ರನ್ಯಾ ರಾವ್ ಪ್ರಕರಣ, ಚಿನ್ನ, ನಗದು ಸೇರಿ 17.29 ಕೋಟಿ ಪತ್ತೆ, ಇಡಿ ತನಿಖೆ ಸಾಧ್ಯತೆ

|

Updated on: Mar 05, 2025 | 12:38 PM

Ranya Rao: ಕನ್ನಡದ ‘ಮಾಣಿಕ್ಯ’, ‘ಪಟಾಕಿ’ ಸೇರಿದಂತೆ ಇನ್ನೂ ಕೆಲ ಸಿನಿಮಾಗಳಲ್ಲಿ ನಟಿಸಿರುವ ಕನ್ನಡದ ನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ. ಪ್ರಕರಣದ ತನಿಖೆ ನಡೆಸಿದ ಡಿಆರ್​ಐ ಅಧಿಕಾರಿಗಳು ನಟಿಯ ಮನೆಯಿಂದ 17.29 ಕೋಟಿ ಮೌಲ್ಯದ ಚಿನ್ನ ಮತ್ತು ನಗದನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ರನ್ಯಾ ರಾವ್ ಪ್ರಕರಣ, ಚಿನ್ನ, ನಗದು ಸೇರಿ 17.29 ಕೋಟಿ ಪತ್ತೆ, ಇಡಿ ತನಿಖೆ ಸಾಧ್ಯತೆ
Ranya Rao
Follow us on

ನಟಿ ರನ್ಯಾ ರಾವ್ (Ranya Rao) ನಿನ್ನೆಯಷ್ಟೆ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ. 14.20 ಕೆಜಿ ಚಿನ್ನ ಕಳ್ಳಸಾಗಣೆ ಮಾಡಿರುವ ಆರೋಪ ನಟಿಯ ಮೇಲಿದೆ. ನಟಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದ್ದು, ಪ್ರಕರಣದ ತನಿಖೆ ಮುಂದುವರೆದಂತೆ ನಟಿಯ ಬಳಿಯಿಂದ ಚಿನ್ನ, ನಗದು ಸೇರಿ 17.29 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಇತಿಹಾಸದಲ್ಲಿಯೇ ಇಷ್ಟು ದೊಡ್ಡ ಮೊತ್ತದ ಚಿನ್ನ ವಶಪಡಿಸಿಕೊಂಡಿರುವುದು ಇದೇ ಮೊದಲು ಎನ್ನಲಾಗಿದೆ. ಡಿಆರ್​ಐ ಅಧಿಕಾರಿಗಳು ಮೊನ್ನೆ ರನ್ಯಾ ಬಂಧನ ಬಳಿಕ ಆಕೆಯ ಮನೆಯಲ್ಲಿ ಪರಿಶೀಲನೆ ನಡೆಸಿದ್ದರು. ಬೆಂಗಳೂರಿನ ಲ್ಯಾವೆಲ್ಲಿ ರಸ್ತೆಯ ನಂದವಾಣಿ ಮ್ಯಾನ್ಶನ್​ನ ಫ್ಲ್ಯಾಟ್​ನಲ್ಲಿ ರನ್ಯಾ ಮನೆ ಇದ್ದು, 5ಕ್ಕೂ ಹೆಚ್ಚು ಅಧಿಕಾರಿಗಳು ಫ್ಲ್ಯಾಟ್​ನಲ್ಲಿ ಪರಿಶೀಲನೆ ನಡೆಸಿದ್ದರು, ಬಳಿಕ 3 ದೊಡ್ಡ ಪೆಟ್ಟಿಗೆಯನ್ನು ನಗದು ಹಣ ಮತ್ತು ಚಿನ್ನವನ್ನು ಅಧಿಕಾರಿಗಳು ತೆಗೆದುಕೊಂಡು ಹೋಗಿದ್ದರು. ರನ್ಯಾ ಮನೆಯಲ್ಲಿ 2.06 ಕೆಜಿ ಚಿನ್ನ ಹಾಗೂ 2.67 ಕೋಟಿ ನಗದು ಹಣ ಪತ್ತೆಯಾಗಿದೆ.

ನಟಿ ರನ್ಯಾ ಕಳೆದ 15 ದಿನಗಳಲ್ಲಿ ನಾಲ್ಕು ಬಾರಿ ಗಲ್ಫ್ ದೇಶಕ್ಕೆ ಹೋಗಿ ಬಂದಿದ್ದರಂತೆ. ಪ್ರತಿ ಬಾರಿ ನಟಿ ರನ್ಯಾ ವಿಮಾನ ನಿಲ್ದಾಣಕ್ಕೆ ಹೋದಾಗಲೂ ಹಿರಿಯ ಅಧಿಕಾರಿಗಳು ಬಳಸುವ ಅಫಿಷಿಯಲ್ ಪ್ರೋಟೊಕಾಲ್ ಸರ್ವೀಸ್ ಅನ್ನು ಬಳಸಿ ಸೆಕ್ಯುರಿಟಿ ಚೆಕ್ ನಿಂದ ತಪ್ಪಿಸಿಕೊಳ್ಳುತ್ತಿದ್ದರಂತೆ. ಮತ್ತು ಪ್ರತಿಬಾರಿ ಚಿನ್ನ ಕಳ್ಳಸಾಗಣೆಗೆ ಹೋದಾಗಲು ಒಂದೇ ರೀತಿಯ ಬಟ್ಟೆ ಹಾಕಿಕೊಂಡು ಹೋಗುತ್ತಿದ್ದರಂತೆ. ಬೆಲ್ಟ್ ನ ಒಳಗೆ ಚಿನ್ನದ ಗಟ್ಟಿಗಳನ್ನು ಇಟ್ಟುಕೊಂಡು, ಆ ಬೆಲ್ಟು ಹೊರಗೆ ಕಾಣದಂತೆ ಬಟ್ಟೆ ಹಾಕಿಕೊಂಡು ಬರುತ್ತಿದ್ದರಂತೆ ರನ್ಯಾ. ಹಾಗಾಗಿ ಯಾರಿಗೂ ಸಹ ನಟಿಯ ಮೇಲೆ ಅನುಮಾನ ಬಂದಿರಲಿಲ್ಲ. ಆದರೆ ದೆಹಲಿಯಲ್ಲಿ ಕೂತಿದ್ದ ಡಿಆರ್’ಐ ಅಧಿಕಾರಿಗಳಿಗೆ ಅನುಮಾನ ಬಂದು ತಪಾಸಣೆ ನಡೆದಾಗ ನಟಿಯ ಕಳ್ಳತನ ಸಿಕ್ಕಿಹಾಕಿಕೊಂಡಿದೆ.

ಇದನ್ನೂ ಓದಿ
ಚಿನ್ನ ಕಳ್ಳಸಾಗಣೆ: ಮಾರ್ಚ್ 18ರವರೆಗೆ ನಟಿ ರನ್ಯಾ ರಾವ್​ಗೆ ನ್ಯಾಯಾಂಗ ಬಂಧನ
ಮಹೇಶ್ ಬಾಬು ಜೊತೆ ನಟಿಸಿದರೂ ಸಿಗದ ಅದೃಷ್ಟ; ಈಗ ಗೂಗಲ್​ನಲ್ಲಿ ಕೆಲಸ
‘ಮಾಣಿಕ್ಯ’ ಚಿತ್ರದ ನಟಿ ರನ್ಯಾ ಬಳಿ ಸಿಕ್ಕಿದ್ದು ಬರೋಬ್ಬರಿ 15 ಕೆಜಿ ಚಿನ್ನ
ಪುಡಿರೌಡಿ ತರ ಆಡೋದು ಬಿಡಿ, ಸಿಎಂ ಆದ್ರೆ ಕಷ್ಟ ಇದೆ’; ಡಿಕೆಶಿಗೆ ಕೌಂಟರ್

ಇದನ್ನೂ ಓದಿ:ಚಿನ್ನ ಕಳ್ಳಸಾಗಣೆ: ಮಾರ್ಚ್ 18ರವರೆಗೆ ನಟಿ ರನ್ಯಾ ರಾವ್​ಗೆ ನ್ಯಾಯಾಂಗ ಬಂಧನ

ನಟಿ ರನ್ಯಾ, ಕನ್ನಡದ ‘ಮಾಣಿಕ್ಯ’ ಮತ್ತು ‘ಪಟಾಕಿ’ ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮಿಳಿನ ಸಿನಿಮಾಗಳಲ್ಲಿಯೂ ರನ್ಯಾ ನಟಿಸಿದ್ದು, ರನ್ಯಾ ಬೆಂಗಳೂರಿನವರೇ ಆಗಿದ್ದಾರೆ. ರನ್ಯಾ ಅವರ ತಂದೆ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಯಾಗಿದ್ದು, ಅಧಿಕಾರಿಯ ಮೊದಲ ಹೆಂಡತಿಯ ಮೊದಲ ಪತಿಯ ಮಗಳಾಗಿದ್ದಾಳೆ ರನ್ಯಾ. ‘ಆಕೆ ನಮ್ಮ ಗೌರವ ಮಣ್ಣುಪಾಲು ಮಾಡಿದ್ದಾಳೆ, ಆಕೆ ಕೆಲ ತಿಂಗಳ ಹಿಂದೆ ಆರ್ಕಿಟೆಕ್ಟ್ ಒಬ್ಬರನ್ನು ವಿವಾಹವಾಗಿದ್ದು ಆಗಿನಿಂದಲೂ ನಮ್ಮೊಂದಿಗೆ ಸಂಬಂಧದಲ್ಲಿಲ್ಲ. ಆಕೆ ತಪ್ಪಿಗೆ ಶಿಕ್ಷೆ ಆಗಲಿ’ ಎಂದು ಅಧಿಕಾರಿ ಹೇಳಿರುವುದಾಗಿ ಕೆಲ ಮಾಧ್ಯಮಗಳು ವರದಿ ಮಾಡಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:23 am, Wed, 5 March 25