‘ಶೂಟಿಂಗ್ ವೇಳೆ ಸಹ ಕಲಾವಿದರು Drugs ತೆಗೆದುಕೊಂಡಿರೋದನ್ನ ನೋಡಿದ್ದೇನೆ’

[lazy-load-videos-and-sticky-control id=”FndaW9jvql8″] ಬೆಂಗಳೂರು: ಈಗಿನ ಜನರೇಷನ್‌ನ ಕೆಲ ನಟರು ಡ್ರಗ್ಸ್ ತೆಗೆದುಕೊಳ್ಳುತ್ತಾರೆ ಎಂದು ಸ್ಯಾಂಡಲ್‌ವುಡ್ ನಟ ಆದಿ ಲೋಕೇಶ್ ಟಿವಿ 9 ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ. ಡ್ರಗ್ಸ್ ತಗೊಂಡ್ರೆ ಸ್ಮೆಲ್ ಬರಲ್ಲ. ಆದರೆ ಅವರದೇ ಲೋಕದಲ್ಲಿರುತ್ತಾರೆ. ಶೂಟಿಂಗ್ ವೇಳೆ ನನ್ನ ಸಹ ಕಲಾವಿದರು ಡ್ರಗ್ಸ್ ತೆಗೆದುಕೊಂಡಿರುವುದನ್ನು ನೋಡಿದ್ದೇನೆ. ಎಲ್ಲಾ ಕಡೆ ಎಲ್ಲ ಬಗೆಯ ವ್ಯವಹಾರಗಳೂ ನಡೆಯುತ್ತಿವೆ. ಅದಕ್ಕಾಗಿಯೇ ಕೆಲ ಜನರಿದ್ದಾರೆಂದು ನಟ ಆದಿ ಲೋಕೇಶ್ ಮಾಹಿತಿ ನೀಡಿದ್ದಾರೆ. ಡ್ರಗ್ಸ್ ಎಲ್ಲಿಂದ ಬರ್ತಿದೆ, ಯಾರು ತರುತ್ತಾರೋ ಪತ್ತೆಹಚ್ಚಲಿ. ಡ್ರಗ್ಸ್ […]

‘ಶೂಟಿಂಗ್ ವೇಳೆ ಸಹ ಕಲಾವಿದರು Drugs ತೆಗೆದುಕೊಂಡಿರೋದನ್ನ ನೋಡಿದ್ದೇನೆ’
Edited By:

Updated on: Aug 30, 2020 | 2:39 PM

[lazy-load-videos-and-sticky-control id=”FndaW9jvql8″]

ಬೆಂಗಳೂರು: ಈಗಿನ ಜನರೇಷನ್‌ನ ಕೆಲ ನಟರು ಡ್ರಗ್ಸ್ ತೆಗೆದುಕೊಳ್ಳುತ್ತಾರೆ ಎಂದು ಸ್ಯಾಂಡಲ್‌ವುಡ್ ನಟ ಆದಿ ಲೋಕೇಶ್ ಟಿವಿ 9 ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.

ಡ್ರಗ್ಸ್ ತಗೊಂಡ್ರೆ ಸ್ಮೆಲ್ ಬರಲ್ಲ. ಆದರೆ ಅವರದೇ ಲೋಕದಲ್ಲಿರುತ್ತಾರೆ. ಶೂಟಿಂಗ್ ವೇಳೆ ನನ್ನ ಸಹ ಕಲಾವಿದರು ಡ್ರಗ್ಸ್ ತೆಗೆದುಕೊಂಡಿರುವುದನ್ನು ನೋಡಿದ್ದೇನೆ. ಎಲ್ಲಾ ಕಡೆ ಎಲ್ಲ ಬಗೆಯ ವ್ಯವಹಾರಗಳೂ ನಡೆಯುತ್ತಿವೆ. ಅದಕ್ಕಾಗಿಯೇ ಕೆಲ ಜನರಿದ್ದಾರೆಂದು ನಟ ಆದಿ ಲೋಕೇಶ್ ಮಾಹಿತಿ ನೀಡಿದ್ದಾರೆ.

ಡ್ರಗ್ಸ್ ಎಲ್ಲಿಂದ ಬರ್ತಿದೆ, ಯಾರು ತರುತ್ತಾರೋ ಪತ್ತೆಹಚ್ಚಲಿ. ಡ್ರಗ್ಸ್ ಜಾಲ ಕೇವಲ ಸ್ಯಾಂಡಲ್‌ವುಡ್‌ನಲ್ಲಿ ಮಾತ್ರ ಇಲ್ಲ. ಹೀಗಾಗಿ ಚಿತ್ರರಂಗವನ್ನು ಟಾರ್ಗೆಟ್ ಮಾಡುವುದು ತಪ್ಪಾಗುತ್ತದೆ. ಜೊತೆಗೆ, ಕೆಲ ನಟರು ದಪ್ಪಗಾಗಲು ಅಥವಾ ಸಣ್ಣ ಆಗಲು ಸ್ಟೆರಾಯ್ಡ್ ತೆಗೆದುಕೊಳ್ತಾರೆ. ಇದು ಕೂಡ ಒಂದು ರೀತಿಯ ಡ್ರಗ್ಸ್. ಜಿಮ್ ಕೋಚ್‌ಗಳೇ ಸ್ಟೆರಾಯ್ಡ್ ತೆಗೆದುಕೊಳ್ಳುವಂತೆ ಹೇಳ್ತಾರೆ ಎಂದು ಹೇಳಿದ್ದಾರೆ.

2001ರಲ್ಲಿ ನಾನು ಚಿತ್ರರಂಗಕ್ಕೆ ಬಂದಿದ್ದು. ನಾನಂತೂ ಇವತ್ತಿನವರೆಗೂ ಯಾವ ರೇವ್ ಪಾರ್ಟಿಗೆ ಹೋಗಿಲ್ಲ ಎಂದು
ಸ್ಯಾಂಡಲ್‌ವುಡ್ ನಟ ಆದಿಲೋಕೇಶ್ ಟಿವಿ9 ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.

Published On - 1:06 pm, Sun, 30 August 20