
ಖ್ಯಾತ ನಟಿ ರಮ್ಯಾ ಅವರಿಗೆ ಈಗ 43 ವರ್ಷ ವಯಸ್ಸು. ಸಿನಿಮಾದಲ್ಲಿ ಅವರು ಅಷ್ಟೇನೂ ಬ್ಯುಸಿ ಆಗಿಲ್ಲ. ಆದರೂ ಕೂಡ ಅವರು ಮದುವೆ ಬಗ್ಗೆ ಗಮನ ಹರಿಸಿಲ್ಲ. ರಮ್ಯಾ ಅವರು ಯಾವಾಗ ಮದುವೆ ಆಗಬಹುದು ಎಂಬ ಪ್ರಶ್ನೆ ಅಭಿಮಾನಿಗಳಿಗೆ ಇದೆ. ಕಾರ್ಯಕ್ರಮವೊಂದರಲ್ಲಿ ಅವರಿಗೆ ಈ ಬಗ್ಗೆ ಪ್ರಶ್ನೆ ಎದುರಾಗಿದೆ. ಪತ್ರಕರ್ತೆ ನಬಿಲಾ ಜಮಾಲ್ ಕೇಳಿದ ಪ್ರಶ್ನೆಗೆ ರಮ್ಯಾ ಅವರು ಉತ್ತರಿಸಿದ್ದಾರೆ. ಮದುವೆಯ ಬಗ್ಗೆ ತಮಗೆ ಇರುವ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
‘ಮದುವೆ ಆಗುವುದು ಅಷ್ಟು ಮುಖ್ಯವೇ? ಖಂಡಿತಾ ಇಲ್ಲ. ನಾನು ಯಾರೆಂಬುದು ಮದುವೆಯಿಂದ ನಿರ್ಧಾರ ಆಗಲ್ಲ. ಮದುವೆ ಇಲ್ಲದೇ ನಾವು ಖುಷಿಯಾಗಿದ್ದೇವೆ ಅಲ್ಲವಾ? ಅಷ್ಟೇ.. ಖುಷಿಯಾಗಿ ಇರುವುದೇ ಎಲ್ಲಕ್ಕಿಂತ ಮುಖ್ಯ. ಒಂದೋ, ನೀವು ಮದುವೆ ಆಗಿರಬೇಕು ಅಥವಾ ಖುಷಿಯಾಗಿರಬೇಕು ಅಂತ ಹೇಳಲಾಗುತ್ತೆ. ಏನು ಬೇಕು ಎಂಬುದನ್ನು ನೀವೇ ಆಯ್ಕೆ ಮಾಡಿಕೊಳ್ಳಿ’ ಎಂದು ರಮ್ಯಾ ಅವರು ಹೇಳಿದ್ದಾರೆ.
‘ತುಂಬಾ ಮಹಿಳೆಯವರಿಗೆ ಈ ಮಾತು ಅನ್ವಯ ಆಗದೇ ಇರಬಹುದು. ಮದುವೆ ಆಗಿಯೂ ನೀವು ಖುಷಿಯಾಗಿ ಇರಬಹುದು. ನಿಮಗೆ ಹೊಂದಿಕೆ ಆಗುವಂತಹ ಸಂಗಾತಿ ಸಿಕ್ಕರೆ ಚೆನ್ನಾಗಿರುತ್ತದೆ. ಅವರು ನಿಮ್ಮ ಉತ್ತಮ ಸ್ನೇಹಿತರಾಗಿದ್ದು, ಅವರ ಜೊತೆ ಇಡೀ ಜೀವನ ಕಳೆಯಲು ಬಯಸಿದರೆ ಅದು ಉತ್ತಮ’ ಎಂದು ಕೂಡ ರಮ್ಯಾ ಅವರು ಅಭಿಪ್ರಾಯಪಟ್ಟಿದ್ದಾರೆ.
‘ಮದುವೆ ಆಗುವುದು ಅಷ್ಟು ಮುಖ್ಯವೇ? ಖಂಡಿತಾ ಇಲ್ಲ. ನಾನು ಯಾರೆಂಬುದು ಮದುವೆಯಿಂದ ನಿರ್ಧಾರ ಆಗಲ್ಲ. ಮದುವೆ ಇಲ್ಲದೇ ನಾವು ಖುಷಿಯಾಗಿದ್ದೇವೆ ಅಲ್ಲವಾ? ಅಷ್ಟೇ.. ಖುಷಿಯಾಗಿ ಇರುವುದೇ ಎಲ್ಲಕ್ಕಿಂತ ಮುಖ್ಯ. ಒಂದೋ, ನೀವು ಮದುವೆ ಆಗಿರಬೇಕು ಅಥವಾ ಖುಷಿಯಾಗಿರಬೇಕು ಅಂತ ಹೇಳಲಾಗುತ್ತೆ. ಏನು ಬೇಕು ಎಂಬುದನ್ನು ನೀವೇ ಆಯ್ಕೆ ಮಾಡಿಕೊಳ್ಳಿ’ ಎಂದು ರಮ್ಯಾ ಅವರು ಹೇಳಿದ್ದಾರೆ.
Lovely Ramya candid on love, relationships and idea of marriage
Refreshingly open conversation on matters of the heart❤️@divyaspandana pic.twitter.com/xMftVQ2W0I
— Nabila Jamal (@nabilajamal_) September 6, 2026
ಮುಂದುವರಿದು ಮಾತನಾಡಿದ ರಮ್ಯಾ ಅವರು, ‘ಮನುಷ್ಯರಾಗಿ ನಮ್ಮ ಬದುಕಿನಲ್ಲಿ ಬದಲಾವಣೆ ಎಂಬುದು ನಿರಂತರವಾಗಿರುತ್ತದೆ. ನಾವು ಸದಾ ಬದಲಾಗುತ್ತಾ ಇರುತ್ತೇವೆ. ಅಲ್ಲೇ ಸಮಸ್ಯೆ ಎದುರಾಗುತ್ತದೆ. ನೀವು ಉತ್ತಮ ಸ್ನೇಹಿತರಾಗಿದ್ದು, ನಿಮ್ಮ ಮೌಲ್ಯಗಳು ಒಂದೇ ರೀತಿ ಇದ್ದರೆ ಮದುವೆ ಆಗುವುದು ಉತ್ತಮ ಎನಿಸುತ್ತದೆ. ಮದುವೆ ಆಗಿ ಖುಷಿಯಾಗಿ ಇರುವವರು ನನ್ನ ಈ ಮಾತನ್ನು ಒಪ್ಪುತ್ತಾರೆ ಎನಿಸುತ್ತದೆ’ ಎಂದಿದ್ದಾರೆ.
ಇದನ್ನೂ ಓದಿ: ‘ಕೇಸ್ ಹಿಂಪಡೆಯಿರಿ’: ರಮ್ಯಾ ಕಾಲಿಗೆ ಬಿದ್ದ ದರ್ಶನ್ ಫ್ಯಾನ್ಸ್; ಆದರೂ ಇಲ್ಲ ಕ್ಷಮೆ
‘ನನಗೆ ಇನ್ನೂ ಆ ರೀತಿಯ ವ್ಯಕ್ತಿ ಸಿಕ್ಕಿಲ್ಲ. ನಾನು ಆ ಬಗ್ಗೆ ಗಮನ ಕೂಡ ಹರಿಸುತ್ತಿಲ್ಲ. ಕೆಲಸ ಮಾಡುವುದರಲ್ಲಿ ನಾನು ಬ್ಯುಸಿ ಆಗಿದ್ದೇನೆ. ರಿಲೇಷನ್ಶಿಪ್ಗೆ ಸಮಯ ಬೇಕು’ ಎಂದು ರಮ್ಯಾ ಅವರು ಹೇಳಿದ್ದಾರೆ. ಆದಷ್ಟು ಬೇಗ ಅವರು ಮದುವೆ ಬಗ್ಗೆ ಗುಡ್ ನ್ಯೂಸ್ ನೀಡಲಿ ಎಂಬುದು ಅಭಿಮಾನಿಗಳ ಆಸೆ ಆಗಿದೆ. ಅದೇ ರೀತಿ, ಸಿನಿಮಾದಲ್ಲಿ ಕೂಡ ಅವರು ಮೊದಲಿನ ರೀತಿ ಸಕ್ರಿಯವಾಗಿ ತೊಡಗಿಕೊಳ್ಳಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.