ಮುಂಬೈನಲ್ಲಿ ಒಟ್ಟಾಗಿ ಪಾರ್ಟಿ ಮಾಡಿದ ರಶ್ಮಿಕಾ ಮಂದಣ್ಣ-ಸಿದ್ದಾರ್ಥ್ ಮಲ್ಹೋತ್ರ​; ಫೋಟೋ ವೈರಲ್

ಎಲ್ಲವೂ ಅಂದಕೊಂಡಂತೆ ನಡೆದಿದ್ದರೆ ರಶ್ಮಿಕಾ ಮಂದಣ್ಣ ನಟನೆಯ ಮೊದಲ ಸಿನಿಮಾ ಆಗಿ ‘ಮಿಷನ್ ಮಜ್ನು’ ರಿಲೀಸ್ ಆಗಬೇಕಿತ್ತು. ಆದರೆ, ಅವರ ನಟನೆಯ ‘ಗುಡ್​ಬೈ’ ಚಿತ್ರ ಮೊದಲು ರಿಲೀಸ್ ಆಯಿತು

ಮುಂಬೈನಲ್ಲಿ ಒಟ್ಟಾಗಿ ಪಾರ್ಟಿ ಮಾಡಿದ ರಶ್ಮಿಕಾ ಮಂದಣ್ಣ-ಸಿದ್ದಾರ್ಥ್ ಮಲ್ಹೋತ್ರ​; ಫೋಟೋ ವೈರಲ್
ಒಟ್ಟಾಗಿ ಪಾರ್ಟಿ ಮಾಡಿದ ಸಿದ್ದಾರ್ಥ್​-ರಶ್ಮಿಕಾ
Follow us
ರಾಜೇಶ್ ದುಗ್ಗುಮನೆ
|

Updated on:Jan 28, 2023 | 11:11 AM

ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ಸಿದ್ದಾರ್ಥ್​ ಮಲ್ಹೋತ್ರ ಅವರ ನಟನೆಯ ‘ಮಿಷನ್ ಮಜ್ನು’ ಸಿನಿಮಾ ಕಳೆದ ವಾರ ರಿಲೀಸ್ ಆಯಿತು. ಈ ಚಿತ್ರಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾದವು. ನೇರವಾಗಿ ಒಟಿಟಿಯಲ್ಲಿ ರಿಲೀಸ್ ಆದ ಈ ಚಿತ್ರವನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. ಈಗ ರಶ್ಮಿಕಾ ಮಂದಣ್ಣ, ಸಿದ್ದಾರ್ಥ್ ಮಲ್ಹೋತ್ರ (Sidharth Malhotra) ಆ್ಯಂಡ್ ಟೀಂ ಮುಂಬೈನಲ್ಲಿ ಪಾರ್ಟಿ ಮಾಡಿದೆ. ಈ ಮೂಲಕ ಸಿನಿಮಾ ಗೆಲುವಿನ ಖುಷಿಯನ್ನು ಆಚರಿಸಿದೆ.

ಎಲ್ಲವೂ ಅಂದಕೊಂಡಂತೆ ನಡೆದಿದ್ದರೆ ರಶ್ಮಿಕಾ ಮಂದಣ್ಣ ನಟನೆಯ ಮೊದಲ ಸಿನಿಮಾ ಆಗಿ ‘ಮಿಷನ್ ಮಜ್ನು’ ರಿಲೀಸ್ ಆಗಬೇಕಿತ್ತು. ಆದರೆ, ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ವಿಳಂಬ ಆದ ಕಾರಣ ಅವರ ನಟನೆಯ ‘ಗುಡ್​ಬೈ’ ಚಿತ್ರ ಮೊದಲು ರಿಲೀಸ್ ಆಯಿತು. ಆದರೆ, ಸಿನಿಮಾ ಯಶಸ್ಸು ಕಂಡಿಲ್ಲ. ಈಗ ಹಿಂದಿಯ ಅವರ ಎರಡನೇ ಸಿನಿಮಾ ‘ಮಿಷನ್​ ಮಜ್ನು’ ರಿಲೀಸ್ ಆಗಿ ಮೆಚ್ಚುಗೆ ಪಡೆದುಕೊಂಡಿದೆ. ವಿಮರ್ಶಕರು ಚಿತ್ರಕ್ಕೆ ಒಳ್ಳೆಯ ರೇಟಿಂಗ್ ಕೊಟ್ಟಿದ್ದಾರೆ. ಈ ಚಿತ್ರಕ್ಕೆ ಶಾಂತನು ಬಾಗ್ಚಿ ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ
Image
Mili Twitter Review: ಜಾನ್ವಿ ಕಪೂರ್​ ಅಭಿನಯಕ್ಕೆ ಕೇಳಿಬರ್ತಿದೆ ಮೆಚ್ಚುಗೆ; ‘ಮಿಲಿ’ ನೋಡಿ ವಿಮರ್ಶೆ ತಿಳಿಸಿದ ಸಿನಿಪ್ರಿಯರು
Image
Gandhada Gudi Twitter Review: ಹೇಗಿದೆ ‘ಗಂಧದ ಗುಡಿ’?; ಪ್ರೀಮಿಯರ್​ ಶೋ ಬಳಿಕ ಟ್ವಿಟರ್​ ಮೂಲಕ ವಿಮರ್ಶೆ ತಿಳಿಸಿದ ಫ್ಯಾನ್ಸ್​
Image
Ram Setu Twitter Review: ‘ರಾಮ್​ ಸೇತು’ ಟ್ವಿಟರ್​ ವಿಮರ್ಶೆ: ಅಕ್ಷಯ್​ ಕುಮಾರ್​ ಚಿತ್ರಕ್ಕೆ ಜನರಿಂದ ಸಿಕ್ತಾ ಪ್ರಶಂಸೆ?
Image
Goodbye Twitter Review: ರಶ್ಮಿಕಾ ಮೊದಲ ಹಿಂದಿ ಚಿತ್ರ ‘ಗುಡ್​ಬೈ’ ಹೇಗಿದೆ? ಜನರು ತಿಳಿಸಿದ ಟ್ವಿಟರ್ ವಿಮರ್ಶೆ ಇಲ್ಲಿದೆ ಓದಿ..

ರಶ್ಮಿಕಾ ಮಂದಣ್ಣ ಅವರು ಹೊಸಹೊಸ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ‘ಮಿಷನ್ ಮಜ್ನು’ ಚಿತ್ರದಲ್ಲಿ ಕಣ್ಣಿಲ್ಲದ ಪಾಕ್ ಯುವತಿಯ ಪಾತ್ರವನ್ನು ರಶ್ಮಿಕಾ ಮಾಡಿದ್ದಾರೆ. ಅವರ ನಟನೆಯನ್ನು ಅನೇಕರು ಮೆಚ್ಚಿಕೊಂಡಿದ್ದಾರೆ. ಈ ಖುಷಿಯಲ್ಲಿ ಎಲ್ಲರೂ ಮುಂಬೈನಲ್ಲಿ ಪಾರ್ಟಿ ಮಾಡಿದ್ದಾರೆ. ಪಾರ್ಟಿ ಒಳಗೆ ತೆರಳುವುದಕ್ಕೂ ಮುನ್ನ ರಶ್ಮಿಕಾ ಹಾಗೂ ಸಿದ್ದಾರ್ಥ್ ಮಲ್ಹೋತ್ರ ಪಾಪರಾಜಿಗಳತ್ತ ಕೈ ಬೀಸಿದ್ದಾರೆ.

View this post on Instagram

A post shared by yogen shah (@yogenshah_s)

ಸಿದ್ದಾರ್ಥ್ ಮಲ್ಹೋತ್ರ ಅವರು ಮದುವೆ ವಿಚಾರದಲ್ಲಿ ಸುದ್ದಿಯಲ್ಲಿದ್ದಾರೆ. ಶೀಘ್ರವೇ ಅವರ ಮದುವೆ ನೆರವೇರಲಿದೆ ಎನ್ನಲಾಗುತ್ತಿದೆ. ನಟಿ ಕಿಯಾರ ಅಡ್ವಾಣಿ ಜತೆ ಹಲವು ವರ್ಷಗಳಿಂದ ಅವರು ಡೇಟಿಂಗ್ ಮಾಡುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಅವರು ವಿಜಯ್ ದೇವರಕೊಂಡ ಜತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಆದರೆ, ಈ ವಿಚಾರ ಅಧಿಕೃತ ಆಗಿಲ್ಲ. ಸದ್ಯ ‘ಅನಿಮಲ್’ ಚಿತ್ರದ ಕೆಲಸಗಳಲ್ಲಿ ಅವರು ಬ್ಯುಸಿ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:01 am, Sat, 28 January 23

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ