ಕೊನೆಗೂ ಪಂಜರದಿಂದ ಹೊರಬಂದ ಅರಗಿಣಿ: ಜೈಲಿನಿಂದ ನಟಿ ರಾಗಿಣಿ ದ್ವಿವೇದಿ ಬಿಡುಗಡೆ

|

Updated on: Jan 25, 2021 | 8:31 PM

ಸತತ 144 ದಿನಗಳ ಕಾಲ ಜೈಲಿನಲ್ಲಿದ್ದ ನಟಿ ರಾಗಿಣಿ ದ್ವಿವೇದಿಗೆ ಇಂದು ಬಿಡುಗಡೆ ಭಾಗ್ಯ ದೊರೆತಿದೆ. ಕೆಲವು ದಿನಗಳ ಹಿಂದೆಯೇ ರಾಗಿಣಿಗೆ ಸುಪ್ರೀಂ ಕೋರ್ಟ್​ನಲ್ಲಿ ಜಾಮೀನು ಮಂಜೂರು ಆಗಿದ್ದರೂ ನಟಿಗೆ ಇಂದು ಪರಪ್ಪನ ಅಗ್ರಹಾರ ಕಾರಾಗೃಹದಿಂದ ಬಿಡುಗಡೆಯಾಗುವ ಅವಕಾಶ ಸಿಕ್ಕಿದೆ.

ಕೊನೆಗೂ ಪಂಜರದಿಂದ ಹೊರಬಂದ ಅರಗಿಣಿ: ಜೈಲಿನಿಂದ ನಟಿ ರಾಗಿಣಿ ದ್ವಿವೇದಿ ಬಿಡುಗಡೆ
ಜೈಲಿನಿಂದ ನಟಿ ರಾಗಿಣಿ ದ್ವಿವೇದಿ ಬಿಡುಗಡೆ
Follow us on

ಬೆಂಗಳೂರು: ಸತತ 144 ದಿನಗಳ ಕಾಲ ಜೈಲಿನಲ್ಲಿದ್ದ ನಟಿ ರಾಗಿಣಿ ದ್ವಿವೇದಿಗೆ ಇಂದು ಬಿಡುಗಡೆ ಭಾಗ್ಯ ದೊರೆತಿದೆ. ಕೆಲವು ದಿನಗಳ ಹಿಂದೆಯೇ ರಾಗಿಣಿಗೆ ಸುಪ್ರೀಂ ಕೋರ್ಟ್​ನಲ್ಲಿ ಜಾಮೀನು ಮಂಜೂರು ಆಗಿದ್ದರೂ ನಟಿಗೆ ಇಂದು ಪರಪ್ಪನ ಅಗ್ರಹಾರ ಕಾರಾಗೃಹದಿಂದ ಬಿಡುಗಡೆಯಾಗುವ ಅವಕಾಶ ಸಿಕ್ಕಿದೆ.

ಜೈಲಿನಿಂದ ಹೊರಬರುತ್ತಿದ್ದಂತೆ ನಟಿ ದೇಗುಲಕ್ಕೆ ಭೇಟಿಕೊಟ್ಟರು. ಸೆಂಟ್ರಲ್ ಜೈಲು ಬಳಿಯಿರುವ ಜಡೆ ಮುನೇಶ್ವರ ಸ್ವಾಮಿ ದೇಗುಲಕ್ಕೆ ನಟಿ ರಾಗಿಣಿ ಭೇಟಿಕೊಟ್ಟರು. ಮುನೇಶ್ವರ ಸ್ವಾಮಿಗೆ ನಮಸ್ಕರಿಸಿದ ನಟಿ ರಾಗಿಣಿ ದ್ವಿವೇದಿ ಬಳಿಕ ಅಲ್ಲಿಂದ ತಮ್ಮ ಕಾರಿನಲ್ಲಿ ತೆರಳಿದರು.

ರಾಗಿಣಿ ಜಾಮೀನಿಗೆ ಚಿನ್ನಸ್ವಾಮಿ ಮತ್ತು ಕೃಷ್ಣ ಎಂಬುವವರಿಂದ ಶ್ಯೂರಿಟಿ ಪಡೆಯಲಾಗಿದೆ. ಸೂಪರ್ ಡಿಸ್ಕೌಂಟ್ ಕಂಪನಿ ಹೊಂದಿರುವ ಚಿನ್ನಸ್ವಾಮಿ ಮತ್ತು ಕೃಷ್ಣ ಎಂಬುವವರಿಂದ ಶ್ಯೂರಿಟಿ ಪಡೆಯಲಾಗಿದೆ. ನಟಿ ರಾಗಿಣಿ ಕಂಪನಿಗೆ ಬ್ರ್ಯಾಂಡ್‌ ಅಂಬಾಸಿಡರ್ ಆಗಿದ್ದಾರೆ.

ಈಗ್ಲಾದ್ರೂ 2 ದಿನ ಊಟ ಮಾಡಿ ನೆಮ್ಮದಿಯಾಗಿ ನಿದ್ರಿಸುತ್ತೇನೆ -ರಾಗಿಣಿ ಬಿಡುಗಡೆಯ ನಿರೀಕ್ಷೆಯಲ್ಲಿರುವ ತಂದೆ ರಾಕೇಶ್​ ಸಂತಸ

Published On - 8:23 pm, Mon, 25 January 21