ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಬೇಡಿಕೆಯ ನಟಿ ಆಗಿದ್ದಾರೆ. ಕನ್ನಡದಿಂದ ಆರಂಭವಾದ ಅವರ ಸಿನಿಮಾ ಜರ್ನಿ ಬಾಲಿವುಡ್ಗೆ ಬಂದು ನಿಂತಿದೆ. ಅವರ ಬಗ್ಗೆ ಅನೇಕರು ಒಳ್ಳೆಯ ಭಾವನೆ ಇಟ್ಟುಕೊಂಡಿದ್ದಾರೆ. ಇನ್ನೂ ಕೆಲವರು ರಶ್ಮಿಕಾ ಅವರನ್ನು ಟೀಕಿಸುವುದರಲ್ಲಿ ಬ್ಯುಸಿ ಆಗಿದ್ದಾರೆ. ಆದರೆ, ರಶ್ಮಿಕಾ ಮಂದಣ್ಣ ಮಾತ್ರ ಟ್ರೋಲ್ಗಳಿಗೆ ಕಿವಿ ಕೊಡುವುದಿಲ್ಲ. ಅವರು ನೋವಾದರೂ ಅನೇಕ ಬಾರಿ ಮುಚ್ಚಿಟ್ಟುಕೊಳ್ಳುತ್ತಾರೆ. ಅವರು ಎಂದಿಗೂ ಫ್ಯಾನ್ಸ್ನ ಪ್ರೀತಿಸೋದನ್ನು ನಿಲ್ಲಿಸಿಲ್ಲ. ಈಗ ಅವರ ಹೊಸ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ರಶ್ಮಿಕಾ ಮಂದಣ್ಣ ಅವರು ಅಭಿಮಾನಿಗೆ ಪ್ರಪೋಸ್ ಮಾಡೋದನ್ನು ಹೇಳಿಕೊಟ್ಟಿದ್ದಾರೆ. ಈ ವಿಡಿಯೋ ಫ್ಯಾನ್ಸ್ ವಲಯದಲ್ಲಿ ವೈರಲ್ ಆಗುತ್ತಿದೆ.
ರಶ್ಮಿಕಾ ಮಂದಣ್ಣ ಅವರು ಕಾರ್ಯಕ್ರಮ ಒಂದಕ್ಕೆ ತೆರಳಿದ್ದರು. ಆಗ ಅಭಿಮಾನಿ ಓರ್ವ ರಶ್ಮಿಕಾ ಜತೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದ. ಈ ವೇಳೆ ಪಕ್ಕದಲ್ಲಿದ್ದ ಅಭಿಮಾನಿ ರಶ್ಮಿಕಾ ಜೊತೆ ಮಾತನಾಡಿದ್ದಾನೆ. ‘ಯಾವುದಾದರೂ ಹುಡುಗಿಗೆ ಪ್ರಪೋಸ್ ಮಾಡಬೇಕು ಎಂದರೆ ತೆಲುಗಿನಲ್ಲಿ ಏನು ಹೇಳಬೇಕು’ ಎಂದು ರಶ್ಮಿಕಾಗೆ ಅಭಿಮಾನಿ ಕೇಳಿದ್ದಾನೆ. ಇದಕ್ಕೆ ಉತ್ತರಿಸುವಾಗ ರಶ್ಮಿಕಾ ‘ಯಾರಾದರೂ ಇದ್ದಾರಾ?’ ಎಂದು ನಗುತ್ತಲೇ ಕೇಳಿದ್ದಾರೆ.
‘ಹೇಳಿ ಏನು ಹೇಳಬೇಕು’ ಎಂದು ಅಭಿಮಾನಿ ಮತ್ತೆ ದುಂಬಾಲು ಬಿದ್ದಿದ್ದಾನೆ. ಇದಕ್ಕೆ ಉತ್ತರಿಸಿದ ರಶ್ಮಿಕಾ ‘ನೀವು ಚೆನ್ನಾಗಿ ಕಾಣುತ್ತಿದ್ದೀರಿ. ಐ ಲವ್ ಯೂ ಎಂದು ಹೇಳಬೇಕು’ ಎಂಬುದಾಗಿ ಟಿಪ್ಸ್ ನೀಡಿದ್ದಾರೆ ರಶ್ಮಿಕಾ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಟ್ರೋಲ್ ಪೇಜ್ಗಳಲ್ಲಿ ಈ ವಿಡಿಯೋನ ಹಂಚಿಕೊಳ್ಳಲಾಗುತ್ತಿದೆ.
ರಶ್ಮಿಕಾ ಮಂದಣ್ಣ ಅವರಿಗೆ ಜನವರಿ ತಿಂಗಳು ವಿಶೇವಾಗಿತ್ತು. ಇದಕ್ಕೆ ಕಾರಣ ಅವರಿಗೆ ಡಬಲ್ ಯಶಸ್ಸು ಸಿಕ್ಕಿರೋದು. ಅವರ ನಟನೆಯ ತಮಿಳು ಸಿನಿಮಾ ‘ವಾರಿಸು’ ಜನವರಿ 11ಕ್ಕೆ ರಿಲೀಸ್ ಆಯಿತು. ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ 100 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತು. ಇದಾದ ಬಳಿಕ ನೆಟ್ಫ್ಲಿಕ್ಸ್ನಲ್ಲಿ ರಶ್ಮಿಕಾ ಮಂದಣ್ಣ ಅಭಿನಯದ ‘ಮಿಷನ್ ಮಜ್ನು’ ತೆರೆಗೆ ಬಂತು. ಈ ಚಿತ್ರ ಕೂಡ ಮೆಚ್ಚುಗೆ ಪಡೆಯಿತು.
ರಶ್ಮಿಕಾ ಮಂದಣ್ಣ ಅವರ ಕೈಯಲ್ಲಿ ಹಲವು ಸಿನಿಮಾಗಳು ಇವೆ. ‘ಪುಷ್ಪ 2’ ಚಿತ್ರದ ಕೆಲಸಗಳು ಇನ್ನಷ್ಟೇ ಆರಂಭ ಆಗಬೇಕಿದೆ. ಅಲ್ಲು ಅರ್ಜುನ್ ನಟನೆಯ ಈ ಚಿತ್ರಕ್ಕೆ ಸುಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಇದರ ಜತೆಗೆ ಬಾಲಿವುಡ್ನಲ್ಲಿ ‘ಅನಿಮಲ್’ ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ. ಇದರ ಜತೆಗೆ ಹೊಸ ಹೊಸ ಆಫರ್ಗಳು ಅವರನ್ನು ಹುಡುಕಿ ಬರುತ್ತಿವೆ.
ಶ್ರೀಲಕ್ಷ್ಮಿ ಎಚ್.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:58 pm, Fri, 3 February 23