue, 22 September 20